ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಯಡಿಯೂರಪ್ಪ ಹೇಳಿದ್ದು ಹೀಗೆ..!

ಬೆಂಗಳೂರು: ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ್ದಾರೆ.

ಮಂತ್ರಿಮಂಡಲದ ಬಗ್ಗೆ ಕೇಳಿ ಬರ್ತಿರೋ ವಿಚಾರಗಳು ಎಲ್ಲವೂ ಊಹಾಪೋಹ. ಹಾಗ್ ನೋಡೋದಾದ್ರೇ ಇವತ್ತು ಅಮಿತ್ ಶಾ ಟೈಂ ಕೊಟ್ಟಿದ್ರು. ಆದ್ರೆ ದೇವದುರ್ಗದಲ್ಲಿ ಹಾಲುಮತದ ಕಾರ್ಯಕ್ರಮ ಮುಖ್ಯವಾಗಿತ್ತು. ನಾಳೆ ದೆಹಲಿಗೆ ಹೋಗೋದಕ್ಕೆ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.

ಅಲ್ಲದೇ, ನಾಳೆ ಅಮಿತ್ ಶಾ ಸಿಕ್ಕರೆ, ಎಲ್ಲಾ ಕಾರ್ಯಕ್ರಮಗಳನ್ನ ರದ್ದು ಮಾಡಿ ಹೋಗ್ತೇನೆ. ಒಂದ್ವೇಳೆ ಅದು ಆಗಿಲ್ಲ ಅಂದ್ರೆ 17-18 ಇಲ್ಲೇ ಬರ್ತಾರೆ. ಆಗ ಅಮಿತ್ ಶಾ ಜೊತೆ ಚರ್ಚೆ ಮಾಡಿ ಸಂಪುಟ ವಿಸ್ತರಣೆ ಮಾಡೇ ಮಾಡ್ತೀನಿ ಎಂದು ಸ್ಪಷ್ಟನೆ ನೀಡಿದ್ದಾರೆ.

ನಮ್ಮ ಜೊತೆ ಬಂದಿರೋರಿಗೆ ಕೊಟ್ಟಿರೋ ಮಾತು ಉಳಿಸಿಕೊಳ್ತೇವೆ. ನೂರಕ್ಕೆ ನೂರರಷ್ಟು ಸಂಪುಟ ವಿಸ್ತರಣೆ ಆಗುತ್ತೆ. ದಾವೂಸ್ಗೆ ಹೋಗ್ಬೇಕು ಅಂತಾ ಒತ್ತಾಯಗಳಿವೆ. ಹಾಗಾಗಿ ಹೋಗ್ತೇನೆ. ದಾವೂಸ್ಗೆ ಹೋಗುವ ಮುನ್ನ ಸಚಿವ ಸಂಪುಟ ವಿಸ್ತರಣೆ ಮಾಡ್ತೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *