1000 ರನ್​ ಪೂರೈಸಿದ ಹಿನ್ನೆಲೆ: ಸಂದರ್ಶನದಲ್ಲಿ ಕೆ.ಎಲ್​ ರಾಹುಲ್​ಗೆ ಪ್ರಶ್ನಿಸಿದ ಚಹಲ್​.!

ಹೈದರಾಬಾದ್‌: ಇತ್ತೀಚೆಗೆ ನಡೆದ ಭಾರತ-ವೆಸ್ಟ್​ ಇಂಡೀಸ್ ಮೊದಲ ಟಿ-20ಯಲ್ಲಿ ಭಾರತವು ವಿಂಡೀಸ್ ವಿರುದ್ಧ ಆರು ವಿಕೆಟ್‌ಗಳಿಂದ ಗೆಲವು ಸಾಧಿಸಿತ್ತು.

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 94 ರನ್‌ಗಳಿಸಿ ಅಜೇಯರಾಗಿ ಉಳಿದಿದ್ದರೆ, ಕೆಎಲ್ ರಾಹುಲ್ ಅರ್ಧಶತಕದ ನೆರವಿನಿಂದ ಇನ್ನು ಎಂಟು ಎಸೆತಗಳು ಬಾಕಿ ಇರುವಾಗ ಕಠಿಣ ಗುರಿಯನ್ನು ಭಾರತವು ಬೆನ್ನಟ್ಟಿತು. ಈ ಪಂದ್ಯದ ನಂತರ ಯಜುವೇಂದ್ರ ಚಹಲ್ ಅವರು ಕೆ.ಎಲ್ ರಾಹುಲ್ ಅವರನ್ನು ಸಂದರ್ಶಿಸಿದರು.

ಈ ಸಂದರ್ಶನದ ಸಂಭಾಷಣೆಯಲ್ಲಿ ಯಜುವೇಂದ್ರ ಚಹಲ್​, ಸಾವಿರ್​ ರನ್​ ಪೂರೈಸಿದ ಕೆಎಲ್​ ರಾಹುಲ್​ ಅನ್ನು ಅಭಿನಂದಿಸಿದರು. ಇದೇ ವೇಳೆಯಲ್ಲಿ ಚಹಲ್​, ರಾಹುಲ್​ಗೆ ಈಗ ನೀವು 1000 ರನ್​ಗಳನ್ನು ತಲುಪಿದ್ದೀರಿ. ಟಿ-20 ಪಂದ್ಯಗಳಲ್ಲಿ ನೀವು ನನ್ನ ಮುಂದೆ ಎಷ್ಟು ರನ್​ಗಳಿಸಿದ್ದೀರಿ ಎಂದು ನಿಮಗೆ ತಿಳಿದಿದೇಯಾ? ಎಂದರು.

ಇದಕ್ಕೆ ನಗುತ್ತಾ ಉತ್ತರಿಸಿದ ಕೆ.ಎಲ್​ ರಾಹುಲ್​, ಘೋರ ಪ್ರತಿಕ್ರಿಯೆಯನ್ನು ನೀಡಿದರು. ನಾನು ನಿಮ್ಮ ಮುಂದೆ 999 ರನ್ ಗಳಿಸುತ್ತೇನೆ ಎಂದು ಚಹಲ್​ಗೆ ಹೇಳಿದರು.

ಈ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿತು. ಶಿಮ್ರಾನ್ ಹೆಟ್ಮಿಯರ್ ತಮ್ಮ ಚೊಚ್ಚಲ ಟಿ-20 ಪಂದ್ಯದಲ್ಲಿ ಅರ್ಧಶತಕವನ್ನು ಗಳಿಸಿದರೆ, ಎವಿನ್ ಲೂಯಿಸ್ ಹಾಗೂ ಕೀರನ್ ಪೊಲಾರ್ಡ್ ನೆರವಿನೊಂದಿಗೆ ವೆಸ್ಟ್ ಇಂಡೀಸ್ ತಂಡವು ಐದು ವಿಕೆಟ್‌ಗೆ 207 ರನ್ ಪೇರಿಸಿತ್ತ.

Recommended For You

About the Author: user

Leave a Reply

Your email address will not be published. Required fields are marked *