ದುಬೆ ಹೋರಾಟ ವ್ಯರ್ಥ: ವಿಂಡೀಸ್‍ಗೆ 8 ವಿಕೆಟ್​​ ಗಳ ಜಯ

ಕೇರಳ: ನಿನ್ನೆ ನಡೆದ ಇಂಡಿಯಾ-ವೆಸ್ಟ್​ ಇಂಡೀಸ್​ ಎರಡನೇ ಟಿ-20 ಪಂದ್ಯದಲ್ಲಿ ಟೀಮ್ ಇಂಡಿಯಾಗೆ 8 ವಿಕೆಟ್​ಗಳ ಭರ್ಜರಿ ಸೋಲನ್ನು ಕಂಡಿದೆ.

ಟಾಸ್​ ಗೆದ್ದು ಮೊದಲು ಪಿಲ್ಡಿಂಗ್​ ಆಯ್ದುಕೊಂಡ ವಿಂಡೀಸ್, ಭಾರತಕ್ಕೆ ಬ್ಯಾಟಿಂಗ್​ ಬಿಟ್ಟುಕೊಟ್ಟಿತು. ಭಾರತವು ಮೊದಲು ಬ್ಯಾಟಿಂಗ್​ ಮಾಡಿ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 170 ರನ್​ಗಳ ಕಲೆಹಾಕಿದರು.

ಭಾರತ ಪರ ಶಿವಂ ದುಬೆ 54 ರನ್ ಹಾಗೂ ರಿಷಭ್ ಪಂತ್​ 33 ರನ್​ ಕೆಲಹಾಕಿವ ಮೂಲಕ 170 ರನ್​ ಕಲೆಹಾಕುವಲ್ಲಿ ಭಾರತವು ಸಶಕ್ತವಾಯಿತು. ವಿಂಡೀಸ್​​ ಪರ ವಿಲಿಯಮ್ಸ್​ 2 ಹಾಗೂ ಹೇಡನ್ ವಾಲ್ಷ್ 2 ವಿಕೆಟ್ ಪಡೆದು ಭಾರತದ ಬ್ಯಾಟಿಂಗ್​ ಶಕ್ತಿಯನ್ನು ಕಟ್ಟಿಹಾಕಿದರು.

170 ರನ್​ ಗುರಿ ಬೆನ್ನತ್ತಿದ ವಿಂಡೀಸ್​, 18.3 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 173 ರನ್ ಕಲೆಹಾಕಿದರು. ಈ ಮೂಲಕ ಭಾರತವನ್ನು 8 ವಿಕೆಟ್​ಗಳಿಂದ ವಿಂಡೀಸ್​ ಬಗ್ಗುಬಡಿಯಿತು. ಭಾರತ-ವೆಸ್ಟ್​ ಇಂಡೀಸ್ 3 ಪಂದ್ಯಗಳ ಟಿ-20 ಯಲ್ಲಿ ತಲಾ ಒಂದೊಂದು ಪಂದ್ಯವನ್ನು ಎರಡು ಟೀಮ್​ಗಳು ಜಯಗಳಿಸಿವೆ.

3 ನೇ ಟಿ-20 ಪಂದ್ಯವು ಮುಂಬೈನಲ್ಲಿ ನಡೆಯುತ್ತಿದ್ದು ಈ ಪಂದ್ಯವನ್ನು ಯಾರು ಜಯಗಳಿಸುತ್ತಾರೆ ಅವರು ಟಿ-20 ಸರಣಿಯನ್ನು ತಮ್ಮ ಕೈವಶಪಡಿಸಿಕೊಳ್ಳಲಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *