ತಾಯಿ, ಮಗುವಿನ ಕ್ರಿಕೆಟ್​ ಆಟಕ್ಕೆ ಮನಸೋತ ಮಾಜಿ ಕ್ರಿಕೆಟಿಗ.!

ನವದೆಹಲಿ: ಭಾರತದಲ್ಲಿ ಕ್ರಿಕೆಟ್ ಕೇವಲ ಕ್ರೀಡೆಯಲ್ಲ, ಇದು ಧರ್ಮ, ವರ್ಗ, ಸ್ಥಾನಮಾನ ಅಥವಾ ಲಿಂಗವನ್ನು ಮೀರಿ ಎಲ್ಲರೂ ಪ್ರೀತಿಸುವ ಆಟವಾಗಿದೆ. ಈ ದೇಶದಲ್ಲಿ ಕ್ರಿಕೆಟ್​ ಆಟಗಾರರನ್ನು ಕೆಲವೊಂದಿಷ್ಟು ಅಭಿಮಾನಿಗಳು ದೇವರೆಂದೆ ಪರಿಗಣಿಸಿದ್ದಾರೆ. ಅಷ್ಟೇ ಅಲ್ಲದೇ, ಈ ಆಟವನ್ನ ಎಲ್ಲಾ ವರ್ಗದ ಜನರು ಪ್ರೀತಿಸುತ್ತಾರೆ.

ಹೌದು ಅಷ್ಟಕ್ಕೂ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಅವರು ಸೋಮವಾರ ಟ್ವೀಟರ್​ ಮೂಲಕ ಒಂದು ವಿಡಿಯೋ ಹರಿಬಿಟ್ಟಿದ್ದು, ಇದು ಕ್ರಿಕೆಟ್ ಆಟ ಎಷ್ಟು ಜನಪ್ರಿಯವಾಗಿದೆ ಎಂಬ ಕಥೆಯನ್ನು ಹೇಳುತ್ತದೆ. ಈ ವಿಡಿಯೋ 27 ಸೆಕೆಂಡುಗಳುಳ್ಳದಾಗಿದ್ದು, ತಾಯಿವೊಬ್ಬರು ಬೌಲಿಂಗ್ ಮಾಡುವುದನ್ನ, ಮಗು ಬ್ಯಾಟಿಂಗ್ ಮಾಡುವುದನ್ನು ಇಲ್ಲಿ ಕಾಣಬಹುದು. ಈ ಮಗುವಿಗೆ ಎರೆಡರಿಂದ ಮೂರು ವರ್ಷ ವಯಸ್ಸಿನದಾಗಿದ್ದು, ಪ್ಲಾಸ್ಟಿಕ್ ಚೆಂಡನ್ನು ರಸ್ತೆಯ ಬದಿಗೆ ಪಕ್ಕಕ್ಕೆ ಒಡೆಯುತ್ತಿರುವುದನ್ನ ಕಾಣಬಹುದು.

ಈ ವಿಡಿಯೋ ಪೊಸ್ಟ್​ ಮಾಡಿ ಮೊಹಮ್ಮದ್ ಕೈಫ್ ಅವರು ಶಿರ್ಷಿಕೆ ಸಹ ಕೊಟ್ಟಿದ್ದು, ಮದರ್ ಬೌಲಿಂಗ್ ಚೈಲ್ಡ್ ಬ್ಯಾಟಿಂಗ್. ಕೇವಲ ಒಂದು ಪದ ಬ್ಯೂಟಿಫುಲ್ ಎಂದು ಕೈಫ್ ಬರೆದಿದ್ದಾರೆ. ಈ ವಿಡಿಯೋ ಪೋಸ್ಟ್​ ಮಾಡಿದ ಕಲವೇ ಕ್ಷಣಗಳಲ್ಲಿ ಕ್ರಿಕೆಟ್ ಅಭಿಮಾನಿಗಳ ಹೃದಯವನ್ನು ಗೆದ್ದಿದೆ.

ಅಲ್ಲದೇ ಕ್ರಿಕೆಟ್​ ದೇವರು ಸಚಿನ್ ತೆಂಡೂಲ್ಕರ್​ ಅವರು ಇತ್ತೀಚೆಗೆ ತಮ್ಮ ಟ್ವಿಟ್ಟರ್​ನಲ್ಲಿ 7 ನೇ ತರಗತಿಯ ಹುಡುಗ ತಾನು ಅಂಗವಿಕಲ ಎಂಬುದನ್ನು ಲೆಕ್ಕಿಸದೇ ತಮ್ಮ ಸ್ನೇಹಿತರ ಜೊತೆಗೆ ಕ್ರಿಕೆಟ್ ಪಂದ್ಯವನ್ನ ಆಡಿ ರನ್​ ಕಲೆಹಾಕಿರುವುದರಲ್ಲಿ ಮಗ್ನವಾಗಿರುವ ವಿಡಿಯೋವನ್ನ ಹಂಚಿಕೊಂಡಿದ್ದರು.

Recommended For You

About the Author: user

Leave a Reply

Your email address will not be published. Required fields are marked *