ಇಂದು ಇಂಡೋ-ಆಸೀಸ್​​ ಮೊದಲ ಏಕದಿನ ಕದನ: ವಿರಾಟ್​ ಗೆ ತಲೆನೋವಾದ ತಂಡದ ಸಂಯೋಜನೆ.!

ಮುಂಬೈ: ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನ 2-0 ಅಂತರದಿಂದ ಟೀಮ್ ಇಂಡಿಯಾ ವಶಪಡಿಸಿಕೊಂಡಿದೆ. ಈ ಬೆನ್ನಲ್ಲೇ ಇದೀಗ ಟೀಮ್ ಇಂಡಿಯಾ ಮತ್ತೊಂದು ಅಗ್ನಿ ಪರೀಕ್ಷೆಗೆ ಸಿದ್ಧವಾಗಿದೆ. ಗೆಲುವಿನ ಲಯದಲ್ಲಿರುವ ಟೀಮ್ ಇಂಡಿಯಾ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯಕ್ಕೆ ಸಜ್ಜಾಗಿದೆ. ಈ ಪಂದ್ಯಕ್ಕೆ ಮುಂಬೈನ ವಾಂಖೆಡೆ ಅಂಗಳ ಹೈವೋಲ್ಟೇಜ್ ಮ್ಯಾಚ್​ಗೆ ಸಾಕ್ಷಿಯಾಗಲಿದೆ.

ಇನ್ನು ವರ್ಷದ ಮೊದಲ ಸರಣಿ ಗೆದ್ದು ಶುಭಾರಂಭ ಮಾಡಿರುವ ಟೀಮ್ ಇಂಡಿಯಾಗೆ ಆಸ್ಟ್ರೇಲಿಯಾ ವಿರುದ್ಧದ ಸರಣಿ ಅಗ್ನಿಪರೀಕ್ಷೆಯಾಗಿದೆ. ಕಳೆದ ವರ್ಷ ಟೀಮ್ ಇಂಡಿಯಾ ವಿರುದ್ಧ ಭಾರತದ ನೆಲದಲ್ಲಿ ಏಕದಿನ ಸರಣಿ ಗೆದ್ದಿದ್ದ ಆಸ್ಟ್ರೇಲಿಯಾ, ಇದೀಗ 2020ರ ನೂತನ ವರ್ಷದ ಮೊದಲ ಏಕದಿನ ಸರಣಿ ಗೆಲುವಿನ ತವಕದಲ್ಲಿದೆ. ಆದರೆ, ಇತ್ತ ವಿರಾಟ್​ ಕೊಹ್ಲಿ ಟೀಮ್ ಇಂಡಿಯಾ ಕಳೆದ ವರ್ಷದ ಸೋಲಿನ ಸೇಡು ತೀರಿಸಿಕೊಳ್ಳವ ಲೆಕ್ಕಚಾರದಲ್ಲಿವೆ.

ಶ್ರೀಲಂಕಾ ಸರಣಿಯಲ್ಲಿ ವಿಶ್ರಾಂತಿ ಪಡೆದಿದ್ದ ಹಿಟ್​ಮ್ಯಾನ್ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧದ ಏಕದಿನ ತಂಡಕ್ಕೆ ವಾಪಸ್​ ಆಗಿದ್ದಾರೆ. ಹೀಗಾಗಿ ಟೀಮ್ ಇಂಡಿಯಾಕ್ಕೆ ಆನೆ ಬಲ ತಂದಂತಾಗಿದೆ. ಆದರೆ, ಟೀಮ್ ಇಂಡಿಯಾ ಓಪನಿಂಗ್​​ ಕಾಂಬಿನೇಷನ್ ಹೇಗಿರಲಿದೆ ಎನ್ನೋದು ಕುತೂಹಲ ಬಹಳ ಕೂತುಹಲ ಮೂಡಿಸಿದೆ. ರೋಹಿತ್ ಶರ್ಮಾ ಜೊತೆಗೆ ಓಪನರ್‌ ಸ್ಥಾನಕ್ಕಾಗಿ ಕೆ.ಎಲ್ ರಾಹುಲ್ ಹಾಗೂ ಶಿಖರ್ ಧವನ್ ನಡುವೆ ಪೈಪೋಟಿ ಏರ್ಪಟ್ಟಿದ್ದು, ಲಂಕಾ ವಿರುದ್ಧದ ಸರಣಿಯಲ್ಲಿ ಉಭಯ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ.

ಹೀಗಾಗಿ ಹಿಟ್​​ಮ್ಯಾನ್​ ರೋಹಿತ್ ಜೊತೆ ಯಾರು ಇನ್ನಿಂಗ್ಸ್ ಆರಂಭಿಸ್ತಾರೆ ಎನ್ನೋ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಇದೇ ಟೀಮ್ ಇಂಡಿಯಾ ಕ್ಯಾಪ್ಟನ್ ಅಂಡ್​ ಮ್ಯಾನೇಜ್​​ಮೆಂಟ್​ಗೆ ತಲೆನೋವಾಗಿ ಪರಿಣಮಿಸಿದೆ.

ಇನ್ನು ಉತ್ತಮ ಫಾರ್ಮ್​ನಲ್ಲಿರುವ ವಿರಾಟ್ ಕೊಹ್ಲಿ ಆಸೀಸ್​ ವಿರುದ್ಧ ಒನ್​ಡೌನ್​ ಬ್ಯಾಟ್ಸ್​ಮನ್​ ಆಗಿ ಕಣಕ್ಕಿಳಿಯೋದು ಪಕ್ಕ. ಆದರೆ, ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್, ರಿಷಬ್ ಪಂತ್ ಸ್ಥಾನ ಪಡೆಯೋದರಲ್ಲಿ ಅನುಮಾನ ಇಲ್ಲ. ಇನ್ನು, ಲಂಕಾ ವಿರುದ್ಧ ಅಂತಿಮ ಟಿ20 ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಮನೀಶ್ ಪಾಂಡೆ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವರೇ ಎಂಬುದು ಕುತೂಹಲವೆನಿಸಿದೆ. ಈ ನಿಟ್ಟಿನಲ್ಲಿ ಕೇದರ್ ಜಾಧವ್ ಹಾಗೂ ಮನೀಶ್ ಪಾಂಡೆ ನಡುವೆ ನಿಕಟ ಪೈಪೋಟಿ ಏರ್ಪಟ್ಟಿದೆ. ಅಲ್ಲದೆ ಆಲ್‌ರೌಂಡರ್ ಸ್ಥಾನದಲ್ಲಿ ಶಿವಂ ದುಬೆ ಹಾಗೂ ರವೀಂದ್ರ ಜಡೇಜಾ ಈ ಇಬ್ಬರಲ್ಲಿ ಯಾರಿಗೆ ವಿರಾಟ್​ ಮಣೆಹಾಕ್ತಾರೆ ಎನ್ನೋ ಪ್ರಶ್ನೆ ಕೂಡ ಹುಟ್ಟಾಕಿದೆ.

ಅಂತೆಯೇ, ಯಾರ್ಕರ್​ ಕಿಂಗ್​ ಜಸ್​​ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ನೇತೃತ್ವದ ಟೀಮ್ ಇಂಡಿಯಾ ಬೌಲಿಂಗ್​ ಡಿಪಾಟ್ಮೆಂಟ್​ ಬಲಿಷ್ಠವಾಗಿದೆ. ಆದರೆ, ಕಳೆದ ಲಂಕಾ ಸರಣಿಯಲ್ಲಿ ಅದ್ಬುತ ಪ್ರದರ್ಶನ ನೀಡಿದ್ದ ನವದೀಪ್ ಸೈನಿ ಹಾಗೂ ಶಾರ್ದೂಲ್ ಠಾಕೂರ್ ನಡುವೆ ಪೈಪೋಟಿ ಏರ್ಪಟ್ಟಿದೆ. ಶಾರ್ದೂಲ್ ಬ್ಯಾಟಿಂಗ್​ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಅನುಭವಿ ಶಮಿ, ಬೂಮ್ರಾ ಜೊತೆ ಯಾರು ಚೆಂಡು ಹಂಚಿಕೊಳ್ಳುತ್ತಾರೆ ಕಾದುನೋಡಬೇಕಿದ್ದು, ಇನ್ನು ಕುಲ್ಚಾ ಖ್ಯಾತಿಯ ರಿಸ್ಟ್ ಸ್ಪಿನ್ನರ್‌ಗಳಾದ ಚಹಲ್ ಹಾಗೂ ಕುಲ್‌ದೀಪ್ ಯಾದವ್ ಇಬ್ಬರಲ್ಲಿ ಯಾರು ಅವಕಾಶ ಗಿಟ್ಟಿಸುತ್ತಾರೆ ಎನ್ನೋದು ಕುತೂಹಲವೆನಿಸಿದೆ. ಹೀಗಾಗಿ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್​ ಕೊಹ್ಲಿಗೆ ತಂಡದ ಸಂಯೋಜನೆ ತಲೆನೋವಾಗಿ ಪರಿಣಮಿಸಿದೆ.

ಏಕದಿನ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳು 136 ಬಾರಿ ಮುಖಾಮುಖಿ ಆಗಿವೆ. ಈ ಪೈಕಿ ಟೀಮ್ ಇಂಡಿಯಾ 50 ಪಂದ್ಯಗಳಲ್ಲಿ ಗೆದ್ದು ಬೀಗಿದ್ರೆ. 76 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಗೆಲುವಿನ ಸಿಹಿ ಕಂಡಿದೆ. ಇನ್ನುಳಿದ 10 ಪಂದ್ಯಗಳು ಫಲಿತಾಂಶ ಇಲ್ಲದೆ ಅಂತ್ಯಗೊಂಡಿವೆ

ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್​ ಸರಣಿ ಗೆದ್ದು ಬೀಗುತ್ತಿರುವ ಆಸ್ಟ್ರೇಲಿಯಾ, ಇದೀಗ ಟೀಮ್ ಇಂಡಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಮೇಲೆ ಕಣ್ಣಿಟ್ಟಿದೆ. 2019ರ ಏಕದಿನ ವಿಶ್ವಕಪ್​​ ಬಳಿಕ ಏಕದಿನ ಸರಣಿ ಆಡದ ಆ್ಯರೊನ್‌ ಫಿಂಚ್‌ ನೇತೃತ್ವದ ಆಸ್ಟ್ರೇಲಿಯಾ ಶುಭಾರಂಭ ಮಾಡುವ ಹುಮ್ಮಸ್ಸಿನಲ್ಲಿದೆ. ಡೇವಿಡ್​ ವಾರ್ನರ್, ಸ್ಟೀವ್​ ಸ್ಮಿತ್ ಆರೋನ್​ ಫಿಂಚ್​ ಭಾರತದ ಪಿಚ್​ಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಅಲ್ಲದೆ ಅಸ್ಟನ್ ಟರ್ನರ್​, ಡಾರ್ಸಿ ಶಾರ್ಟ್‌, ಅಲೆಕ್ಸ್‌ ಕೇರಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಟೀಮ್ ಇಂಡಿಯಾದ ಬೌಲಿಂಗ್ ಪಡೆಗೆ ಹೋಲಿಸಿದ್ರೆ. ಪ್ಯಾಟ್‌ ಕಮಿನ್ಸ್‌, ಜೋಶ್‌ ಹೇಜಲ್‌ವುಡ್‌, ಮಿಚೆಲ್‌ ಸ್ಟಾರ್ಕ್‌, ಆಡಂ ಜಂಪಾ ನೇತೃತ್ವದ ಬೌಲಿಂಗ್ ಡಿಪಾರ್ಟ್ಮೆಂಟ್​ ಬಲಿಷ್ಠವಾಗಿದೆ.

ಮುಂಬೈನ ವಾಖೆಂಡೆ ಪಿಚ್ ಸ್ಪಿನ್‌ ಬೌಲರ್‌ಗಳಿಗೆ ನೆರವಾಗಲಿದೆ ಎಂದು ಹೇಳಲಾಗಿದ್ದು, ಬ್ಯಾಟ್ಸ್‌ಮನ್‌ಗಳಿಗೆ ಸ್ವರ್ಗ ಹೀಗಾಗಿ ಚೇಸಿಂಗ್ ಮಾಡುವ ತಂಡ ಗೆಲ್ಲೋದು ಸಾಧ್ಯತೆ ಇದೆ ಎನ್ನಲಾಗ್ತಿದೆ. ಹೀಗಾಗಿ ಈ ಪಂದ್ಯದಲ್ಲಿ ಟಾಸ್ ಪ್ರಮುಖ ಪಾತ್ರವಹಸುತ್ತದೆ ಎನ್ನಲಾಗಿದೆ. ಉಭಯ ತಂಡಗಳು ಘಟಾನುಘಟಿ ಆಟಗಾರರನ್ನ ಹೊಂದಿದ್ದು, ವಾಖೆಂಡೆಯಲ್ಲಿ ಯಾರು ವಿಜಯದ ಪತಾಕೆ ಹಾರಿಸ್ತಾರೆ ಎನ್ನೋದನ್ನ ಕಾದು ನೋಬೇಕಿದೆ.

Recommended For You

About the Author: user

Leave a Reply

Your email address will not be published. Required fields are marked *