Top

ಜಾಹೀರಾತು ಲೋಕದಲ್ಲಿ ಗಗನಕ್ಕೇರಿದ ಹಿಟ್​ಮ್ಯಾನ್​​ ಬ್ರ್ಯಾಂಡ್

ಜಾಹೀರಾತು ಲೋಕದಲ್ಲಿ ಗಗನಕ್ಕೇರಿದ ಹಿಟ್​ಮ್ಯಾನ್​​ ಬ್ರ್ಯಾಂಡ್
X

ರೋಹಿತ್ ಶರ್ಮಾ, ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್. ಟೆಸ್ಟ್, ಏಕದಿನ ಮತ್ತು ಟಿ20 ಕ್ರಿಕೆಟ್. ಈ ಮೂರು ಫಾರ್ಮೆಟ್​ಗಳಲ್ಲೂ ಹಿಟ್​ಮ್ಯಾನ್ ಸಾಲಿಡ್ ಫಾರ್ಮ್​ನಲ್ಲಿದ್ದಾರೆ. ಟೀಮ್ ಇಂಡಿಯಾದ ಮೋಸ್ಟ್ ಡಿಮ್ಯಾಂಡಿಂಗ್ ಪ್ಲೇಯರ್ ಎನಿಸಿಕೊಂಡಿರುವ ರೋಹಿತ್​ ಶರ್ಮಾರ ಫ್ಯಾನ್​ ಕ್ಲಬ್,​ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗೇ ಜಾಹೀರಾತುದಾರರು ಅವರ ಹಿಂದೆ ಕ್ಯೂ ನಿಂತಿದ್ದಾರೆ.

ವಿಶ್ವಕಪ್‌ನಲ್ಲಿ 5 ಶತಕ ಬಾರಿಸಿ ಮಿಂಚಿದ್ದ ರೋಹಿತ್​ ಶರ್ಮಾ. ಟೆಸ್ಟ್‌ ಚಾಂಪಿಯನ್‌ಶಿಪ್ ಆರಂಭಗೊಂಡ ಬಳಿಕ ರೋಹಿತ್ ಟೆಸ್ಟ್ ಕ್ರಿಕೆಟ್‌ನಲ್ಲೂ ಅದ್ಭುತ ಆಟವನ್ನು ಪ್ರದರ್ಶಿಸುತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನೀಡಿದ ಅಮೋಘ ಪ್ರದರ್ಶನ ರೋಹಿತ್ ಹೆಸರನ್ನು ಕ್ರೀಡಾ ವಲಯದಲ್ಲಿ ಮಾತ್ರವಲ್ಲ ಜಾಹೀರಾತು ವಲಯದಲ್ಲೂ ಭರ್ಜರಿ ಮಾರ್ಕೆಟ್ ಸೃಷ್ಠಿಸಿದೆ. ಇಲ್ಲಿಯವರೆಗೂ ಹತ್ತು ಬ್ರ್ಯಾಂಡ್‌ಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದ ರೋಹಿತ್ ಶರ್ಮಾ ಇದನ್ನು 22ಕ್ಕೆ ಏರಿಸಿಕೊಂಡಿದ್ದಾರೆ. ಈ ಜಾಹೀರಾತುಗಳಿಂದ ರೋಹಿತ್​ ಶರ್ಮಾ ಕೊಟಿ ಕೋಟಿ ವಾರ್ಷಿಕ ಆದಾಯ ಪಡೆಯುತ್ತಿದ್ದಾರೆ.

ಈ ವರ್ಷ ಒಟ್ಟು 10 ಜಾಹೀರಾತು ಕಂಪೆನಿಗಳ ಜೊತೆ ಒಪ್ಪಂದ ಮಾಡಿಕೊಂಡಿರುವ ರೋಹಿತ್, ಒಟ್ಟು 22 ಬ್ರ್ಯಾಂಡ್‌ಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಮೂಲಕ ರೋಹಿತ್ ಸಹಿ ಮಾಡಿರುವ ಜಾಹೀರಾತುಗಳ ಪರ್ಸಂಟೇಜ್, ಶೇಕಡ 55ಕ್ಕೆ ಏರಿಕೆಯಾಗಿದೆ. ಒಟ್ಟು 22 ಜಾಹೀರಾತು ಕಂಪೆನಿಗಳ ರಾಯಬಾರಿಯಾಗಿರುವ ಮುಂಬೈಕರ್ ರೋಹಿತ್ ಶರ್ಮಾ, ವಾರ್ಷಿಕ ಅಂದಾಜು ಸುಮಾರು 100 ಕೋಟಿ ರೂ. ಪಡೆಯುತ್ತಿದ್ದಾರೆ. ಇನ್ನು ಜಾಹೀರಾತುದಾರರಿಗೆ ರೋಹಿತ್ ದಿನಕ್ಕೆ 1 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಜಾಹೀರಾತು ಒಪ್ಪಂದದ ಪ್ರಕಾರ ವಾರ್ಷಿಕ ಕನಿಷ್ಟ 2 ದಿನ ರೋಹಿತ್ ಶರ್ಮಾ ಪ್ರಚಾರ ಕಾರ್ಯಗಳಿಗೆ ಬಳಸಿಕೊಳ್ಳಬೇಕಿದೆ.

ಟೀಮ್ ಇಂಡಿಯಾ ಕ್ಯಾಪ್ಟನ್​ ವಿರಾಟ್ ಕೊಹ್ಲಿ 25 ಬ್ರ್ಯಾಂಡ್‌ಗಳ ಜೊತೆ ಒಪ್ಪಂದ ಮಾಡಿಕೊಂಡಿದ್ರೆ. ಮಿಸ್ಟರ್​ ಕೂಲ್​​ ಧೋನಿ 12 ಬ್ರ್ಯಾಂಡ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ ಇವರಿಬ್ಬರು ಈ ಜಾಹೀರಾತಿನಿಂದ ರೊಹಿತ್ ಶರ್ಮಾಗಿಂತ ಮೂರರಿಂದ ನಾಲ್ಕು ಪಟ್ಟು ಹೆಚ್ಚಿನ ಆದಾಯ ಪಡೆಯುತ್ತಿದ್ದಾರೆ. ಅಲ್ಲದೆ ತಂಡದ ಇತರೆ ಆಟಗಾರರಿಗಿಂತ ಹೆಚ್ಚು ಜಾಹೀರಾತುಗಳಿಗೆ ಒಪ್ಪಂದಗಳಿಗೆ ರೋಹಿತ್ ಶರ್ಮಾ ಮೈದಾನದಲ್ಲಿ ತೋರುತ್ತಿರುವ ಪ್ರದರ್ಶನವೇ ಈ ಪ್ರಮಾಣದಲ್ಲಿ ಮೌಲ್ಯ ಹೆಚ್ಚಿಸಿಕೊಳ್ಳಲು ಕಾರಣವಾಗಿದೆ ಎನ್ನಲಾಗಿದೆ.

Next Story

RELATED STORIES