ಪೇಜಾವರ ಶ್ರೀಗಳ ಹಾಗು ದೇವೇಗೌಡರ ನಡುವಿನ ಒಡನಾಟಕ್ಕೆ ಇದೆ ಸ್ಟ್ರಾಂಗ್​ ರೀಸನ್​!

ಬೆಂಗಳೂರು: ಪೇಜಾವರ ಶ್ರೀಗಳು ತಮ್ಮ ಪರ್ಯಾಯದಲ್ಲಿ ಅನೇಕ ಕೆಲಸ ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಭಾನುವಾರ ಹೇಳಿದರು.

ನಗರದ ವಿದ್ಯಾಪೀಠಕ್ಕೆ ಭೇಟಿ ನೀಡಿ ವಿಶ್ವೇಶ ತೀರ್ಥ ಶ್ರೀಗಳ ಬೃಂದಾವನ ದರ್ಶನ ಪಡೆದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಶ್ರೀಗಳು ದಲಿತ ಕೇರಿಗೆ ಹೋಗಿ ಅಸ್ಪೃಶ್ಯತೆ ನಿವಾರಣೆ ಕೆಲಸ ಮಾಡಿದರು. ಅದು ತೋರಿಕೆಗೆ ಮಾಡಿಲ್ಲ, ಸಮಾಜದಲ್ಲಿ ಬದಲಾವಣೆ ತರಲು ಮಾಡಿದರು ಎಂದರು.

ಇನ್ನು ಮಠದಲ್ಲೆ ಇಫ್ತಿಯಾರ್ ಕೂಟ ಮಾಡಿ ಸಮಾಜಕ್ಕೆ ಸುಧಾರಣೆ ತೋರಿಸಿಕೊಟ್ಟರು. ಅನೇಕ ಬಾರಿ ನಾನು, ನನ್ನ ಪತ್ನಿ ಮಠಕ್ಕೆ ಹೋಗಿ ಶ್ರೀಗಳ ಆಶೀರ್ವಾದ ಪಡೆದಿದ್ದೇವೆ. ಅವರ ಕನಸಿನಂತೆ ವಿದ್ಯಾಪೀಠದಲ್ಲಿ ಬೃಂದಾವನ ಆಗಿದೆ ಎಂದು ತಿಳಿಸಿದರು.

ಸದ್ಯ ಶ್ರೀಗಳು ಅನೇಕ ಸಾರಿ ನನ್ನನ್ನ ಕರೆದು ಡೆಲ್ಲಿಯಲ್ಲಿ ಮಠ ಸ್ಥಾಪನೆ ಮಾಡಲು ನರಸಿಂಹರಾವ್ ಕಾಲದಲ್ಲಿ ಜಾಗ ಕೇಳಿದ್ದರು. ನಾನು ಪ್ರಧಾನಿ ಆದಾಗ ಅತ್ಯಂತ ಕಡಿಮೆ ಮೊತ್ತದಲ್ಲಿ ಜಾಗ ಕೊಟ್ಟೆ. ಇದನ್ನ ಶ್ರೀಗಳು ಅನೇಕ ಬಾರಿ ಹೇಳಿದ್ದಾರೆ. ನಾನು ಇದನ್ನು ಹೇಳಿಬೇಡಿ ಅಂತ ಹೇಳಿದ್ದೆ ಎಂದು ದೇವೇಗೌಡರು ಶ್ರೀಗಳ ಜೊತೆಗಿನ ಒಡನಾಡ ಹಂಚಿಕೊಂಡರು.ಹೆಚ

ಹೆಚ್.ಡಿ.ಕುಮಾರಸ್ವಾಮಿ ಸಿಡಿ ಬಿಡುಗಡೆ ವಿಚಾರ ಪ್ರಸ್ತಾಪಿಸಲು ನಿರಾಕರಿಸಿದ ಅವರು, ಮಠದಲ್ಲಿ ನಾನು ರಾಜಕೀಯ ವಿಚಾರ ಮಾತಾಡಲ್ಲ, ರಾಜಕೀಯ ವಿಚಾರಗಳನ್ನು ಪಕ್ಷದ ಕಛೇರಿಯಲ್ಲಿ ಮಾತಾಡುತ್ತೇನೆ ಎಂದು ಹೆಚ್.ಡಿ.ದೇವೇಗೌಡ ಅವರು ನುಡಿದರು.

Recommended For You

About the Author: user

Leave a Reply

Your email address will not be published. Required fields are marked *