ಕೊಹ್ಲಿ ಬೆನ್ನಿಗೆ ನಿಂತ ಮಾಜಿ ಡೆಲ್ಲಿ ಡ್ಯಾಶರ್.!

ನವದೆಹಲಿ: ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಇತ್ತಿಚೆಗೆ ನೀಡಿದ ಒಂದು ಹೇಳಿಕೆ ಭಾರತ ಕ್ರಿಕೆಟ್​ನಲ್ಲಿ ಭಾರೀ ಚರ್ಚೆಗೀಡು ಮಾಡಿತ್ತು. ಮೊನ್ನೆ ಈಡನ್ ಅಂಗಳದಲ್ಲಿ ಬಾಂಗ್ಲಾ ವಿರುದ್ಧ ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಗೆದ್ದಾಗ ಟೀಮ್ ಇಂಡಿಯಾ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

ಪಂದ್ಯ ಗೆದ್ದ ಬಳಿಕ ವಿರಾಟ್ ಕೊಹ್ಲಿ ನೀಡಿದ ಒಂದು ಹೇಳಿಕೆ ತಂಡದ ಮಾಜಿ ನಾಯಕ ಸುನಿಲ್ ಅವರನ್ನು ಕೆಂಡಾಮಂಡಲರಾಗುವಂತೆ ಮಾಡಿತ್ತು. ಪಿಂಕ್ ಬಾಲ್ ಪಂದ್ಯ ಗೆದ್ದ ಬಳಿಕ ವಿರಾಟ್ ಕೊಹ್ಲಿ, ಟೀಂ ಇಂಡಿಯಾದ ಗೆಲುವಿನ ಪರಿಪಾಠ ಸೌರವ್ ಗಂಗೂಲಿಯಿಂದ ಆರಂಭಗೊಂಡಿತು. ನಾವು ಮುಂದುವರಿಸುತ್ತಿದ್ದೇವೆ ಎಂದಿದ್ದರು. ಇದು ಭಾರತ ಕ್ರಿಕೆಟ್​ ವಲಯದಲ್ಲಿ ಭಾರಿ ಪರ-ವಿರೋಧಗಳ ಚರ್ಚೆ ನಡೆಯುತ್ತಿವೆ.

ಕೊಹ್ಲಿ ಹೇಳಿಕೆಗೆ ಮಾಜಿ ನಾಯಕ ಸುನಿಲ್ ಗವಾಸ್ಕರ್ ತಿರುಗೇಟು ನೀಡಿ, ಕೊಹ್ಲಿಗೆ ಸರಿಯಾಗಿ ಬಿಸಿ ಮುಟ್ಟಿಸಿದರು. ಸೌರವ್ ಗಂಗೂಲಿ ಅಧ್ಯಕ್ಷ ಎನ್ನೋ ಕಾರಣಕ್ಕೆ ಕೊಹ್ಲಿ ಆ ರೀತಿ ಹೇಳಿಕೆ ನೀಡಿದ್ದಾರೋ ತಿಳಿದಿಲ್ಲ. ಆದರೆ ಕೊಹ್ಲಿ ಒಂದು ಅರ್ಥಮಾಡಿಕೊಳ್ಳಬೇಕು, ಟೀಂ ಇಂಡಿಯಾ 2000 ಇಸವಿ ಬಳಿಕ ಗೆಲುವಿನ ಲಯಕ್ಕೆ ಬಂದಿರುವುದಲ್ಲ. 1970-80ರ ದಶಕದಲ್ಲಿ ವಿದೇಶಿ ನೆಲದಲ್ಲಿ ಗೆಲುವು ಸಾಧಿಸಿದೆ. ಈ ವೇಳೆ ಕೊಹ್ಲಿ ಹುಟ್ಟಿರಲಿಲ್ಲ ಎಂದು ಗವಾಸ್ಕರ್ ಹೇಳಿದ್ದಾರೆ.

ಹಲವರು ಭಾರತೀಯ ಕ್ರಿಕೆಟ್ ಆರಂಭವಾಗಿರುವುದು 2000ನೇ ಇಸವಿಯಲ್ಲಿ ಎಂದುಕೊಂಡಿದ್ದಾರೆ. 1970ರಲ್ಲಿ ಭಾರತ ತಂಡ ವಿದೇಶದಲ್ಲಿ ಸರಣಿ ಗೆದ್ದಿತ್ತು.1986ರಲ್ಲೂ ವಿದೇಶಿ ಪ್ರವಾಸದಲ್ಲಿ ಸರಣಿ ಗೆದ್ದಿತ್ತು. ಸರಣಿ ಡ್ರಾ ಕೂಡ ಮಾಡಿಕೊಂಡಿದೆ. ತಿರುಗೇಟು ನೀಡುವುದು, ವಿದೇಶದಲ್ಲಿ ಗೆಲುವು ಸಾಧಿಸಿವುದು 1970ರಲ್ಲೇ ಇತ್ತು ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಬಿಸಿಸಿಐ ಅಧ್ಯಕ್ಷನನ್ನು ಮೆಚ್ಚಿಸಲು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಗವಾಸ್ಕರ್ ಹೇಳಿದರು.

ಸುನೀಲ್ ಗಾವಸ್ಕರ್ ವಿರಾಟ್ ಕೊಹ್ಲಿಯನ್ನ ತರಾಟೆಗೆ ತೆಗೆದುಕೊಂಡ ಬೆನ್ನ್ಲಲೆ ತಂಡದ ಮಾಜಿ ಓಪನರ್ ಗೌತಮ್ ಗಂಭೀರ್ ಕ್ಯಾಪ್ಟನ್ ವಿರಾಟ್ ಕೊಹ್ಲಿ ಪರ ಬ್ಯಾಟ್ ಬೀಸಿದ್ದಾರೆ. ಯಾವಗಲೂ ವಿವಾದದಲ್ಲೆ ಕಾಲ ಕಳೆಯುವ ಗಂಭೀರ್ ಕ್ಯಾಫ್ಟನ್ ವಿರಾಟ್ ಕೊಹ್ಲಿ ಜೊತೆಗಿನ ಸಂಬಂಧ ಅಷ್ಟಕಷ್ಟೆ. 2013ರ ಐಪಿಎಲ್​ನಲ್ಲಿ ವಿರಾಟ್ ಮತ್ತು ಗಂಭೀರ್ ಆನ್ ಫೀಲ್ಡ್​ನಲ್ಲೆ ಕಿತ್ತಾಡಿಕೊಂಡಿದರು.

ಇಷ್ಟೆ ಅಲ್ಲ ಇತ್ತಿಚೆಗಷ್ಟೆ ಧೋನಿ ಮತ್ತು ರೋಹಿತ್​ನಂತೆ ವಿರಾಟ್ ಕೊಹ್ಲಿ ಐಪಿಎಲ್​ನಲ್ಲಿ ಏನು ಸಾಧನೆ ಮಾಡಿಲ್ಲ ಎಂದು ಹೇಳಿ ಕೊಹ್ಲಿಯ ಕಣ್ಣು ಕೆಂಪಾಗುವಂತೆ ಮಾಡಿದರು. ಸಂಕುಚಿತ ಮನೋಭಾವ ಹೊಂದಿರುವ ಗಂಭಿರ್ ಇತ್ತಿಚೆಗೆ 2011ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶತಕ ತಪ್ಪಲು ಧೋನಿಯೇ ಕಾರಣ ಎಂದು ಹೇಳಿ ಭಾರೀ ವಿವಾದ ಸೃಷ್ಟಿಸಿದ್ದರು.

ಅಚ್ಚರಿ ಎಂಬಂತೆ ಇದೀಗ ಗಂಭೀರ್ ಬಿಗ್ ಬಾಸ್ ಗಂಗೂಲಿ ವಿಷಯದಲ್ಲಿ ಕೊಹ್ಲಿ ಪರ ಬ್ಯಾಟ್ ಮಾಡಿದ್ದಾರೆ. ವಿದೇಶದಲ್ಲಿ ನಾವು ಹೆಚ್ಚು ಹೆಚ್ಚು ಪಂದ್ಯಗಳನ್ನ ಗೆಲ್ಲಲು ಆರಂಭಿಸಿದ್ದು ಸೌರವ್​ ಗಂಗೂಲಿ ನೇತೃತ್ವದಲ್ಲಿ. ವಿರಾಟ್ ಏನು ಹೇಳಿದ್ದಾರೋ ಅದನ್ನ ಒಪ್ಪಿಕೊಳ್ಳುತ್ತೇನೆಂದು ಗೌತಿ ಹೇಳಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *