ಇಂದು ಇಂಡೋ-ವಿಂಡೀಸ್​ ಸೆಕೆಂಡ್​ ಟಿ20 ಫೈಟ್: ಸರಣಿ ಗೆಲುವಿಗಾಗಿ ವಿರಾಟ್ ಪಡೆ ಸಜ್ಜು

ಕೇರಳ: ಇತ್ತೀಚೆಗೆ ಹೈದ್ರಾಬಾದ್​ನ ಉಪ್ಪಾಳ ಅಂಗಳದಲ್ಲಿ ವಿಂಡೀಸ್​ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದು ಬೀಗಿದೆ. ​ಈ ಖುಷಿಯಲ್ಲಿ ತೇಲಾಡುತ್ತಿರುವಾಗಲೇ ವಿರಾಟ್ ಪಡೆಗೆ ಮತ್ತೊಂದು ಸವಾಲು ಎದುರಾಗಿದೆ. ತಿರುವನಂತಪುರಂನ ಗ್ರೀನ್​​ಫೀಲ್ಡ್​ ಅಂಗಳದಲ್ಲಿ ಎರಡನೇ ಕದನ ನಡೆಯಲಿದ್ದು ಕೊಹ್ಲಿ ಪಡೆ ಇಂದಿನ ಪಂದ್ಯವನ್ನು ಗೆದ್ದು ಸರಣಿ ಕೈ ವಶ ಮಾಡಿಕೊಳ್ಳಲು ಪ್ಲ್ಯಾನ್ ಮಾಡಿದೆ.

ಇನ್ನು ಮೊದಲ ಟಿ20 ಪಂದ್ಯ ಸೋಲಿನಿಂದ ಕೆಂಗಟ್ಟಿರುವ ಕೀರನ್ ಪೊಲಾರ್ಡ್ ನೇತೃತ್ವದ ಕೆರಿಬಿಯನ್ ತಂಡ. ಸರಣಿ ಜೀವಂತವಾಗಿರಿಸಲು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಅಲ್ಲದೆ ಮೊದಲ ಪಂದ್ಯದ ಸೋಲಿನ ಸೇಡು ತೀರಿಸಿಕೊಳ್ಳಲು ಹೊಂಚುಹಾಕಿದ್ದು, ಹೊಸ ಗೇಮ್​​ ಪ್ಲಾನ್ ಮೂಲಕ ಕಣಕ್ಕಿಳಿಯುತ್ತಿದ್ದಾರೆ.

ಹೈದ್ರಾಬಾದ್​ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿರುವ ಟೀಮ್ ಇಂಡಿಯಾ, ತಿರುವನಂತಪುರಂನಲ್ಲೂ ಗೆಲುವಿನ ನಾಗಾಲೋಟ ಮುಂದುವರಿಸುವ ಉತ್ಸಾಹದಲ್ಲಿದೆ. ಮೊದಲ ಪಂದ್ಯದಲ್ಲಿ ಅದ್ಬುತ ಬ್ಯಾಟಿಂಗ್ ಪ್ರದರ್ಶಿಸಿದ್ದ ಕನ್ನಡಿಗ ಕೆ.ಎಲ್​ ರಾಹುಲ್ ಮತ್ತೊಮ್ಮೆ ಬಿಗ್ ಇನ್ನಿಂಗ್ಸ್ ಕಟ್ಟಬೇಕಿದೆ. ಜೊತೆಗೆ ಹೈದ್ರಾಬಾದ್​ ಅಂಗಳದಲ್ಲಿ ಬಿಗ್ ಇನ್ನಿಂಗ್ಸ್​ ಕಟ್ಟುವಲ್ಲಿ ವಿಫಲವಾಗಿದ್ದ ಹಿಟ್​ಮ್ಯಾನ್ ರೋಹಿತ್​ ಬಿಗ್ ಇನ್ನಿಂಗ್ಸ್ ಕಲೆಹಾಕಬೇಕಿದೆ. ಕ್ಯಾಪ್ಟನ್ ವಿರಾಟ್​ ಕೊಹ್ಲಿಯಿಂದ ಮತ್ತೆ ಮ್ಯಾಚ್​ ವಿನ್ನಿಂಗ್​ ಪರ್ಫಾಮನ್ಸ್​ ಮೂಡಿಬಂದರೆ, ಟೀಮ್ ಇಂಡಿಯಾ ಗೆಲುವಿನ ನಗೆ ಬೀರುವುದರಲ್ಲಿ ಅನುಮಾನವೇ ಇಲ್ಲ.

ಆದರೆ, ರಿಷಭ್ ಪಂತ್​, ಶ್ರೇಯಸ್​ ಅಯ್ಯರ್​ ಕೂಡ ಕ್ರೀಸ್​ನಲ್ಲಿ ಅಂಟಿಕೊಂಡು ಉತ್ತಮ ಜೊತೆಯಾಟವಾಡಬೇಕಿದ್ದು, ಜೊತೆಗೆ ಆಲ್​ರೌಂಡರ್​ ಜಡೇಜಾ, ಶಿವಂ ದುಬೆ, ವಾಷಿಂಗ್​ಟನ್ ಸುಂದರ್ ಸ್ಲಾಗ್​ ಓವರ್​ಗಳಲ್ಲಿ ಅಬ್ಬರಿಸಬೇಕಿದೆ ಅಲ್ಲದೆ ಸಂಜು ಸ್ಯಾಮ್ಸನ್ ತವರಿನಲ್ಲೇ ಮ್ಯಾಚ್​ ನಡೆಯುತ್ತಿದ್ದರು ಸಂಜುಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವುದು ಕೂಡ ಡೌಟ್ ಆಗಿದೆ.

​​ಕಳೆದ ಪಂದ್ಯದಲ್ಲಿ ಕಳಪೆ ಫೀಲ್ಡಿಂಗ್ ಮತ್ತು ದುಬಾರಿಯಾಗಿದ್ದ ಟೀಮ್ ಇಂಡಿಯಾ ಬೌಲರ್​ಗಳು ತಿರುವನಂತಪುರಂನಲ್ಲಿ ಕಮ್​ಬ್ಯಾಕ್ ಮಾಡಬೇಕಿದ್ದು, ಸ್ವಿಂಗ್ ಕಿಂಗ್ ಭುವನೇಶ್ವರ್​, ದೀಪಕ್​ ಚಹಾರ್​, ಯಜುವೇಂದ್ರ ಚಾಹಲ್ ಉತ್ತಮ ದಾಳಿ ಸಂಘಟಿಸಬೇಕಿದೆ. ಇವರಿಗೆ ಶಿವಂ ದುಬೆ, ವಾಷಿಂಗ್​​ಟನ್ ಸುಂದರ್​, ಜಡೇಜಾ ಉತ್ತಮ ಸಾಥ್​ ನೀಡೋದರ ಜೊತೆಗೆ ಮೊದಲ ಪಂದ್ಯದಲ್ಲಿ ಫೀಲ್ಡಿಂಗ್​​ನಲ್ಲಿ ಆಗಿದ್ದ ಎಡವಟ್ಟುಗಳನ್ನ ಸರಿಪಡಿಸಿಕೊಂಡರೇ ಟೀಮ್ ಇಂಡಿಯಾ ಗೆಲ್ಲೋದು ಪಕ್ಕ.

ಆದರೆ, ತಿರುವನಂತಪುರಂ ಗ್ರೀನ್​ಫೀಲ್ಡ್​ ಬ್ಯಾಟಿಂಗ್ ಸ್ನೇಹಿ ಪಿಚ್​ ಆಗಿದ್ದು ಬೌಲರ್​ಗಳಿಗೆ ಸವಾಲಿನಿಂದ ಕೂಡಿದೆ. ಹೀಗಾಗಿ ಮಹಮ್ಮದ್ ಶಮಿಗೆ ಸ್ಥಾನ ನೀಡುವ ಸಾಧ್ಯತೆ ದಟ್ಟವಾಗಿದೆ. ತಿರುವನಂತಪುರಂನಲ್ಲಿ ಟೀಮ್ ಇಂಡಿಯಾ ಇದುವರೆಗೂ ಒಂದೇ ಒಂದು ಪಂದ್ಯಆಡಿದ್ದು. ಒಂದು ಗೆಲುವನ್ನ ಕಂಡಿದೆ.

