Top

ಫಿಕ್ಸ್ ಆಯ್ತು ಚಂದನ್- ಗೊಂಬೆ ಮದುವೆ: ಎಲ್ಲಿ, ಯಾವಾಗ ಗೊತ್ತಾ..?

ಫಿಕ್ಸ್ ಆಯ್ತು ಚಂದನ್- ಗೊಂಬೆ ಮದುವೆ: ಎಲ್ಲಿ, ಯಾವಾಗ ಗೊತ್ತಾ..?
X

ರ್ಯಾಪರ್ ಚಂದನ್ ಶೆಟ್ಟಿ ಬಾಳಿಗೆ ಗೊಂಬೆ ನಿವೇದಿತಾ ಗೌಡ ಬರೋ ಟೈಮ್ ಸನ್ನಿಹಿತವಾಗಿದೆ. ಎಂಗೇಜ್ಮೆಂಟ್​ಗೂ ಮೊದ್ಲೇ ಅನ್ ಅಫಿಶಿಯಲ್ ಆಗಿ ಎಂಗೇಜ್ ಆಗಿ ಸಂಚಲನ ಸೃಷ್ಟಿಸಿದ್ದ ಬಿಗ್ ಬಾಸ್ ಜೋಡಿ, ಇದೀಗ ಕಲ್ಯಾಣೋತ್ಸವಕ್ಕೆ ಸಜ್ಜಾಗಿದೆ.

ರ್ಯಾಪರ್ ಚಂದನ್ ಶೆಟ್ಟಿಗೆ ಕೂಡಿಬಂತು ಕಂಕಣಭಾಗ್ಯ..!

ನೆಚ್ಚಿನ ಗೆಳತಿ ನಿವೇದಿತಾ ಕೈ ಹಿಡಿಯಲು ಚಂದನ್ ಕಾತರ

ಚಂದನ್ ಶೆಟ್ಟಿ.. ಕನ್ನಡದ ರ್ಯಾಪರ್ ಅಂತ್ಲೇ ಸುದ್ದಿಯಾಗಿದ್ದ ಬಹುಮುಖ ಪ್ರತಿಭೆ. ಬಿಗ್​ಬಾಸ್ ಸೀಸನ್- 5ರಲ್ಲಿ ಲೈಮ್​ಲೈಟ್​ಗೆ ಬಂದವ್ರು. ಧ್ರುವ ಸರ್ಜಾ ಆತ್ಮೀಯ ಗೆಳೆಯರಾದ್ರೂ, ಸ್ವಂತ ಟ್ಯಾಲೆಂಟ್​ನಿಂದ ಮೇಲೆ ಬರೋ ಹಠವಾದಿ ಕನಸುಗಾರ. ಅದೆಷ್ಟೋ ಮಂದಿ ಅಪ್​ಕಮಿಂಗ್ ರ್ಯಾಪರ್ಸ್​ಗೆ ರೋಲ್ ಮಾಡೆಲ್.

ಅದೇ ಬಿಗ್ ಬಾಸ್​ ಸೀಸನ್ 5ರಲ್ಲಿ ಎಮರ್ಜ್ ಆದ ಮತ್ತೊಬ್ಬ ಸೆಲೆಬ್ರಿಟಿ ಮೈಸೂರಿನ ಗೊಂಬೆ ನಿವೇದಿತಾ ಗೌಡ. ಇವ್ರನ್ನ ನಿವೇದಿತಾ ಅಂತ ಕರೆಯೋದಕ್ಕಿಂತ ಗೊಂಬೆ ಅಂತ ಕರೆಯೋದೇ ಹೆಚ್ಚು. ಅದಿಕ್ಕೆ ಕಾರಣ, ಮತ್ತದೇ ರ್ಯಾಪರ್ ಚಂದನ್ ಶೆಟ್ಟಿ. ಬಿಗ್ ಮನೆಯಲ್ಲಿದ್ದಾಗ್ಲೇ ಒಬ್ಬರನ್ನೊಬ್ಬರು ಅರ್ಥೈಸಿಕೊಂಡು, ಒಳ್ಳೆ ಸ್ನೇಹಿತರಾಗಿದ್ರು ಚಂದನ್- ನಿವೇದಿತಾ. ಮಿಗಿಲಾಗಿ ನಿವೇದಿತಾಗೆ ಗೊಂಬೆ ಅನ್ನೋ ಸಾಂಗ್ ಮಾಡಿ, ಆಕೆಯನ್ನ ಅಕ್ಷರಶಃ ಗೊಂಬೆ ಮಾಡಿದ್ದೇ ಚಂದನ್.

ಅದಾದ ಬಳಿಕ ಇಬ್ಬರ ಮಧ್ಯೆ ಪ್ರೇಮಾಂಕುರಿಸಿದ್ದು ಜಗಜ್ಜಾಹಿರ ಆಗ್ತಿದ್ದಂತೆ ಕದ್ದು ಮುಚ್ಚಿ ಭೇಟಿ ಮಾಡಲು ಶುರುವಿಟ್ಟರು. ಬೆಕ್ಕು ಕಣ್ಮುಚ್ಚಿ ಹಾಲು ಕುಡಿದ್ರೆ ಪ್ರಪಂಚಕ್ಕೆ ಗೊತ್ತಾಗಲ್ಲವೇ..? ಅನ್ನೋದನ್ನ ಅರಿತ ಇವ್ರು ರಾಜಾರೋಷವಾಗಿ ಸಾರ್ವಜನಿಕವಾಗಿಯೇ ಒಟ್ಟೊಟ್ಟಿಗೆ ಓಡಾಡಲು ಆರಂಭಿಸಿದ್ದರು. ಕಳೆದ ದಸರಾ ಹಬ್ಬದಲ್ಲಿ ಸಾರ್ವಜನಿಕ ವೇದಿಕೆಯಲ್ಲೇ ನಿವಿ ವಿಲ್ ಯು ಮ್ಯಾರಿ ಮೀ.? ಅಂತ ಚಂದನ್ ಉಂಗುರ ತೊಡಿಸಿ, ಬಹುದೊಡ್ಡ ಕಾಂಟ್ರವರ್ಸಿಗೂ ತುತ್ತಾಗಿದ್ರು.

ಅಷ್ಟೆಲ್ಲಾ ಆದ್ಮೇಲೆ, ಎರಡೂ ಕುಟುಂಬಗಳು ಸುಮ್ಮನಿರುತ್ತವೆಯೇ..? ಖಂಡಿತಾ ಇಲ್ಲ. ಗುರುಹಿರಿಯರ ಸಮ್ಮುಖದಲ್ಲಿ ಮೈಸೂರಿನಲ್ಲಿ ಇಬ್ಬರ ನಿಶ್ಚಿತಾರ್ಥ ಮಾಡಿ ಮುಗಿಸಿದ್ರು. ಕುಟುಂಬಗಳ ಈ ನಿರ್ಧಾರಕ್ಕೆ ಚಂದನ್- ನಿವೇದಿತಾ ಇಬ್ಬರೂ ದಿಲ್​ಖುಷ್ ಆಗಿದ್ರು. ಅದಾದ ಇತ್ತೀಚೆಗೆ ನಿವೇದಿತಾ ಏರ್​ಪೋರ್ಟ್​ನಲ್ಲಿ ಕೆಲಸಕ್ಕೆ ಸೇರಿದ್ಮೇಲೆ ಇವ್ರು ಮತ್ತೆ ಸುದ್ದಿಯಾದ್ರು.

ಪದವಿ ಮುಗಿಸಿ, ಏರ್​ಪೋರ್ಟ್​ನಲ್ಲಿ ಕೆಲಸ ಆರಂಭಿಸಬೇಕು ಅನ್ನೋದು ನಿವೇದಿತಾರ ಕನಸಾಗಿತ್ತಂತೆ. ಅದ್ರಂತೆ ಭಾವಿ ಪತಿ ಚಂದನ್ ಒಪ್ಪಿಗೆಯ ಮೇರೆಗೆ ಡ್ಯೂಟಿ ರಿಪೋರ್ಟ್​ ಮಾಡ್ಕೊಂಡಿದ್ರು ನಿವೇದಿತಾ. ಇದೀಗ ಇವ್ರ ಮದ್ವೆ ಡೇಟ್ ಫೈನಲ್ ಆಗಿದ್ದು, ಚಂದನ್- ನಿವೇದಿತಾ ಕಲ್ಯಾಣೋತ್ಸವದ ತಯಾರಿಗಳು ಭರದಿಂದ ಸಾಗ್ತಿವೆ.

ಫೆಬ್ರವರಿ 25 & 26ಕ್ಕೆ ಚಂದನ್- ನಿವೇದಿತಾ ಕಲ್ಯಾಣ

ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್​ನಲ್ಲಿ ಅದ್ಧೂರಿ ಮದ್ವೆ

ಒಕ್ಕಲಿಗ ಸಂಪ್ರದಾಯದಂತೆ ನಿವೇದಿತಾ ಕಲ್ಯಾಣೋತ್ಸವ

ಅರಮನೆ ನಗರಿಯಲ್ಲಿ ಬೀಡುಬಿಡಲಿದೆ ಇಡೀ ಚಂದನವನ

ರ್ಯಾಪರ್ ಚಂದನ್ ಶೆಟ್ಟಿ ಮನೆಗೆ ಮಹಾಲಕ್ಷ್ಮೀಯಾಗಿ ನಿವೇದಿತಾ ಬರೋ ಸಮಯ ಬಂದಾಗಿದೆ. ಇದೇ ಫೆಬ್ರವರಿ 25 & 26ರಂದು ಚಂದನ್- ನಿವೇದಿತಾ ಗೌಡ ಸಪ್ತಪದಿ ತುಳಿಯಲಿದ್ದಾರೆ. ಅರಮನೆ ನಗರಿ ಮೈಸೂರಿನಲ್ಲೇ ಇವ್ರ ಕಲ್ಯಾಣೋತ್ಸವ ನಡೆಯಲಿದ್ದು, ಇಡೀ ಚಿತ್ರರಂಗ ಇವ್ರ ಶುಭಕಾರ್ಯಕ್ಕೆ ಸಾಕ್ಷಿಯಾಗಲಿದೆ ಎನ್ನಲಾಗ್ತಿದೆ.

ನಿವೇದಿತಾ ಕುಟುಂಬದ ಮೂಲಗಳ ಪ್ರಕಾರ ಇವರ ವಿವಾಹ ಮಹೋತ್ಸವ, ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್​ನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಒಕ್ಕಲಿಗ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಚಂದನ್- ನಿವೇದಿತಾ ಕಲ್ಯಾಣೋತ್ಸವ ನಡೆಯಲಿದ್ದು, ಫೆಬ್ರವರಿ 1ರಿಂದ ವಿವಾಹ ಮಹೋತ್ಸವದ ಆಮಂತ್ರಣ ಪತ್ರಿಕೆ ಹಂಚಲಿದ್ದಾರೆ ಎನ್ನಲಾಗಿದೆ. ಅದೇನೇ ಇರಲಿ, ಒಳ್ಳೊಳ್ಳೆ ಸಾಂಗ್ಸ್ ಮೂಲಕ ಕನ್ನಡಿಗರಿಗೆ ಸಖತ್ ಮನರಂಜನೆ ಕೊಡ್ತಿರೋ ಚಂದನ್, ಗೃಹಸ್ಥಾಶ್ರಮಕ್ಕೆ ಕಾಲಿಡ್ತಿರೋದು ಖುಷಿಯ ವಿಚಾರ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಹೆಡ್, ಟಿವಿ5

Next Story

RELATED STORIES