ದರ್ಶನ್​​ ಅಭಿನಯದ ‘ರಾಬರ್ಟ್​’ ಸಿನಿಮಾ ಸ್ಟೋರಿಲೈನ್ ಲೀಕ್​ ..?!

ಚಾಲೆಂಜಿಂಗ್​ ಸ್ಟಾರ್ ದರ್ಶನ್​​ ಅಭಿನಯದ ರಾಬರ್ಟ್​ ಸಿನಿಮಾ ಸೆಕೆಂಡ್​ ಲುಕ್​ ಮೋಷನ್ ಪೋಸ್ಟರ್ ಸಂಕ್ರಾಂತಿಗೆ ಕಿಚ್ಚು ಹಚ್ಚೋಕ್ಕೆ ಬರ್ತಿದೆ.  ಯಾವಾಗ ರಾಬರ್ಟ್​​​​ ಚಿತ್ರದ ಹೊಸ ಪೋಸ್ಟರ್​ ಬರುತ್ತೋ ಅಂತ ಫ್ಯಾನ್ಸ್​​ ಕಾಯ್ತಿದ್ದಾರೆ. ಈ ಗ್ಯಾಪ್​ನಲ್ಲೇ ಸಿನಿಮಾ ಬಗ್ಗೆ ಕ್ರೇಜಿ ನ್ಯೂಸ್​ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ಲಾಗಿದೆ.

ರಾಬರ್ಟ್​​ ಸಿನಿಮಾ ಸೆಟ್ಟೇರಿದ ದಿನದಿಂದಲೂ ಕಥೆ ಬಗ್ಗೆ ಚಿತ್ರತಂಡ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಥೀಮ್​ ಪೋಸ್ಟರ್​ಗಳಿಂದ್ಲೇ ಕುತೂಹಲ ಕೆರಳಿಸಿದ್ದ ನಿರ್ದೇಶಕರು ಬಹುತೇಕ ಶೂಟಿಂಗ್​ ಕಂಪ್ಲೀಟ್​ ಮಾಡಿ, ಡಬ್ಬಿಂಗ್​ ಶುರು ಮಾಡಿದ್ದಾರೆ. ಸ್ಟೋರಿ ಮತ್ತು ದಚ್ಚು ಲುಕ್​​ ಲೀಕ್​ ಆಗ್ಬಾರ್ದು ಅನ್ನೋ ಕಾರಣಕ್ಕೆ ಸೆಟ್​​ನಲ್ಲಿ ಮೊಬೈಲ್​ ಬ್ಯಾನ್​ ಮಾಡಿದರು. ಇಷ್ಟೆಲ್ಲಾ ಆದರು, ಕಥೆ ಲೀಕಾಯ್ತಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.

ಹೈವೋಲ್ಟೇಜ್​​ ರಾಬರ್ಟ್​ ಸಿನಿಮಾದಲ್ಲಿ ದರ್ಶನ್​​, ಟ್ರಿಪಲ್​ ರೋಲ್​ ಪ್ಲೇ ಮಾಡ್ತಿದ್ದಾರೆ ಅನ್ನೋ ಸುದ್ದಿ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸೌಂಡ್​ ಮಾಡ್ತಿದೆ. ಈ ಹಿಂದೆ ಅಮರ್ ಅಕ್ಬರ್ ಆಂಟೋನಿ ಮತ್ತು ರಾಮ್​ ರಹೀಮ್​​ ರಾಬರ್ಟ್​ ಅನ್ನೋ ಟೈಟಲ್​ಗಳಲ್ಲಿ ಮೂರು ಹೀರೋಗಳು ಅಥವಾ ಹೀರೋ ಟ್ರಿಪಲ್​ ರೋಲ್​​​ನಲ್ಲಿ ​ ನಟಿಸಿರೋ ಸಿನಿಮಾಗಳು ಬಂದೋಗಿವೆ. ಅದೇ ರೀತಿ ರಾಬರ್ಟ್​ ಸಿನಿಮಾದಲ್ಲೂ ದಚ್ಚು 3 ಪಾತ್ರಗಳಲ್ಲಿ ನಟಿಸಿದ್ದಾರೆ, ಅಥವಾ ಮೂರು ಹೆಸರಿನ ಮೂರು ಶೇಡ್​ಗಳಿರೋ ಪಾತ್ರದಲ್ಲಿ ನಟಿಸಿರಬಹುದು ಅಂತೆಲ್ಲಾ ಗುಲ್ಲಾಗಿದೆ.

ಈ ಹಿಂದೆ ದರ್ಶನ್​ ಇಂದರ, ಬಾಸ್​ ಸಿನಿಮಾಗಳಲ್ಲಿ ಡಬಲ್​ ರೋಲ್​ನಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದರು. ಸಷಿಯಲ್​ ಮೀಡಿಯಾದಲ್ಲಿ ಹರಿದಾಡ್ತಿರೋ ಸುದ್ದಿ ನಿಜವೇ ಆಗಿದರೆ, ಇದೇ ಮೊದಲ ಬಾರಿಗೆ ದರ್ಶನ್​​ ಟ್ರಿಪಲ್​ ರೋಲ್​ನಲ್ಲಿ ನಟಿಸಿದಂತಾಗುತ್ತದೆ. ಇನ್ನು ಸಂಕ್ರಾಂತಿಗೆ ಸೆಕೆಂಡ್​ ಮೋಷನ್​ ಪೋಸ್ಟರ್​​ನಲ್ಲಿ ಸಂಜಯ್​​ ಲುಕ್​​ ಅನ್ನ ರಿವೀಲ್​ ಮಾಡ್ತಾರೆ ಅನ್ನಲಾಗ್ತಿದೆ. ಇದೆಲ್ಲ ಬರೀ ಅಂತೆ ಕಂತೆಯ ಸಂತೆ ಅಷ್ಟೆ. ಅಧಿಕೃತ ಮಾಹಿತಿ ಚಿತ್ರತಂಡದಿಂದಲೇ ಹೊರಬೀಳಬೇಕಿದೆ.

Recommended For You

About the Author: user

Leave a Reply

Your email address will not be published. Required fields are marked *