ವಿಶ್ವದ ಅತ್ಯಂತ ಅಪಾಯಕಾರಿ ಟಿ20 ತಂಡವೆಂದೇ ಗುರುತಿಸಲ್ಪಡುವ ವೆಸ್ಟ್‌ ಇಂಡೀಸ್‌ ಹೈದ್ರಾಬಾದ್​ ಹಾಗೂ ತವರಿನಲ್ಲಿ ವೈಟ್‌ವಾಶ್‌ ಮುಖಬಂಗದ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ. ಅದರಲ್ಲೂ ಮೊದಲ ಪಂದ್ಯದಲ್ಲಿ ಬ್ಯಾಟ್ಸ್​ಮನ್​ಗಳ ಅಬ್ಬರಿದಿಂದ ಬಿಗ್​ ಸ್ಕೋರ್ ಕಲೆಹಾಕಿದ್ದ ವೆಸ್ಟ್​ ಇಂಡೀಸ್​, ತಿರುವನಂತಪುರಂನಲ್ಲಿ ಹೊಸ ಯೋಜನೆಯೊಂದಿಗೆ ಕಣಕ್ಕಿಳಿಯುತ್ತಿದೆ. ಕಳೆದ ಪಂದ್ಯದಲ್ಲಿ ನಿಷೇಧದ ಕಾರಣ ಹೊರಗುಳಿದಿದ್ದ ವಿಂಡೀಸ್​ ಬಿಗ್‌ ಹಿಟ್ಟರ್‌ ನಿಕೋಲಸ್‌ ಪೂರನ್, ಇಂದಿನ ಪಂದ್ಯದಲ್ಲಿ ದಿನೇಶ್ ರಾಮ್​​ದಿನ್ ಬದಲಿಗೆ ನಿಕೋಲಸ್ ಪೂರನ್ ಕಣಕ್ಕಿಳಿಸುವ ಸಾಧ್ಯತೆ ಇದೆ.

ಇನ್ನು ಹೈದ್ರಾಬಾದ್​ ಅಂಗಳದಲ್ಲಿ ಅಬ್ಬರಿಸಿದ್ದ ಎವಿನ್ ಲಿವೀಸ್, ಶಿಮ್ರಾನ್ ಹೇಟ್ಮಾರ್​, ಕೀರನ್​ ಪೋಲಾರ್ಡ್, ಬ್ರೊನಾಂಡ್​ ಕಿಂಗ್, ಜೆಸನ್ ಹೋಲ್ಡರ್​ ಮತ್ತೊಮ್ಮೆ ರನ್ ಮಳೆ ಹರಿಸಲು ಪ್ಲಾನ್ ಮಾಡಿದ್ದಾರೆ. ಟಿ20 ಸ್ಪೆಷಲಿಸ್ಟ್​ ಬ್ಯಾಟ್ಸ್​ಮನ್​​ಗಳನ್ನ ಹೊಂದಿದ್ದು ಏಕಾಂಗಿಯಾಗಿ ಹೋರಾಡಿ ತಂಡವನ್ನ ಗೆಲುವಿನ ದಡ ಸೇರಿಸುವ ತಾಕತ್ತು ಹೊಂದಿದ್ದಾರೆ.

ಕಳೆದ ಪಂದ್ಯಗಳಲ್ಲಿ ವಿಂಡೀಸ್​ ಬೌಲರ್​​ಗಳಾದ ಶೆಲ್ಡನ್ ಕಾಟ್ರೆಲ್, ಜೆಸನ್ ಹೋಲ್ಡರ್​, ವಿಲಿಯಮ್ಸ್​ ದುಬಾರಿಯಾಗಿದ್ದು. ವಿಂಡೀಸ್​ ಕ್ಯಾಪ್ಟನ್ ಕೀರನ್ ಪೋಲಾರ್ಡ್​ಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಇಂದು ನಡೆಯಲಿರುವ ಟಿ20 ಫೈಟ್​ ಜಿದ್ದಾಜಿದ್ದಿನಿಂದ ಕೂಡಿರಲಿದ್ದು ಅಭಿಮಾನಿಗಳಿಗೆ ರಸದೌತಣ ನೀಡಲಿದೆ.

Recommended For You

About the Author: user

Leave a Reply

Your email address will not be published. Required fields are marked *