ಪುಟ್ಟ ಅಭಿಮಾನಿಯ ಆಸೆ ಈಡೇರಿಸಿದ ದಾಸ ದರ್ಶನ್

ಬೆಂಗಳೂರು: ಸ್ಯಾಂಡಲ್​ವುಡ್​ನ ಡಿ ಬಾಸ್​ ನಟ ದರ್ಶನ್ ಅವರು ಅಪಟ್ಟ ಅಭಿಮಾನಿ ರತನ್​ ಕುಮಾರ್​ ಎಂಬ ಬಾಲಕನನ್ನು ಭಾನುವಾರ ಭೇಟಿ ಮಾಡಿದ್ದಾರೆ.

ರತನ್​ ಕುಮಾರ್​ ಚಾಲೆಂಕಿಂಗ್​ ಸ್ಟಾರ್​ ದರ್ಶನ್​ ಅವರ ಅಭಿಮಾನಿ. ಆ ಪುಟ್ಟ ಬಾಲಕ ಕೆಲವು ದಿನಗಳಿಂದ ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದರು. ಆತನಿಗೆ ಮಾತ್ರ ದರ್ಶನ್​ ಅವರನ್ನು ಭೇಟಿ ಮಾಡಬೇಕು ಎಂಬುದು ಆಸೆ ಆಗಿತ್ತು.

ಹೀಗಾಗಿ ಆತನ ಮನವಿಗೆ ಮನಸೋತು ಡಿ ಬಾಸ್​ ತನ್ನ ಮನೆಗೆ ಕರೆಸಿಕೊಂಡು ಆ ಬಾಲಕನಿಗೆ ದರುಶನ ನೀಡಿದ್ದಾರೆ. ಸದ್ಯ ಈತ ಹಾಸನ ಜಿಲ್ಲೆ ಅರಸೀಕೆರೆ ಮೂಲದವರಾಗಿದ್ದು, ತಾಯಿ ಕವಿತಾ, ತಂದೆ ಮೋಹನ್​ ಆಗಿದ್ದಾರೆ.

ದರ್ಶನ್​ ಅವರು ಇದೀಗ ರತನ್ ಕೊನೆಯ ಆಸೆಯನ್ನ ಈಡೇರಿಸಿದ್ದಾರೆ. ಮನೆಯ ಬಳಿ ಕರೆಸಿಕೊಂಡು ಮಗುವನ್ನ ಮತನಾಡಿಸಿ ಎತ್ತಿಕೊಂಡು ಫೋಟೋ ತೆಗೆಸಿಕೊಂಡಿರುವ ಚಿತ್ರಗಳು ಲಭ್ಯವಾಗಿದ್ದು, ಈ ಪುಟ್ಟ ಹುಡುಗನ ಆಸೆಗೆ ಸ್ಪಂದಿಸಿದ ಚಾಲೆಂಜಿಂಗ್ ಸ್ಟಾರ್ ಕೆಲಸಕ್ಕೆ ಅವರ ಫ್ಯಾನ್ಸ್ ಫಿದಾ ಆಗಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *