‘ನನ್ನ ಮಗ ದರ್ಶನ್ ಜೊತೆಗಿದ್ರೆ ಯಾವಾಗ್ಲೂ ಸಕ್ಸಸ್ಸೇ..’

ಇವ್ರು ಈ ಕಾಲದ ಮಾಡ್ರನ್ ಅಮ್ಮ ಮಗ. ಇಬ್ಬರನ್ನು ಒಟ್ಟಿಗೆ ನೋಡಲು ಮುಗಿಬಿಳುತ್ತೆ ಅಭಿಮಾನಿ ಬಳಗ. ಇವರು ಮಂಡ್ಯದಿಂದ ಇಂಡಿಯಾ ತನಕ ಸುದ್ದಿ ಮಾಡಿದವರು​. ಒಬ್ಬರನ್ನ ಬಿಟ್ಟ್​​ ಒಬ್ಬರು ಎಂದಿಗೂ ಇರಲಾರರು. ಇಂತಿಪ್ಪ ಅಮ್ಮ ಮಗ ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡು ಮಮತೆಯ ಅಭಿಮಾನದ ಮಾತುಗಳನ್ನು ಆಡಿದ್ದಾರೆ.

ಇವ್ರು ಸ್ಯಾಂಡಲ್​​ವುಡ್​​ನ ಸ್ಟಾರ್ ಅಮ್ಮ ಮಗ
ಅಮ್ಮನ ಸಕ್ಸಸ್​​ಗೆ ಸದಾ ಮಗ ಹೊರುವ ನೊಗ
ಇದು ಮಂಡ್ಯದಿಂದ ಇಂಡಿಯಾ ತನಕ ಸದ್ದು ಮಾಡಿರುವ ಅಮ್ಮ ಮಗನ ಸ್ಟೋರಿ. ಅಮ್ಮ ಮಾಡುವ ಎಲ್ಲಾ ಶುಭಕಾರ್ಯಗಳಲ್ಲಿಯೂ ಮಗನಿರಲೇಬೇಕು. ಮಗ ಮಾಡುವ ಎಲ್ಲಾ ಶುಭಕಾರ್ಯಗಳಲ್ಲಿಯೂ ಅಮ್ಮನಿರಲೇ ಬೇಕು. ಕೆಲದಿನಗಳ ಹಿಂದೆ ಮಗನ ಕನಸಿನ ಸಿನಿಮಾಕ್ಕೆ ಅಮ್ಮ ಕ್ಯಾಮೆರಾ ಚಾಲನೆ ಮಾಡಿದ್ರು. ಈಗ ಅಮ್ಮನ ಸಿನಿಮಾದ ಟ್ರೈಲರ್ ಲಾಂಚ್ ಮಾಡಿದ್ದಾರೆ ಮಗ. ಹಾಗಾದ್ರೆ ಯಾರು ಆ ಸ್ಟಾರ್​​​​ ಅಮ್ಮ ಮತ್ತು ಸ್ಟಾರ್​​​ ಮಗ ಅನ್ನೋ ಪ್ರಶ್ನೆಗೆ ಸರಿ ಉತ್ತರ ಸುಮಲತಾ ಅಂಬರೀಶ್, ದರ್ಶನ್ ತೂಗುದೀಪ.

ನನ್ನ ಮಗ ದರ್ಶನ್ ಜೊತೆಗಿದ್ರೆ ಯಾವಾಗ್ಲೂ ಸಕ್ಸಸ್ಸೇ..!
ಸುಮಕ್ಕ-ದಚ್ಚು ಬರೆದ್ರು ಅಮ್ಮ-ಮಗನ ಹೊಸ ಭಾಷ್ಯ
ಅದು ಕಳೆದ ವರ್ಷ ಡಿಸೆಂಬರ್ 6ನೇ ತಾರೀಖ್ ಬೆಳಂ ಬೆಳಗ್ಗೆ 6ಗಂಟೆಯ ಸಮಯ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಲು ಸಜ್ಜಾಗಿರುವ ‘ರಾಜವೀರ ಮದಕರಿ ನಾಯಕ’ ಸಿನಿಮಾದ ಶುಭಮುಹೂರ್ತದ ಸವಿಘಳಿಗೆಯದು. ಚಿತ್ರರಂಗದ ದಿಗ್ಗಜ ಧೀರರೇ ಗವಿಗಂಗದರನ ಮುಂದೆ ಕೈ ಮುಗಿದು ನಿಂತಿದ್ರು. ಅಲ್ಲಿ ಅಮ್ಮ ಮಗ ಕುಂತಿದ್ರು. ಮಗನ ಸಿನಿಮಾಕ್ಕೆ ಅಮ್ಮ ಕ್ಯಾಮೆರಾ ಚಾಲನೆ ಮಾಡಿ ಮದಕರಿಯ ರಾಜಮಾತೆಯಾಗಿ ಶುಭ ಹಾರೈಸಿದ್ರು.


ಹಿಂದಿನಿಂದಲೂ ಅಂಬಿ ಫ್ಯಾಮಿಲಿಯ ಜೊತೆ ದರ್ಶನ್​​ ಅವ್ರಿಗೆ ಆತ್ಮೀಯ ಒಡನಾಟ ಇದೆ. ದರ್ಶನ್ ನನ್ನ ದೊಡ್ಡ ಮಗ ಅಂತ ಅನೇಕ ಬಾರಿ ಸುಮಲತಾ ಹೇಳಿದ್ದಾರೆ. ಸುಮಲತಾ ಅವರಂತೆ ಅಂಬರೀಶ್ ಮತ್ತು ಸುಮಲತಾ ಅವರನ್ನು ದರ್ಶನ್ ಕೂಡ ಅಪ್ಪಾಜಿ ಅಮ್ಮ ಎಂದೇ ಕರೆಯುತ್ತಾರೆ. ಅಮ್ಮನೆಂಬ ಅಕ್ಕರೆಯಲ್ಲಿ ಸಕ್ಕರೆ ಮಂಡ್ಯವನ್ನು ಸುತ್ತಿ ಸುಮಲತಾ ಅವರನ್ನು ಗೆಲ್ಲಿಸಿದ್ರು. ಈಗ ಈ ಸ್ಟಾರ್​​ ಅಮ್ಮ ಮಗನ ಮಗದೊಂದು ಮಮತೆಯ ಬಂದ ಮತ್ತೊಮ್ಮೆ ಬಂಗಾರವಾಗಿದೆ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಸಿನಿಮಾದ ಟ್ರೈಲರ್ ಲಾಂಚ್ ವೇದಿಕೆಯಲ್ಲಿ.

ಇಂಡಿಯಾ v/s ಇಂಗ್ಲೆಂಡ್ ಟೈಟಲ್ ಬಗ್ಗೆ ದಚ್ಚು ವಿಶ್ಲೇಷಣೆ
ದರ್ಶನ್ ಮಾಡೋ ಎಲ್ಲಾ ಶುಭಕಾರ್ಯಗಳಲ್ಲಿ ಸುಮಲತಾ ಅವರ ಆಶೀರ್ವಾದ ಇದ್ದೇ ಇರುತ್ತೆ. ಅದರಂತೆ ಸುಮಲತಾ ಅಂಬರೀಶ್ ಅವರ ಗೆಲುವಿನ ಹೆಜ್ಜೆಯಲ್ಲಿ ದರ್ಶನ್ ಪ್ರಭಾವ ಇದ್ದೇ ಇರುತ್ತೆ. ಒಟ್ಟಿನಲ್ಲಿ ಅಭಿಮಾನಿಗಳಿಗೆ ಈ ಸ್ಟಾರ್ ಅಮ್ಮ ಮಗನ ಮಮತೆಯ ಬಾಂಧವ್ಯ ಸಖತ್ ಮುದ ಕೊಡುತ್ತೆ.
ಶ್ರೀಧರ್ ಶಿವಮೊಗ್ಗ _ ಎಂಟರ್ ಟೈನ್ಮೆಂಟ್ ಬ್ಯೂರೋ_ಟಿವಿ5

Recommended For You

About the Author: user

Leave a Reply

Your email address will not be published. Required fields are marked *