ಕ್ಯಾಪ್ಟನ್​ ಕೊಹ್ಲಿಯನ್ನು ಕೆಣಕಬೇಡಿ ಎಂದ ಬಾಲಿವುಡ್​ ಬಿಗ್​ ಬಿ​.!

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸದ್ಯ ಶಾಂತ ರೂಪರಾಗಿ ಕಾಣಬಹುದು ಆದರೆ ಅವರನ್ನು ಕೆಣಕಲು ಮಾತ್ರ ಹೋಗಬೇಡಿ ಎಂದು ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರು ಎದುರಾಳಿ ಬೌಲರ್‌ಗಳಿಗೆ ತಮ್ಮ ಟ್ವೀಟರ್​ ಮೂಲಕ ಎಚ್ಚರಿಕೆ ನೀಡಿದ್ದಾರೆ.

ವಿಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತವು 6 ವಿಕೆಟ್​ಗಳ ಭರ್ಜರಿ ಜಯಗಳಿಸಿದೆ. ಇದಕ್ಕೆ ಕಾರಣವಾಗಿದ್ದು ಟೀಂ ಇಂಡಿಯಾ ನಾಯಕ. ವಿರಾಟ್ ಕೊಹ್ಲಿ 50 ಎಸೆತಗಳಲ್ಲಿ 94 ರನ್ ಕಲೆಹಾಕಿ ಗೆಲುವಿನ ಸಿಹಿ ಉಣಿಸಿದ್ದರು.

ಅಲ್ಲದೆ ಕೊಹ್ಲಿಯ ಬ್ಯಾಟಿಂಗ್ ಆರ್ಭಟ ಕಂಡು ವಿಂಡೀಸ್ ಬೌಲರ್ ದಂಗಾಗಿ ಹೋಗಿದ್ದರು. ಎರಡು ವರ್ಷಗಳ ಹಿಂದೆ ಹೀಯಾಳಿಸಿದ್ದಕ್ಕೆ ವಿಂಡೀಸ್ ಬೌಲರ್ ವಿಲಿಯಮ್ಸ್ ಅವರ ವಿರುದ್ಧ ನಿನ್ನೆ ಸೇಡು ತೀರಿಸಿಕೊಂಡಿದ್ದರು. ಇದಕ್ಕೆ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಟ್ವೀಟ್ ಮಾಡಿ ಕೊಹ್ಲಿಯನ್ನು ಕೆಣಕಬೇಡಿ ಎಂದಿದ್ದಾರೆ.

ನಾನು ಎಷ್ಟು ಸಲ ಹೇಳಿದ್ದೇನೆ ವಿರಾಟ್ ಕೊಹ್ಲಿಯನ್ನು ಕೆಣಕಬೇಡಿ ಎಂದು. ಆದರೆ ನೀವು ಕೇಳುವುದಿಲ್ಲ. ಈಗ ಕೊಹ್ಲಿ ನಿಮಗೆ ಸರಿಯಾಗಿ ಉತ್ತರ ನೀಡಿದ್ದಾರೆ. ವಿಂಡೀಸ್​ ಮುಖಗಳನ್ನು ನೋಡಿ ಬಚ್ಚನ್, ಅಮರ್ ಅಕ್ಬರ್ ಅಂತೋನಿ ಶೈಲಿಯಲ್ಲಿ ವಿಂಡೀಸ್ ಬೌಲರ್​ಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಈ ಹಿಂದೆ 2017ರಲ್ಲಿ ವಿಂಡೀಸ್ ಪ್ರವಾಸದಲ್ಲಿ ಜಮೈಕಾ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ವಿಕೆಟ್ ಪಡೆದಿದ್ದ ವಿಲಿಯಮ್ಸ್ ಅಂದು ನೋಟ್ ಬುಕ್​ನಲ್ಲಿ ಬರೆದಿಡುವಂತೆ ಸನ್ಹೆ ಮಾಡಿದ್ದರು.

ಇದಾದ ಎರಡು ವರ್ಷಗಳ ಬಳಿಕ ವಿಲಿಯಮ್ಸ್​ಗೆ ಭರ್ಜರಿ ಸಿಕ್ಸರ್ ಬಾರಿಸಿದ ಮೇಲೆ ಕೊಹ್ಲಿ ಅದೇ ನೋಟ್ ಬುಕ್ ಸನ್ಹೆ ಮೂಲಕ ತಿರುಗೇಟು ನೀಡಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *