ಒಂದೇ ದಶಕದಲ್ಲಿ ವಿಶ್ವ ಕ್ರಿಕೆಟ್​ ಆಳಿದ ಕ್ಯಾಪ್ಟನ್​ ಕೊಹ್ಲಿ.!

ಬೆಂಗಳೂರು: ಕಳೆದ ಒಂದು ದಶಕದಲ್ಲಿ ಎಲ್ಲ ತಂಡಗಳಲ್ಲೂ ಮಿಶ್ರ ಪ್ರದರ್ಶನವನ್ನ ನೋಡಿದ್ದೇವೆ. ಅದರಲ್ಲೂ ಟೀಮ್ ಇಂಡಿಯಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಕಠಿಣ ಪ್ರದರ್ಶನ ಕೊಟ್ಟು ಬಲಿಷ್ಠ ತಂಡಗಳಾಗಿ ಗುರುತಿಸಿಕೊಂಡಿವೆ.

ಕೆಲವು ಆಟಗಾರರು ತಮ್ಮ ಟ್ಯಾಲೆಂಟ್ ಮೂಲಕ ವಿಶ್ವ ಕ್ರಿಕೆಟ್​ನಲ್ಲಿ ಮಿಂಚಿದ್ದಾರೆ. ಇನ್ನು ಕೆಲವರು ಕ್ರಿಕೆಟ್​ನ ತೆರೆಮರೆ ಸೇರಿದ್ದಾರೆ. ಆದರೆ ಈ ಆಟಗಾರ ಮಾತ್ರ ಇಡೀ ವಿಶ್ವ ಕ್ರಿಕೆಟನ್ನೆ ಆಳಿದ್ದಾರೆ. ಇವರು ಬೇರೆ ಯಾರು ಅಲ್ಲ ವಿಶ್ವ ಕ್ರಿಕೆಟ್​ನ ರನ್ ಮಷೀನ್ ವಿರಾಟ್ ಕೊಹ್ಲಿ.

2008ರಲ್ಲಿ ಡೆಬ್ಯೂ ಮಾಡಿದ ವಿರಾಟ್ ಕೊಹ್ಲಿ ಸ್ಥಿರ ಪ್ರದರ್ಶನ ನೀಡಲು ಎರಡು ವರ್ಷಗಳೇ ಬೇಕಾಯಿತು. ಆಗಷ್ಟೆ ಕ್ರಿಕೆಟ್ ಪಾಠ ಕಲಿಯುತ್ತಿದ್ದ ವಿರಾಟ್ ತಪ್ಪುಗಳನ್ನ ಫಿಟ್ನೆಸ್ ಮತ್ತು ಟ್ರೇನಿಂಗ್ ಸೆಷನ್ ಮೂಲಕ ಬೇಗ ಕರಗತ ಮಾಡಿಕೊಂಡರು. ಮುಂದಿನ ವರ್ಷದಲ್ಲಿ ಸಾಮ್ರಾಟನಾಗಲು ಎಲ್ಲ ತಯಾರಿಯನ್ನ ಮಾಡಿಕೊಂಡರು. ಈ ದಶಕ ವಿರಾಟ್ ಕೊಹ್ಲಿಯ ದಶಕ ಅಂದರೆ ತಪ್ಪಾಗೋದಿಲ್ಲ.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಇದುವರೆಗೂ 380 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ 20,688 ರನ್ ಕಲೆ ಹಾಕಿದ್ದಾರೆ. ಇದಲ್ಲದೇ ಮೂರು ಫಾರ್ಮೆಟ್​ನಲ್ಲೂ 50ಕ್ಕಿಂತ ಹೆಚ್ಚು ಎವರೇಜ್ ಹೊಂದಿರುವ ವಿಶ್ವದ ಏಕೈಕ ಬ್ಯಾಟ್ಸ್​ಮನ್ ಆಗಿದ್ದಾರೆ.

ಕಳೆದ ಜೂನ್​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ 20 ಸಾವಿರ ರನ್ ಅಂತಾರಾಷ್ಟ್ರೀಯ ರನ್ ಪೂರೈಸಿ ಕ್ರಿಕೆಟ್​ ಲೋಕದ ದೇವರು ಆಗಿರತಕ್ಕಂತ ಸಚಿನ್ ತೆಂಡೂಲ್ಕರ್ ಮತ್ತು ಬ್ರಿಯಾನ್ ಲಾರಾ ಅವರ ದಾಖಲೆಯನ್ನ ಅಳಿಸಿ ಹಾಕಿದರು. 20 ಸಾವಿರ ರನ್ ಪೂರೈಸಲು ಸಚಿನ್ ಮತ್ತು ಲಾರಾ 453 ಇನ್ನಿಂಗ್ಸ್ ತೆಗೆದುಕೊಂಡಿದ್ದರೆ, ವಿರಾಟ್ ಕೊಹ್ಲಿ 417 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ. ಅಂದರೆ, ಸಚಿನ್ ಹಾಗೂ ಲಾರಾ ಗಿಂತ ಕೊಹ್ಲಿ 36 ಇನ್ನಿಂಗ್ಸ್ ಮುಂಚಿತವಾಗಿ 20 ಸಾವಿರ ರನ್ ಪೂರೈಸಿದ್ದಾರೆ.

ಇದುವರೆಗೂ ಟೆಸ್ಟ್ ಫಾರ್ಮೆಟ್​​ನಲ್ಲಿ ವಿರಾಟ್ 8,818 ರನ್ ಏಕದಿನ ಫಾರ್ಮೆಟ್​ನಲ್ಲಿ 11,036 ಮತ್ತು ಟಿ20 ಫಾರ್ಮೆಟ್​ನಲ್ಲಿ 2,450 ರನ್ ಕಲೆ ಹಾಕಿದ್ದಾರೆ. ಟೆಸ್ಟ್ ನಲ್ಲಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ಆಲಿಸ್ಟರ್ ಕುಕ್ ಅಬ್ಬರಿಸಿದರೆ, ಏಕದಿನ ಮತ್ತು ಟಿ20ಯಲ್ಲಿ ವಿರಾಟ್ ಕೊಹ್ಲಿ ಸಾಮ್ರಾಟನಾಗಿದ್ದಾರೆ.

ಕೊಹ್ಲಿ ಇದುವರೆಗೂ 27 ಟೆಸ್ಟ್ ಶತಕ, 42 ಏಕದಿನ ಶತಕ, 7 ದ್ವಿಶತಕ ಒಟ್ಟು 69 ಅಂತಾರಾಷ್ಟ್ರೀಯ ಶತಕಗಳನ್ನ ಸಿಡಿಸಿದ್ದಾರೆ. ಕ್ರಿಕೆಟ್​ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನ ಯಾರದ್ರು ಮುರಿಯುವವರು ಇದ್ದರೆ, ಅದು ವಿರಾಟ್ ಕೊಹ್ಲಿ ಎಂದು ಕ್ರಿಕೆಟ್ ಪಂಡಿತರು ಹೇಳುತ್ತಿದ್ದಾರೆ.

ಕ್ಯಾಪ್ಟನ್ ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್​ನಲ್ಲಿ ಇನ್ನಷ್ಟು ರನ್ ಮಳೆ ಸುರಿಸಿ ಆದಷ್ಟು ಬೇಗನೆ ವಿಶ್ವ ಕ್ರಿಕೆಟ್​ನಲ್ಲಿ ಮತ್ತೊಂದು ಮೈಲುಗಲ್ಲನ್ನ ಮುಟ್ಟಿಲಿ ಎನ್ನುವುದು ಕ್ರಿಕೆಟ್​ ಅಭಿಮಾನಿಗಳ ಆಶಯ.

Recommended For You

About the Author: user

Leave a Reply

Your email address will not be published. Required fields are marked *