ಈಡನ್ ಅಂಗಳದಲ್ಲಿ ವಿಶ್ವ ದಾಖಲೆ ಬರೆದ ಕೊಹ್ಲಿ ಸೈನ್ಯ .!

ಕೊಲ್ಕತ್ತಾ: ಬಾಂಗ್ಲಾ ವಿರುದ್ಧದ ಐತಿಹಾಸಿಕ ಹೊನಲು ಬೆಳಕಿನ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್​ನಲ್ಲಿ ಸಾಮ್ರಾಟ ಎನ್ನುವುದನ್ನು ಪ್ರೂವ್ ಮಾಡಿದೆ. ಜೊತೆಗೆ ಹಲವಾರು ದಾಖಲೆಗಳನ್ನು ಮುಡಿಗೇರಿಸಿಕೊಂಡಿದೆ.

ಬಾಂಗ್ಲಾ ವಿರುದ್ಧ ಎರಡನೇ ಪಂದ್ಯದಲ್ಲೂ ಟೀಮ್ ಇಂಡಿಯಾ ಗೆಲ್ಲುವ ಮೂಲಕ ಸತತ ಏಳನೇ ಪಂದ್ಯ ಗೆದ್ದ ಸಾಧನೆ ಮಾಡಿತು. ಕಳೆದ ಆಗಸ್ಟ್​ನಿಂದ ವೆಸ್ಟ್ ಇಂಡೀಸ್ ವಿರುದ್ಧ 2, ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯ ಮತ್ತು ಇದೀಗ ಬಾಂಗ್ಲಾ ವಿರುದ್ಧ ಗೆಲ್ಲುವ ಮೂಲಕ ಟೆಸ್ಟ್ ಕ್ರಿಕೆಟ್​ನಲ್ಲಿ ಸತತ 7ನೇ ಗೆಲುವು ಕಂಡಿತು.

ಸತತ ಏಳು ಪಂದ್ಯಗಳನ್ನು ಗೆಲ್ಲುವ ಮೂಲಕ ಕ್ಯಾಪ್ಟನ್ ವಿರಾಟ್ ಕೊಹ್ಲಿ ತಂಡದ ಮಾಜಿ ನಾಯಕ ಧೋನಿ ಅವರ ದಾಖಲೆಯನ್ನ ಅಳಿಸಿ ಹಾಕಿದ್ದಾರೆ. 2013ರಲ್ಲಿ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಎರಡು ಪಂದ್ಯ ಗೆದ್ದು ಸತತ ಒಟ್ಟು ಆರು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದರು. ಇದೀಗ ಈ ದಾಖಲೆಯನ್ನ ಕ್ಯಾಪ್ಟನ್ ವಿರಾಟ್​ ಅಳಿಸಿ ಹಾಕಿದ್ದಾರೆ.

ಟೀಮ್ ಇಂಡಿಯಾ ಬಾಂಗ್ಲಾ ವಿರುದ್ಧ ಇನ್ನಿಂಗ್ಸ್ ಹಾಗೂ 46 ರನ್​ಗಳ ಅಂತರದಿಂದ ಗೆಲ್ಲುವ ಮೂಲಕ ಸತತ ನಾಲ್ಕನೆ ಬಾರಿಗೆ ಇನ್ನಿಂಗ್ಸ್ ಗೆಲುವು ದಾಖಲಿಸಿ ವಿಶ್ವ ದಾಖಲೆ ಬರೆದಿದೆ. ಇತ್ತಿಚೆಗೆ ದಕ್ಚಿಣ ಆಫ್ರಿಕಾ ವಿರುದ್ಧ ಪುಣೆ ಪಂದ್ಯದಲ್ಲಿ ಟೀಮ್ ಇಂಡಿಯಾ ಇನ್ನಿಂಗ್ಸ್ ಮತ್ತು 137 ರನ್​ಗಳೊಂದಿಗೆ ಗೆದ್ದಿತ್ತು ನಂತರ ರಾಂಚಿ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 202 ರನ್ ಗಳಿಂದ ಗೆಲುವು ಸಾಧಿಸಿತ್ತು.

ಇನ್ನು ಬಾಂಗ್ಲಾ ವಿರುದ್ದ ಇಂದೋರ್​ನಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಪಡೆ ಇನ್ನಿಂಗ್ಸ್ ಹಾಗೂ 130 ರನ್ ಗೆಲುವು, ಇದೀಗ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 46 ರನ್ ಗೆಲುವು ದಾಖಲಿಸಿದೆ.

ಬಾಂಗ್ಲಾ ವಿರುದ್ಧ ಈಡನ್ ಅಂಗಳದಲ್ಲಿ ಗೆಲ್ಲುವ ಮೂಲಕ ಟೀಮ್ ಇಂಡಿಯಾ ತವರಿನಲ್ಲಿ ಸತತ 12ನೇ ಟೆಸ್ಟ್ ಸರಣಿ ಗೆದ್ದ ಸಾಧನೆ ಮಾಡಿದೆ. ವಿಶ್ವ ಕ್ರಿಕೆಟ್​ನ ಬಲಿಷ್ಠ ತಂಡ ಆಸ್ಟ್ರೇಲಿಯಾ ತವರಿನಲ್ಲಿ 10 ಸರಣಿ ಗೆದ್ದಿತ್ತು. ಈ ದಾಖಲೆಯನ್ನ ಈಗಾಗಲೇ ವಿರಾಟ್ ಪಡೆ ಮುರಿದಿದ್ದು ತವರಿನಲ್ಲಿ ಗೆಲುವಿನ ಓಟವನ್ನು ಮುಂದುವರೆಸಿದ್ದಾರೆ.

ಬಾಂಗ್ಲಾ ವಿರುದ್ಧ 2-0 ಅಂತರದಿಂದ ಸರಣಿ ಗೆಲ್ಲುವ ಮೂಲಕ ಕ್ಯಾಪ್ಟನ್ ಕೊಹ್ಲಿ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಅಲನ್ ಬಾರ್ಡರ್ ಅವರ ದಾಖಲೆಯನ್ನ ಮುರಿದಿದ್ದಾರೆ. ಆಸಿಸ್ ಮಾಜಿ ನಾಯಕ ಅಲನ್ ಬಾರ್ಡರ್ ತಮ್ಮ ನಾಯಕತ್ವದಲ್ಲಿ 32 ಟೆಸ್ಟ್ ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ. ಇದೀಗ ಕ್ಯಾಪ್ಟನ್ ವಿರಾಟ್ ಕೊಹ್ಲಿ 33ನೇ ಪಂದ್ಯವನ್ನ ಗೆದ್ದು ಬಾರ್ಡರ್ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

ಈ ಡೇ ಆ್ಯಂಡ್​ ನೈಟ್​ ಟೆಸ್ಟ್ ಪಂದ್ಯವನ್ನು ವಿರಾಟ್ ಪಡೆ ಗೆಲ್ಲುವುದರ ಜೊತೆಗೆ ಹಲವಾರು ದಾಖಲೆಗಳನ್ನ ಬರೆದು ಟೆಸ್ಟ್ ಸಾಮ್ರಾಟ ಅನ್ನೋದನ್ನು ಮತ್ತೊಮ್ಮೆ ಪ್ರೂವ್ ಮಾಡಿದೆ.

Recommended For You

About the Author: user

Leave a Reply

Your email address will not be published. Required fields are marked *