ಶಿಖರ್​ ಧವನ್ ಬೆನ್ನಲ್ಲೇ ಸ್ವಿಂಗ್ ಕಿಂಗ್ ಭುವಿ ಔಟ್?

ವೆಸ್ಟ್ ಇಂಡೀಸ್​ ವಿರುದ್ಧದ ಮೂರು ಪಂದ್ಯಗಳ ಸರಣಿನ್ನ ಗೆದ್ದು ಬೀಗಿರುವ ಹುಮ್ಮಸ್ಸಿನಲ್ಲಿರುವ ಟೀಮ್ ಇಂಡಿಯಾಕ್ಕೆ ಮತ್ತೊಂದು ಅಘಾತ ಎದುರಾಗಿದೆ. ಟೀಮ್ ಇಂಡಿಯಾ ಓಪನರ್ ಬ್ಯಾಟ್ಸ್​ಮನ್ ಶಿಖರ್ ಧವನ್ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳದೆ ಏಕದಿನ ಸರಣಿಯಿಂದ ಹೊರಬಿದ್ದಿದ್ದರು.

ಈ ಮಧ್ಯೆ ಟೀಮ್ ಇಂಡಿಯಾ ಟ್ರಂಪ್​ ಕಾರ್ಡ್ ಬೌಲರ್​ಭವನೇಶ್ವರ್​ ಕುಮಾರ್​​​, ಸ್ನಾಯು ಸೆಳೆತಕ್ಕೊಳಗಾಗಿದ್ದು ಏಕದಿನ ಸರಣಿಗೆ ಅಲಭ್ಯರಾಗುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಇಂಜುರಿಯಿಂದ ಗುಣಮುಖರಾಗದ ಕಾರಣ ಶಿಖರ್ ಧವನ್ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಟೀಮ್ ಇಂಡಿಯಾಕ್ಕೆ ಗಾಯದ ಮೇಲೆ ಬರೆ ಎಳದಂತೆ ಆಗಿದೆ.

ವೆಸ್ಟ್​ ಇಂಡೀಸ್​ ಸರಣಿಗೂ ಮುನ್ನ ಗಾಯದಿಂದ ಹೊರಗುಳಿದಿದ್ದ ಭುವನೇಶ್ವರ್ ಕುಮಾರ್, ವಿಂಡೀಸ್ ಸರಣಿಯ ವೇಳೆ ತಂಡವನ್ನು ಸೇರಿಕೊಂಡಿದ್ದರು. ಆದರೆ, ವಾಖೆಂಡೆಯಲ್ಲಿ ನಡೆದ ಅಂತಿಮ ಟಿ20 ಪಂದ್ಯದ ವೇಳೆ ಮತ್ತೊಮ್ಮೆ ಸ್ನಾಯು ಸೆಳೆತಕ್ಕೆಕೊಳಗಾಗಿದ್ದಾರೆ. ಹೀಗಾಗಿ ವೆಸ್ಟ್​ ಇಂಡೀಸ್​ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಏಕದಿನ ಸರಣಿಯಲ್ಲಿ ಯಾರಿಗೆ ಚಾನ್ಸ್​ ನೀಡ್ತಾರೆ ಅನ್ನೊದು ಕುತೂಹಲ ಮೂಡಿಸಿದೆ.

ಇನ್ನು ಭುವನೇಶ್ವರ್​ ತಂಡದ ಸೇವೆಗೆ ಅಲಭ್ಯರಾದರೆ ಮೊಹಮ್ಮದ್ ಶಮಿ, ದೀಪಕ್ ಚಹರ್​ ಮಾತ್ರ ವೇಗಿಗಳಾಗಿ ಉಳಿದುಕೊಳ್ಳುತ್ತಾರೆ. ಹೀಗಾಗಿ ಟೀಮ್ ಇಂಡಿಯಾಗೆ ಅನುಭವಿ ವೇಗಿಯ ಅವಶ್ಯಕತೆ ಇದೆ. ಇದರಿಂದಾಗಿ ಟೆಸ್ಟ್​ ತಂಡಕ್ಕೆ ಕಮ್​ಬ್ಯಾಕ್​ಮಾಡಿ ಅದ್ಬುತ ಪ್ರದರ್ಶನ ನೀಡಿದ್ದ ವಿದರ್ಭ ಎಕ್ಸ್​ಪ್ರೆಸ್​ ಉಮೇಶ್​ ಯಾದವ್​ಗೆ ಚಾನ್ಸ್​ ನೀಡ್ತಾರಾ(?) ಇಲ್ಲ ಯುವ ಬೌಲರ್​ಗಳಾದ ಖಲೀಲ್ ಅಹ್ಮದ್, ನವದೀಪ್ ಸೈನಿಗೆ ಅವಕಾಶ ನೀಡ್ತಾರಾ ಅನ್ನೋದು ಯಕ್ಷಪ್ರಶ್ನೆಯಾಗಿದೆ. ಭವನೇಶ್ವರ್​ ರಿಪ್ಲೇಸ್​ಮೆಂಟ್​ ಆಟಗಾರನನ್ನು ನಾಳೆ ಬಿಸಿಸಿಐ ಘೋಷಿಸುವ ಸಾಧ್ಯತೆ ಇದೆ.

ಇನ್ನು ವೆಸ್ಟ್ ಇಂಡೀಸ್​​ ವಿರುದ್ಧದ ಟಿ20 ಸರಣಿಯಲ್ಲಿ ಗೆದ್ದಿರುವ ಟೀಮ್ ಇಂಡಿಯಾ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ನಾಳೆ ಚೆನ್ನೈನ ಚಿದಂಬಂರಂ ಸ್ಪೇಡಿಯಂನಲ್ಲಿ ನಡೆಯಲಿದೆ.

Recommended For You

About the Author: user

Leave a Reply

Your email address will not be published. Required fields are marked *