Top

ಇಂಡೋ-ವಿಂಡೀಸ್ ಟಿ20​ ಸರಣಿ ಗೆಲ್ಲೋದ್ಯಾರು..?

ಇಂಡೋ-ವಿಂಡೀಸ್ ಟಿ20​ ಸರಣಿ ಗೆಲ್ಲೋದ್ಯಾರು..?
X

ಟೀಮ್ ಇಂಡಿಯಾ ಹಾಗೂ ವೆಸ್ಟ್​ ಇಂಡೀಸ್​ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಉಭಯ ತಂಡಗಳು ತಲಾ ತಲಾ ಒಂದು ಮ್ಯಾಚ್​ ಗೆದ್ದಾಗಿದೆ. ಆದರೆ, ಅಂತಿಮವಾಗಿ ಮುಂಬೈನಲ್ಲಿ ನಡೆಯಲಿರುವ ಟಿ20 ಪಂದ್ಯದಲ್ಲಿ ಆ ಪ್ರಮುಖ ಅಂಶ ಸರಣಿ ಗೆಲುವಿನ ಸರದಾರರು ಯಾರು ಅನ್ನೋದನ್ನು ಡಿಸೈಡ್​ ಮಾಡುತ್ತೆ ಎನ್ನಲಾಗಿದೆ..?

ಹೈದ್ರಬಾದ್​ ಅಂಗಳದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದ್ದು ಗೊತ್ತೆ ಇದೆ. ನಂತರ ತಿರುವನಂತಪುರಂನಲ್ಲಿ ನಡೆದ ಕಾದಾಟದಲ್ಲಿ ವೆಸ್ಟ್ ಇಂಡೀಸ್ ತಂಡ ಗೆದ್ದು ಪ್ರಸಕ್ತ ವರ್ಷದ 2ನೇ ಟಿ20 ಗೆಲುವು ದಾಖಲಿಸಿದೆ. ಈ ನಡುವೆ ಮುಂಬೈನಲ್ಲಿ ನಡೆಯಲಿರುವ ಅಂತಿಮ ಟಿ20 ಫೈಟ್​ ಗೆಲುವು ಸಾಧಿಸುವ ತಂಡ ಸರಣಿ ತನ್ನದಾಗಿಸಿಕೊಳ್ಳುತ್ತೆ.ಆದರೆ, ಮುಂಬೈನ ವಾಂಖೆಡೆ ಅಂಗಳಲ್ಲಿ ಆ ಅಂಶದಲ್ಲಿ ಸರಣಿ ಯಾರಿಗೆ ಅನ್ನೊದನ್ನ ಡಿಸೈಡ್ ಮಾಡುತ್ತೆ. ಅದೇ ಸಿಕ್ಸರ್​.

ಟಿ20 ಕ್ರಿಕೆಟ್​ನಲ್ಲಿ ಹೆಚ್ಚು ಸಿಕ್ಸರ್​ ಸಿಡಿಸೋರೆ ಮ್ಯಾಚ್​ ಗೆಲ್ತಾರೆ ಅನ್ನೋದು ನಿಮ್ಮ ಮನಸ್ಸಿಗೆ ಥಟ್​ ಅಂತ ಹೊಳೆದಿರಬಹುದು. ಆದ್ರೆ, ಈ ಲೆಕ್ಕಚಾರ ತೆಗೆದುಕೊಂಡರೆ ಹೈದ್ರಾಬಾದ್​ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ಗೆಲುವಿನ ಕೇಕೆ ಹಾಕಬೇಕಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ವೆಸ್ಟ್ ಇಂಡೀಸ್​ ಬರೋಬ್ಬರಿ 15 ಸಿಕ್ಸರ್​​ಗಳನ್ನ ಚಚ್ಚಿ ಟೀಮ್ ಇಂಡಿಯಾಕ್ಕೆ ಬಿಗ್ ಟಾರ್ಗೆಟ್​ ಅನ್ನ ನೀಡಿತ್ತು. ಈ ಟಾರ್ಗೆಟ್​ ಚೇಸ್​ ಮಾಡಿದ್ದ ಟೀಮ್ ಇಂಡಿಯಾ 12 ಸಿಕ್ಸರ್​ ಬಾರಿಸೇ ಗೆಲುವಿನ ಕೇಕೆ ಹಾಕಿತ್ತು. ತಿರುವನಂತಪುರಂನಲ್ಲಿ ನಡೆದ ಸರಣಿಯಲ್ಲಿ ಟೀಮ್ ಇಂಡಿಯಾ 5 ಸಿಕ್ಸರ್​ ಬಾರಿಸಿದ್ರೆ. ವಿಂಡೀಸ್​ 12 ಸಿಕ್ಸರ್​ ಬಾರಿಸಿ ಗೆಲುವು ಸಾಧಿಸಿದೆ. ಆದರೆ, ಇದೀಗ ಇದೇ ರೀತಿ ಮುಂಬೈನಲ್ಲಿ ವಿಂಡೀಸ್​ ಸಿಕ್ಸರ್​ಗಳ ಮಳೆ ಸುರಿಸಿದ್ರೆ. ವೆಸ್ಟ್ ಇಂಡೀಸ್​ ಟಿ20 ಸರಣಿ ಗೆಲ್ಲುತ್ತೆ ಅನ್ನೋ ಮಾತುಗಳು ಕೇಳಿಬರ್ತಿವೆ.

ಇದಕ್ಕೆ ಸ್ಪಷ್ಟ ಉದಾಹರಣೆ 2016ರಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯ. ಆ ಪಂದ್ಯದಲ್ಲಿ ಟೀಮ್ ಇಂಡಿಯಾ ವಾಖೆಂಡೆ ಅಂಗಳದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೆಣಸಾಡಿತ್ತು. ಆ ಸೆಮಿಫೈನಲ್​ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಟೀಮ್ ಇಂಡಿಯಾ 193 ರನ್​​ಗಳ ಟಾರ್ಗೆಟ್​ ನೀಡಿತ್ತು. ಆ ಟಾರ್ಗೆಟ್​ ಬೆನ್ನತ್ತಿದ ವೆಸ್ಟ್ ಇಂಡೀಸ್ 19.4 ಓವರ್​ಗಳಲ್ಲೇ 3 ವಿಕೆಟ್​ ಕಳೆದುಕೊಂಡು 196 ರನ್ ಕಲೆಹಾಕಿತ್ತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 4 ಸಿಕ್ಸರ್​ ಮಾತ್ರ ಬಾರಿಸಿದ್ದರೆ. ವೆಸ್ಟ್​ ಇಂಡೀಸ್ 12 ಸಿಕ್ಸರ್​​​ಗಳನ್ನ ಬಾರಿಸಿತ್ತು. ಆದ್ರೆ, ಇದೀಗ ಅಂತಿಮ ಟಿ20 ಪಂದ್ಯವೂ ಮುಂಬೈನಲ್ಲಿ ನಡೆಯುತ್ತಿರುವ ಕಾರಣ ಸಿಕ್ಸರ್​ಗಳೇ ಸರಣಿ ಯಾರಿಗೆ ಅನ್ನೋದನ್ನ ಡಿಸೈಡ್ ಮಾಡುತ್ತೆ ಎನ್ನಲಾಗಿದೆ.

ಅದ್ರಲ್ಲೂ ಟಿ20 ಸ್ಪೆಷಲಿಸ್ಟ್​ ಬ್ಯಾಟ್ಸ್​ಮನ್​​ಗಳನ್ನೇ ಹೊಂದಿರುವ ವೆಸ್ಟ್ ಇಂಡೀಸ್​ ಈಗಾಗಲೇ ಸರಣಿಯಲ್ಲಿ 27 ಸಿಕ್ಸರ್​ಗಳನ್ನ ಸಿಡಿಸಿದೆ. ಟೀಮ್ ಇಂಡಿಯಾ ಕೇವಲ 17 ಸಿಕ್ಸರ್​​ಗಳನ್ನ ಬಾರಿಸಿದೆ. ಇದೆ ರೀತಿ ಮುಂಬೈ ಅಂಗಳದಲ್ಲಿ ಟೀಮ್ ಇಂಡಿಯಾ ಕಳಪೆ ಫಿಲ್ಡೀಂಗ್​ ಮುಂದುವರಿದರೇ ವೆಸ್ಟ್ ಇಂಡೀಸ್​ ಗೆದ್ದೆ ಗೆಲ್ಲುತ್ತೆ ಎನ್ನುತ್ತಿದ್ದಾರೆ ಕ್ರಿಕೆಟ್ ವಿಶ್ಲೇಷಕರು. ಹೀಗಾಗಿ ಟೀಮ್ ಇಂಡಿಯಾ ಮುಂಬೈನ ವಾಖೆಂಡೆ ಅಂಗಳದಲ್ಲಿ ನಡೆಯಲಿರುವ ಪಂದ್ಯದಲ್ಲಿ ಫೀಲ್ಡಂಗ್ ಹಾಗೂ ಬೌಲಿಂಗ್​ನಲ್ಲಿ ಕಮಾಲ್ ಮಾಡಲೇಬೇಕಿದೆ. ಆದ್ರೆ, ಅತ್ತ ವೆಸ್ಟ್​ ಇಂಡೀಸ್​ ಹೇಗಾದರೂ ಮಾಡಿ ಮುಂಬೈನಲ್ಲಿ ಗೆದ್ದು ವರ್ಷದ ಅಂತ್ಯಕ್ಕೆ ಗುಡ್​ ಬೈ ಹೇಳೋ ಉತ್ಸಾಹದಲ್ಲಿದೆ. ಇತಿಹಾಸ ಏನೇ ಹೇಳಿದ್ರೂ ಬ್ಲೂ ಟೈಗರ್ಸ್​ ತಿರುಗಿ ಬಿದ್ದರೆ ದೈತ್ಯರ ಸಂಹಾರ ಮಾಡೋದ್ರಲ್ಲಿ ಅನುಮಾನವೇ ಇಲ್ಲ

Next Story

RELATED STORIES