Top

ಈ ನಟಿಯರು ಬೆಳ್ಳಗೆ ಕಾಣೋಕ್ಕೆ ಏನ್ ಮಾಡ್ತಾರೆ ಗೊತ್ತಾ..? ಇಲ್ಲಿದೆ ನೋಡಿ ಶಾಕಿಂಗ್ ಸಿಕ್ರೇಟ್..!

ಈ ನಟಿಯರು ಬೆಳ್ಳಗೆ ಕಾಣೋಕ್ಕೆ ಏನ್ ಮಾಡ್ತಾರೆ ಗೊತ್ತಾ..? ಇಲ್ಲಿದೆ ನೋಡಿ ಶಾಕಿಂಗ್ ಸಿಕ್ರೇಟ್..!
X

ಸೌಂದರ್ಯವನ್ನ ಕಾಪಾಡಿಕೊಳ್ಳೋದ್ರಲ್ಲಿ ನಟಿಯರು ತುಂಬಾ ಕಟ್ಟುನಿಟ್ಟಾಗಿರ್ತಾರೆ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು, ಹಣ್ಣಿನ ರಸ, ತರಕಾರಿಗಳ ಸೇವನೆ, ಯೋಗ, ಸೈಕಲಿಂಗ್, ಇತ್ಯಾದಿಗಳನ್ನ ತಮ್ಮ ದಿನಚರಿಯಲ್ಲಿ ಅಳವಡಿಸಿಕೊಂಡು ದೇಹ ಸೌಂದರ್ಯವನ್ನ ಕಾಪಾಡಿಕೊಳ್ಳುತ್ತಾರೆ.

ಆದ್ರೆ ಇದೆಲ್ಲರ ಹಿಂದೆ ಮತ್ತೊಂದು ಸಿಕ್ರೇಟ್ ಕೂಡ ಅಡಗಿರತ್ತೆ. ಕೆಲ ನಟಿಯರು ಚಿತ್ರರಂಗದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಕೆಲ ಸೂತ್ರಗಳನ್ನ ಫಾಲೋ ಮಾಡ್ತಾರೆ. ಅದರಲ್ಲೂ ಬಾಲಿವುಡ್‌ ಬೆಡಗಿಯರು ಇದರಲ್ಲಿ ತುಂಬಾ ಎಕ್ಸ್‌ಪರ್ಟ್. ಆ ಸಿಕ್ರೇಟ್ ಬೇರೆನೂ ಅಲ್ಲ, ಸ್ಕಿನ್ ಲೈಟ್‌ನಿಂಗ್ ಟ್ರೀಟ್‌ಮೆಂಟ್.

ಹೌದು, ಬಾಲಿವುಡ್‌ ಸಿನಿಮಾಗಳಲ್ಲಿ ಫುಲ್ ಗ್ಲಾಮರಸ್‌ ಆಗಿ ಮಿಂಚೋ ನಟಿಯರಲ್ಲಿ ಬಹುತೇಕರು ಮೂಗು, ತುಟಿ, ಕೆನ್ನೆಯನ್ನ ಸರ್ಜರಿ ಮಾಡಿಕೊಂಡವರೇ. ಹಾಗೆಯೇ ಕಪ್ಪು ವರ್ಣದ ಸುಂದರಿಯರು ಸ್ಕಿನ್ ಲೈಟ್‌ನಿಂಗ್ ಟ್ರೀಟ್‌ಮೆಂಟ್ ತೆಗೆದುಕೊಂಡು ತ್ವಚೆಯ ಸೌಂದರ್ಯವನ್ನ ಹೆಚ್ಚಿಸಿಕೊಂಡಿದ್ದಾರೆ.

ಉತ್ತರ ಭಾರತದಲ್ಲಿ ಹೆಚ್ಚಿನವರು ಶ್ವೇತವರ್ಣಿಯರೇ. ಅದರಲ್ಲೂ ಬಾಲಿವುಡ್ ಸಿನಿಮಾದಲ್ಲಿ ಆ್ಯಕ್ಟ್ ಮಾಡೋ ನಟಿ ಕಪ್ಪಾಗಿದ್ದರೆ ಗಾಸಿಪ್ ಹಬ್ಬಿಸಿ, ಅವಳ ಸಿನಿಮಾ ಕರಿಯರ್‌ಗೆ ಧಕ್ಕೆಯುಂಟಾಗೋ ರೀತಿ ಮಾಡುವರೇ ಹೆಚ್ಚು. ಈ ಕಾರಣಕ್ಕೆ ಚಿತ್ರರಂಗದಲ್ಲಿ ಭವಿಷ್ಯ ರೂಪಿಸಿಕೊಳ್ಳುವ ಸಲುವಾಗಿ, ಬಾಲಿವುಡ್‌ ನಟಿಯರು ಸ್ಕಿನ್ ಲೈಟ್‌ನಿಂದ ಟ್ರೀಟ್‌ಮೆಂಟ್ ಮಾಡಿಸಿಕೊಳ್ತಾರೆ. ಅಂತಹ ಬಾಲಿವುಡ್ ನಟಿಯರಲ್ಲಿ 8 ನಟಿಯರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

1..ಕಾಜೋಲ್: ಬಾಲಿವುಡ್‌ನ ಬ್ಲಾಕ್‌ಬಸ್ಟರ್ ಸಿನಿಮಾ ದಿಲ್‌ವಾಲೇ ದುಲ್ಹನಿಯಾ ಲೇ ಜಾಯೆಂಗೆ ಸಿನಿಮಾದ ನಟಿಯಾಗಿ ಮಿಂಚಿನ ಕೃಷ್ಣಸುಂದರಿ ಕಾಜೋಲ್ ಕೂಡ ಸ್ಕಿನ್ ಲೈಟನಿಂಗ್‌ ಟ್ರೀಟ್‌ಮೆಂಟ್ ತೆಗೆದುಕೊಂಡಿದ್ದಾರೆ.

2..ಪ್ರಿಯಾಂಕಾ ಛೋಪ್ರಾ: ಬಾಲಿವುಡ್‌ಗೆ ಎಂಟ್ರಿ ಕೊಟ್ಟಾಗ ಗೋದಿಬಣ್ಣದ ಬೆಡಗಿಯಾಗಿದ್ದ ಪ್ರಿಯಾಂಕಾ ಛೋಪ್ರಾ ಕೂಡ, ಸ್ಕಿನ್ ಲೈಟ್‌ನಿಂಗ್ ಟ್ರೀಟ್‌ಮೆಂಟ್ ತೆಗೆದುಕೊಂಡಿದ್ದಾರೆ.

3..ದೀಪಿಕಾ ಪಡುಕೋಣೆ: ಬಾಲಿವುಡ್‌ನಲ್ಲಷ್ಟೇ ಅಲ್ಲದೇ, ಹಾಲಿವುಡ್‌ನಲ್ಲೂ ಸಖತ್ ಸೌಂಡ್ ಮಾಡುತ್ತಿರುವ ಕನ್ನಡತಿ ದೀಪಿಕಾ ಪಡುಕೋಣೆ ಕಲರ್ ಕೂಡ ಕೊಂಚ ಡಲ್ಲಾಗಿತ್ತು. ಆದ್ರೆ ಸ್ಕಿನ್ ಲೈಟನಿಂಗ್ ಟ್ರೀಟ್‌ಮೆಂಟ್ ತೆಗೆದುಕೊಂಡ ಮೇಲೆ ದೀಪಿಕಾ ಕೂಡ ಶ್ವೇತ ಸುಂದರಿಯಾಗಿದ್ದಾರೆ.

4..ಬಿಪಾಶಾ ಬಸು: ಇನ್ನು ಬಾಲಿವುಡ್‌ನ ಕೃಷ್ಣಸುಂದರಿ ಅಂತಾನೇ ಫೇಮಸ್ ಆಗಿರುವ ಬಿಪಾಶಾ ಬಸು ಕೂಡ ಈ ಟ್ರೀಟ್‌ಮೆಂಟ್ ಪ್ರಯೋಗ ಮಾಡಿದ್ದಾರೆ.

5..ಶಿಲ್ಪಾ ಶೆಟ್ಟಿ: ಯೋಗ ಮಾಡುವ ಮೂಲಕ ಬಳಕುವ ಬಳ್ಳಿಯಂತಿರುವ ಕುಡ್ಲ ಹುಡುಗಿ, ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಕೂಡ ಈ ಟ್ರೀಟ್‌ಮೆಂಟ್ ತೆಗೆದುಕೊಂಡೇ ತಮ್ಮ ಗ್ಲಾಮರ್ ಹೆಚ್ಚಿಸಿಕೊಂಡಿರೋದು.

6..ಶ್ರೀದೇವಿ: ಬಾಲಿವುಡ್‌ನ ಅತಿಲೋಕ ಸುಂದರಿ ದಿವಂಗತ ಶ್ರೀದೇವಿ ಕೂಡ ಹಲವು ಸರ್ಜರಿಗಳನ್ನ ಮಾಡಿಸಿಕೊಂಡಿದ್ದರು. ಇದರ ಜೊತೆಗೆ ಸ್ಕಿನ್ ಲೈಟನಿಂಗ್ ಟ್ರೀಟ್‌ಮೆಂಟ್ ಸಹ ತೆಗೆದುಕೊಂಡಿದ್ದರು.

7..ರೇಖಾ: ಇನ್ನು ಹಿರಿಯ ನಟಿ ಎನ್ನಿಸಿಕೊಂಡರೂ ಕೂಡ, ಬಾಲಿವುಡ್‌ನ ಮಾದಕ ನಟಿ ಪಟ್ಟವನ್ನೂ ಬಿಟ್ಟುಕೊಡದ ನಟಿ ರೇಖಾ ಕೂಡ ಸ್ಕಿನ್ ಲೈಟ್‌ನಿಂದ ಟ್ರೀಟ್‌ಮೆಂಟ್‌ಗೆ ಒಳಗಾದವರೇ.

8..ಹೇಮಾಮಾಲಿನಿ: ಬಾಲಿವುಡ್‌ನ ಎವರ್‌ಗ್ರೀನ್ ಹೇಮಾಮಾಲಿನಿ ಕೆಲ ವರ್ಷಗಳ ಹಿಂದಷ್ಟೇ ಈ ಟ್ರೀಟ್‌ಮೆಂಟ್‌ಗೆ ಒಳಗಾಗಿದ್ದಾರೆ. ಕನಸಿನ ರಾಣಿ ಅಂತಾನೇ ಫೇಮಸ್ ಆಗಿರೋ ಹೇಮಾಮಾಲೀನಿ ನಾಟ್ಯಕಲಾವಿದೆ ಕೂಡ ಹೌದು.

Next Story

RELATED STORIES