‘ಸಲಹೆಗೆ ತಲೆ ಬಾಗುತ್ತೇನೆ ನೀವು ನನಗೆ ಬೆದರಿಸಬೇಡಿ ಎಂದು ಸ್ವಾಮೀಜಿ ವಿರುದ್ಧ ಬಿಎಸ್​ವೈ ಗರಂ

ದಾವಣಗೆರೆ: ಪಂಚಮಸಾಲಿ ಸಮಾಜದ ಮೂವರಿಗೆ ಸಚಿವ ಸ್ಥಾನ ನೀಡಿ ಎಂದು ಬೇಡಿಕೆ ಇಟ್ಟ ವಚನಾನಂದ ಸ್ವಾಮೀಜಿ ಅವರಿಗೆ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.

ಹರಿಹರದಲ್ಲಿ ನಡೆದ ಹರ ಜಾತ್ರೆ ವೇಳೆ ಪಂಚಮಸಾಲಿ ಪೀಠದಲ್ಲಿ ವಚನಾನಂದ ಸ್ವಾಮೀಜಿ ಭಾಷಣಕ್ಕೆ ಸಿಎಂ ವಿರೋಧ ವ್ಯಕ್ತಪಡಿಸಿದ್ದು, ಮುರುಗೇಶ್​ ನಿರಾಣಿಗೆ ಸಚಿವ ಸ್ಥಾನ ನೀಡಲೇಬೇಕು, ನೀಡದೆ ಹೋದರೆ ಸಮಾಜದಿಂದ ವಿರೋಧ ವ್ಯಕ್ತವಾಗುತ್ತೆ ಎಂದು ಸ್ವಾಮೀಜಿ ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಸಿಎಂ ಬಿಎಸ್​ ಯಡಿಯೂರಪ್ಪ ಅವರು, ನೀವು ನನಗೆ ಬೆದರಿಸಬೇಡಿ ಎಂದು ಸ್ವಾಮೀಜಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲದೇ, ನನ್ನ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. 17 ಜನ ರಾಜೀನಾಮೆ ನೀಡದೇ ಇದ್ದರೆ ನಾನು ಸಿಎಂ ಆಗ್ತಾ ಇರಲಿಲ್ಲ,ನನ್ನ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. ಸ್ವಾಮೀಜಿಗಳು ಏನು ಬೇಕಾದರೂ ಸಲಹೆ ನೀಡಿ, ನಾನು ಬಂದು ಚರ್ಚೆ ಮಾಡುತ್ತೇನೆ. ಸಲಹೆಗೆ ತಲೆ ಬಾಗುತ್ತೇನೆ ಎಂದರು.

ಸದ್ಯ ನಾನು ಕುರ್ಚಿಗೆ ಅಂಟಿಕೊಂಡು ಕುಳಿತಿಲ್ಲ, ಪರಿಸ್ಥಿತಿ ಸರಿ ಇಲ್ಲ, ಎಲ್ಲಾ ಸ್ವಾಮೀಜಿ ಒಟ್ಟಿಗೆ ಸೇರಿಸುತ್ತೇನೆ ಸಲಹೆ ನೀಡಿ ಎಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ಬೇಸರದಿಂದಲೇ ನುಡಿದರು.

Recommended For You

About the Author: user

Leave a Reply

Your email address will not be published. Required fields are marked *