ಜಮ್ಮು-ಕಾಶ್ಮೀರದಲ್ಲಿ ಭಾರೀ ಹಿಮಪಾತ…!

ಜಮ್ಮು-ಕಾಶ್ಮೀರ:  ಕುಪ್ವಾರ ಜಿಲ್ಲೆಯ ಮಾಚಿಲ್ ಸೆಕ್ಟರ್ ಸಮೀಪ ಸಂಭವಿಸಿದ ಭಾರೀ ಹಿಮಕುಸಿತದಲ್ಲಿ ನಾಲ್ವರು ಯೋಧರು ಹಾಗೂ ಐವರು ನಾಗರಿಕರು ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಯೋಧರೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾತ್ರಿ 1 ಗಂಟೆ ಸುಮಾರಿಗೆ ಸೇನಾ ಶಿಬಿರದ ಮೇಲೆ ಹಿಮದ ರಾಶಿ ಕುಸಿದಿದೆ. ಮತ್ತೊಂದೆಡೆ, ನೌಗಾಮ್ ಸೆಕ್ಟರ್‌ನಲ್ಲಿ ಸಂಭವಿಸಿದ ಹಿಮಕುಸಿತದಲ್ಲಿ ಬಿಎಸ್‌ಎಫ್ ಯೋಧ ಹುತಾತ್ಮರಾಗಿದ್ದು, ಆರು ಯೋಧರನ್ನು ರಕ್ಷಿಸಲಾಗಿದೆ. ಗಡಿನಿಯಂತ್ರಣ ರೇಖೆ ಬಳಿ ಗಡಿ ಭದ್ರತಾ ಪಡೆ ತೆರಳಿದ್ದು, ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ. ಮತ್ತೊಂದು ಘಟನೆಯಲ್ಲಿ ಗಂದೆರ್ಬಾಲ್ ಜಿಲ್ಲೆಯ ಸೋನ್ ಮಾರ್ಗ್ ನಲ್ಲಿ ಭಾರೀ ಪ್ರಮಾಣದ ಹಿಮ ಕುಸಿತದಲ್ಲಿ ಒಂಬತ್ತು ಮಂದಿ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿ ನಾಲ್ವರನ್ನು ರಕ್ಷಿಸಲಾಗಿದೆ.

ಐವರು ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಕಾಶ್ಮೀರದ ಹಲವಾರು ಪ್ರದೇಶಗಳಲ್ಲಿ ಕಳೆದ 48 ಗಂಟೆಗಳಲ್ಲಿ ಭಾರೀ ಪ್ರಮಾಣದ ಹಿಮಕುಸಿತ ಸಂಭವಿಸಿದ್ದು, ಹಲವಾರು ಯೋಧರನ್ನು ರಕ್ಷಿಸಲಾಗಿದೆ. ಬಾರಾಮುಲ್ಲಾ ಜಿಲ್ಲೆಯಲ್ಲಿ ಇಬ್ಬರು ಬಾಲಕಿಯರು ಹಿಮಕುಸಿತದೊಳಕ್ಕೆ ಸಿಲುಕಿದ್ದು, ಸ್ಥಳೀಯರು ಇಬ್ಬರನ್ನು ರಕ್ಷಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

 

Recommended For You

About the Author: user

Leave a Reply

Your email address will not be published. Required fields are marked *