ಆಸ್ಟ್ರೇಲಿಯಾದಲ್ಲಿ ಭೀಕರ ಬರಗಾಲ, ಕಾಳ್ಗಿಚ್ಚು..!

ಆಸ್ಟ್ರೇಲಿಯಾದಲ್ಲಿ ಒಂದು ಕಡೆ ಕಾಳ್ಗಿಚ್ಚಿನ ರುದ್ರನರ್ತನ. ಮತ್ತೊಂದೆಡೆ, ಇಲ್ಲಿಯವರೆಗೆ ಕಂಡು ಕೇಳರಿಯದ ಭೀಕರ ಬರ. ಎಲ್ಲಿ ನೋಡಿದರೂ ನೀರಿಗೆ ಹಾಹಾಕಾರ. ಆದರೆ, ಸಮಸ್ಯೆ ಪರಿಹಾರಕ್ಕಾಗಿ ಆಸ್ಟ್ರೇಲಿಯಾ ಸರ್ಕಾರ ಕೈಗೊಂಡಿರುವ ಕ್ರಮಗಳು ಮಾತ್ರ ಎಂಥವರಲ್ಲೂ ಮರುಕ ಮತ್ತು ಭೀತಿ ಹುಟ್ಟಿಸುತ್ತಿದೆ.

ಹೆಚ್ಚು ನೀರು ಕುಡಿಯುತ್ತವೆ ಎಂದು ಒಂಟೆಗಳ ಮಾರಣಹೋಮ ನಡೆಸಲಾಗುತ್ತಿದೆ. ದಕ್ಷಿಣ ಆಸ್ಟ್ರೇಲಿಯಾದಲ್ಲಿ 5 ದಿನದಲ್ಲಿ 5 ಸಾವಿರ ಒಂಟೆ ಕೊಲ್ಲಲಾಗಿದೆ. ಆಹಾರ ಮತ್ತು ನೀರು ಹರಿಸಿ ಕಾಡು ಬಿಟ್ಟು ನಾಡಿನತ್ತ ಬರುತ್ತಿರುವ ಒಂಟೆಗಳನ್ನು ಹೆಲಿಕಾಪ್ಟರ್‌ ಮೂಲಕ ಬೇಟೆಯಾಡಲಾಗುತ್ತಿದೆ.

Recommended For You

About the Author: user

Leave a Reply

Your email address will not be published. Required fields are marked *