Top

ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಸಚಿವ ಸಿ.ಸಿ.ಪಾಟೀಲ​ ..!

ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಸಚಿವ ಸಿ.ಸಿ.ಪಾಟೀಲ​ ..!
X

ಗದಗ: ದೇಶದಲ್ಲಿ ಹೊತ್ತಿ ಉರಿಯುತ್ತಿರುವ ಪೌರತ್ವ ಕಾಯ್ದೆ ತಿದ್ದುಪಡಿಯು ದೇಶದ ಕಾನೂನನ್ನು ಹಾಳು ಮಾಡುತ್ತಿದೆ. ಬೇರೆ ಪಕ್ಷದವರು ದೇಶದ ಸಾರ್ವಜನಿಕರಲ್ಲಿ ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಸಚಿವ ಸಿ. ಸಿ ಪಾಟೀಲ ಹೇಳಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ ಸಚಿವ ಸಿಸಿ ಪಾಟೀಲ. ಪೌರತ್ವ ಕಾಯ್ದೆ ಕುರಿತು ದಾಖಲೆ ಇಲ್ಲ ಅಂತಾ ಕಾನೂನು ತಿಳಿದವರೇ ಹೇಳಿದರೆ ಹೇಗೆ. ದಾರಿಯಲ್ಲಿ ಹೋಗುವವರು ಹೇಳಿದರೆ ತೊಂದರೆ ಇಲ್ಲಾ. ಕಾನೂನು ಮಾಡುವವರೆ ಹೇಳಿದ್ರೇ ಹೇಗೆ ಎಂದರು.

ಕುಳಿತುಕೊಂಡು ಕಾನೂನು ಓದಿ ಗೊತ್ತಾಗುತ್ತೇ ಪೌರತ್ವ ಕಾಯ್ದೆಯಿಂದ ಅಲ್ಪ ಸಂಖ್ಯಾತರಿಗೆ ತೊಂದರೆ ಆಗುವುದಿಲ್ಲ, ಇನ್ನೂ ರೂಲ್ಸ್ ಆಗಿಲ್ಲಾ, ಏನು ಗೊತ್ತಿಲ್ಲದೆ ಮಾತನಾಡೊದು ದುರುದ್ದೇಶ ಇದೆ ಎನ್ನುವುದು ಗೊತ್ತಾಗುತ್ತೇ ಎಂದು ಗದಗದಲ್ಲಿ ಗಣಿ ಮತ್ತು ವಿಜ್ಞಾನ ಇಲಾಖೆ ಸಚಿವ ಸಿಸಿ ಪಾಟೀಲ ಪೌರತ್ವ ಕಾಯ್ದೆ ತಿದ್ದುಪಡಿ ಬಗ್ಗೆ ವಿರೋಧ ಪಕ್ಷದನಾಯಕರಿಗೆ ತಿರುಗೇಟು ನೀಡಿದರು.

Next Story

RELATED STORIES