ವಿಂಡೀಸ್​ ಜೊತೆ ಗೆಲ್ಲಲು, ಕೊಹ್ಲಿ ಮಾಡಬೇಕಿದೆ ಈ ಐದು ಪ್ರಯೋಗ.!

ಕೇರಳ: ವಿಂಡೀಸ್ ವಿರುದ್ಧ ಇಂದು ಟೀಮ್ ಇಂಡಿಯಾ ಮತ್ತೊಂದು ಅಗ್ನಿ ಪರೀಕ್ಷೆ ಎದುರಿಸುತ್ತಿದೆ. ಮೊದಲ ಪಂದ್ಯದಲ್ಲಿ ಪ್ರಯಾಸದಿಂದ ಗೆದ್ದಿದ್ದ ಟೀಮ್ ಇಂಡಿಯಾ ಎರಡನೇ ಪಂದ್ಯವನ್ನು ಗೆದ್ದು ಸರಣಿ ಕೈವಶ ಮಾಡಿಕೊಳ್ಳಲೂ ಹೋರಾಡಲಿದೆ. ಅತ್ತ ಕೆರೆಬಿಯನ್ ದೈತ್ಯ ಟೀಮ್​ ಸೋಲಿಸುವುದು ಅಷ್ಟು ಸುಲಭದ ಮಾತಲ್ಲ. ಇದಕ್ಕಾಗಿ ಕ್ಯಾಪ್ಟನ್ ಕೊಹ್ಲಿ ಈ ಐದು ವೆಪನ್​ಗಳನ್ನ ಬಳಸಬೇಕಿದೆ.

ಮೊನ್ನೆ ಕೆರೆಬಿಯನ್ನರ ವಿರುದ್ಧ ವಿರಾಟ್ ಪಡೆ ತಿಣುಕಾಡಿ ಗೆಲ್ಲಲು ಕಾರಣವಾಗಿದ್ದು ತಂಡದ ಬೌಲಿಂಗ್ ಅಟ್ಯಾಕ್. ರನ್ ಹರಿಯುವ ಉಪ್ಪಾಳ್ ಅಂಗಳದಲ್ಲಿ ವಿಂಡೀಸ್ ಬ್ಯಾಟ್ಸ್​ಮನ್ಸ್​ ಗಳನ್ನ ಸುಲಭವಾಗಿ ಕಟ್ಟಿ ಹಾಕಬಹುದಿತ್ತು. ಆದರೆ, ಟೀಮ್ ಇಂಡಿಯಾ ಬೌಲರ್ಸ್​ಗಳ ಕಳಪೆ ಬೌಲಿಂಗ್​ನ ಲಾಭ ಪಡೆದ ವಿಂಡೀಸ್ ಬ್ಯಾಟ್ಸ್​ಮನ್​ಗಳು ತಂಡದ ಸ್ಕೋರನ್ನ 200ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

ಟೀಮ್ ಇಂಡಿಯಾ ವೇಗಿ ದೀಪಕ್ ಚಹರ್ 56 ರನ್ ಕೊಟ್ಟು ಕೇವಲ 1 ವಿಕೆಟ್ ಪಡೆದು ತಂಡದ ಪರ ದುಬಾರಿ ಬೌಲರ್ ಎನಿಸಿದರೆ, ಭುವನೇಶ್ವರ್ ಕುಮಾರ್ ಮತ್ತು ಯಜ್ವಿಂದರ್ ಚಹಲ್ 36 ರನ್ ಕೊಟ್ಟರು. ವಾಷಿಂಗ್ಟನ್ ಸುಂದರ್ ಮತ್ತು ರವೀಂದ್ರ ಜಡೇಜಾ ಕೇವಲ ಒಂದೊಂದು ವಿಕೆಟ್ ಪಡೆದರು. ಇಂದು ಟೀಮ್ ಇಂಡಿಯಾ ಬೌಲರ್ಸ್​ಗಳು ವಿಂಡೀಸ್ ಬ್ಯಾಟ್ಸ್​ಮನ್​ಗಳನ್ನ ಆಲೌಟ್ ಮಾಡಿದರೆ, ಟೀಮ್ ಇಂಡಿಯಾ ಸುಲಭವಾಗಿ ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ.

ಮೊನ್ನೆ ವೆಸ್ಟ್ ಇಂಡೀಸ್ ಬರೋಬ್ಬರಿ 208 ರನ್​ಗಳಿಸಲು ಪ್ರಮುಖವಾಗಿ ಕಾರಣವಾಗಿದ್ದು ಟೀಮ್ ಇಂಡಿಯಾದ ಕಳಪೆ ಫೀಲ್ಡಿಂಗ್. ಕ್ಯಾಪ್ಟನ್ ಕೊಹ್ಲಿ ಸೇರಿದಂತೆ ರೋಹಿತ್ ಶರ್ಮಾ ಮತ್ತು ವಾಷಿಂಗ್ಟನ್ ಸುಂದರ್ ಕ್ಯಾಚ್​ಗಳನ್ನ ಕೈಚೆಲ್ಲಿ ಪೊಲರ್ಡ್​ ಪಡೆಗೆ ಬಿಗ್ ಸ್ಕೋರ್ ಕಲೆ ಹಾಕಲು ನೆರವಾದರು. ಇಂದಿನ ಪಂದ್ಯದಲ್ಲಿ ವಿರಾಟ್ ಹುಡುಗ್ರು ಟೈಟ್ ಫೀಲ್ಡಿಂಗ್ ಮಾಡಿ ಅನಗತ್ಯ ರನ್​ಗಳಿಗೆ ಕಡಿವಣ ಹಾಕಬೇಕು.

ಟೀಮ್ ಇಂಡಿಯಾ ಇಂದು ಸರಣಿ ಗೆಲ್ಲಬೇಕಿದ್ದಲ್ಲಿ ತಂಡದ ಮಿಡ್ಲ್​ ಆರ್ಡರ್ ಬ್ಯಾಟ್ಸ್​ನ್​ಗಳು ಸಿಡಿಯಬೇಕು. ಮೊನ್ನೆ ಪಂದ್ಯದಲ್ಲಿ ಓಪನರ್ ಕೆ.ಎಲ್​ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದ ಕಾರಣ ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್​ಗೆ ಒತ್ತಡ ಕಡಿಮೆಯಾಯಿತು. ಇಷ್ಟಿದ್ದು ರಿಷಭ್ ಪಂತ್ 18 ಮತ್ತು ಶ್ರೇಯಸ್ ಅಯ್ಯರ್ 4 ರನ್ ಗಳಿಸಿದರು. ಹೀಗಾಗಿ ಇಂದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಮತ್ತು ರಿಷಬ್ ಪಂತ್ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಬೇಕಿದೆ.

ಟಿ20 ಫಾರ್ಮೆಟ್​ನಲ್ಲಿ ರೋಹಿತ್ ಪಂಟರ್. ಕ್ರೀಸ್​ಗೆ ರೋಹಿತ್ ಒಮ್ಮೆ ನೆಲ ಕಚ್ಚಿ ನಿಂತರೆ ಮುಗೀತು ಅಲ್ಲಿ ದಾಖಲೆಗಳೇ ನಿರ್ಮಾಣವಾಗಿರುತ್ತವೆ. ಮೊನ್ನೆ ಪಂದ್ಯದಲ್ಲಿ ರೋಹಿತ್ ಕೇವಲ 8 ರನ್ ಗಳಿಸಿ ಪೆವಿಲಿಯನ್ ಸೇರಿದ್ದರು. ಇಂದು ಗ್ರೀನ್ ಫೀಲ್ಡ್​ ಅಂಗಳ ಬ್ಯಾಟ್ಸ್​ಮನ್​ಗಳಿಗೆ ನೆರವು ನೀಡುವುದರಿಂದ ರೋಹಿತ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡಬೇಕಿದೆ.

ತಂಡದ ಯಂಗ್ ಆಲ್​ರೌಂಡರ್ ಶಿವಂ ದುಬೆ ಮೊನ್ನೆ ನಡೆದ ಪಂದ್ಯದಲ್ಲಿ ಫ್ಲಾಪ್ ಆಗಿದ್ದಾರೆ. ಆಡುವ ಹನ್ನೊಂದರ ಬಳಗದಲ್ಲಿ ದುಬೆ ಇದ್ದರು ಇಲ್ಲವೋ ಎನ್ನುವಂತೆ ಆಡಿದರು. ಒಂದೇ ಓವರ್​ನಲ್ಲಿ 13 ರನ್ ಕೊಟ್ಟ ದುಬೆ ನಂತರ ಓವರ್​ ಮಾಡಲಿಲ್ಲ. ದುಬೆ ಮಿಡ್ಲ್ ಓವರ್​ನಲ್ಲಿ ಎದುರಾಳಿ ಬ್ಯಾಟ್ಸ್​ಮನ್​ಗಳ ರನ್ ವೇಗಕ್ಕೆ ಕಡಿವಾಣ ಹಾಕಬೇಕು.

ಈ ಐದು ವೆಪನ್​ಗಳನ್ನು ಕ್ಯಾಪ್ಟನ್ ಕೊಹ್ಲಿ ಬಳಸಿದ್ದೆ ಆದಲ್ಲಿ ಟೀಮ್ ಇಂಡಿಯಾ ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ.

Recommended For You

About the Author: user

Leave a Reply

Your email address will not be published. Required fields are marked *