70 ವಿಧಾನಸಭೆ ಕ್ಷೇತ್ರಗಳಿಗೆ ಆಮ್​ ಆದ್ಮಿ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ – ದೆಹಲಿ ಚುನಾವಣೆ 2020

ನವದೆಹಲಿ: ದೆಹಲಿಯ 70 ವಿಧಾನಸಭೆ ಕ್ಷೇತ್ರಗಳಿಗೂ ಅರವಿಂದ್​ ಕೇಜ್ರಿವಾಲ್​ ಅವರ ನೇತೃತ್ವದ ಆಮ್​ ಆದ್ಮಿ ಪಕ್ಷ (ಎಎಪಿ)ವು ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.

ಚುನಾವಣೆಗೆ ಒಂದು ತಿಂಗಳು ಬಾಕಿ ಇರುವಾಗಲೇ, ಆಮ್ ಆದ್ಮಿ ಪಕ್ಷ ಮಂಗಳವಾರ ರಾಷ್ಟ್ರ ರಾಜಧಾನಿಯ ಎಲ್ಲಾ 70 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಈ ಪೈಕಿ 46 ಶಾಸಕರು ಪುನರಾವರ್ತಿತ ಅಭ್ಯರ್ಥಿಗಳಾಗಿದ್ದಾರೆ.

ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯು ಬಿಡುಗಡೆ ಮಾಡಿರುವ ದಾಖಲೆಗಳಲ್ಲಿ ಮನೀಶ್ ಸಿಸೋಡಿಯಾ ಅವರನ್ನು ಪಟ್ಪರ್ಗಂಜ್ ಅಭ್ಯರ್ಥಿಯಾಗಿ, ಶಕುರ್ ಬಸ್ತಿ ಮೂಲದ ಸತ್ಯೇಂದ್ರ ಜೈನ್, ತ್ರಿ ನಗರದಿಂದ ಜಿತೇಂದ್ರ ತೋಮರ್, ತಿಲಕ್ ನಗರದಿಂದ ಜರ್ನೈಲ್ ಸಿಂಗ್, ಕಲ್ಕಾಜಿಯಿಂದ ಅತಿಶಿ ಮತ್ತು ಕೃಷ್ಣನಗರ ಕ್ಷೇತ್ರದ ಎಸ್.ಕೆ.ಬಾಗಾ ಕಣದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಆರು ಅಭ್ಯರ್ಥಿಗಳು ಹೊಸ ಮುಖಗಳಾಗಿವೆ.

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಎಲ್ಲರಿಗೂ ಶುಭಾಶಯಗಳು. ಸಂತೃಪ್ತರಾಗಬೇಡಿ. ಪರಿಶ್ರಮ ಪಡಬೇಕು. ಜನರಿಗೆ ಎಎಪಿ ಮತ್ತು ನಿಮ್ಮ ಬಗ್ಗೆ ಸಾಕಷ್ಟು ನಂಬಿಕೆ ಇದೆ. ದೇವರು ಒಳ್ಳೆಯದು ಮಾಡಲಿ ಎಂದು ಪಟ್ಟಿ ಬಿಡುಗಡೆಯ ಮಾಡಿ ಟ್ವೀಟ್​ ಮಾಡುವ ಮೂಲಕ ಅಭ್ಯರ್ಥಿಗಳಿಗೆ ಆಮ್​ ಆದ್ಮಿ ಪಾರ್ಟಿ ಶುಭಕೋರಿದ್ದಾರೆ.

ದೆಹಲಿಯಲ್ಲಿ ಸದ್ಯ ಪ್ರಕಟವಾಗಿರುವ ಅಂತಿಮ ಮತದಾರರ ಪಟ್ಟಿಯ ಪ್ರಕಾರ, 1.46 ಕೋಟಿ ಜನರು ಈ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದಾರೆ. ಮತದಾರರ ಪಟ್ಟಿಯಲ್ಲಿ ಒಟ್ಟು 1,46,92,136 ಕೋಟಿ ಜನರಿದ್ದಾರೆ. ಅದರಲ್ಲಿ ಪುರುಷ ಮತದಾರರು 80,5500,686, ಮಹಿಳೆ ಮತದಾರರು 66,35,635 ಮತ್ತು ಮೂರನೇ ಲಿಂಗಕ್ಕೆ ಸೇರಿದವರು 815 ಜನರಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *