ಡಿ ಕೆ ಶಿವಕುಮಾರ್​​ಗೆ ಸಿಕ್ತು ದೇವೇಗೌಡರ ಬೆಂಬಲ..!

ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಏಸು ಪ್ರತಿಮೆ ಸ್ಥಾಪನೆ ಮಾಡ್ತೀನಿ ಅಂತ ಹೇಳಿದ್ದಾರೆ. ಅದರಲ್ಲಿ ನಾನು ತಪ್ಪು ಕಂಡು ಹಿಡಿಯೊಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದರು.

ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ಸ್ಥಾಪನೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಟ್ಟದ ಮೇಲೆ ಏಸು ಶಿಲೆ ನಿರ್ಮಾಣ ಮಾಡ್ತೀವಿ ಅಂತ ಒಂದು ನಿರ್ಣಯ ತೆಗೆದುಕೊಂಡಿರಬಹುದು.  ಅದಕ್ಕೆ ನಮ್ಮದೇನು ಅಭ್ಯಂತರ ಇಲ್ಲ. ಆದರೆ ಬೆಂಗಳೂರು, ಮಂಗಳೂರಿನಿಂದ ಯಾಕೆ ಪ್ರತಿಭಟನೆ ಮಾಡೋಕೆ ಬರಬೇಕು ಎಂದು ಬಿಜೆಪಿ ಹೋರಾಟದ ವಿರುದ್ದ ದೇವೇಗೌಡರು ಕಿಡಿಕಾರಿದರು.

ಬಿಜೆಪಿಯಿಂದ ಪ್ರತಿಮೆ ಮಾಡಲು ಬಿಡೊಲ್ಲ ಅನ್ನೊ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ನಾನು ಮಾತನಾಡೊಲ್ಲ. ಅದನ್ನು ಸರ್ಕಾರ ನೋಡಿಕೊಳ್ಳುತ್ತೆ ಎಂದು ದೇವೇಗೌಡ ತಿಳಿಸಿದರು.

ಇನ್ನೂ ಪ್ರಾದೇಶಿಕ ಪಕ್ಷಕ್ಕೆ ವಿಧಾನಸಭೆ, ಲೋಕಸಭೆ, ಉಪಚುನಾವಣೆಯಲ್ಲಿ ನಮಗೆ ಸೋಲಾಗಿದೆ. ಹೀಗಾಗಿ ಪಕ್ಷ ಸಂಘಟನೆ ಮಾಡಬೇಕಿದೆ. ಯಾರು ಇರ್ತಾರೊ, ಯಾರು ಹೋಗ್ತಾರೊ ಅದೆಲ್ಲಾ ನನಗೆ ಬೇಕಿಲ್ಲ.ಕಾರ್ಯಕರ್ತರನ್ನು ಸೇರಿಸಿ ಸಭೆ ಮಾಡಿ ಪಕ್ಷ ಹೇಗೆ ಬಲಪಡಿಸಬೇಕೆಂದು ಚರ್ಚೆ ಮಾಡಿದ್ದೇವೆ ಎಂದು ದೇವೇಗೌಡ ಹೇಳಿದರು.

Recommended For You

About the Author: user

Leave a Reply

Your email address will not be published. Required fields are marked *