ವಿಶ್ವ ಕ್ರಿಕೆಟ್​ಗೆ ಸಿಕ್ಕಿದ್ದಾನೆ ಮತ್ತೊಬ್ಬ ಸೆಲ್ಯೂಟ್ ವೀರ.!

ಕೊಲ್ಕತ್ತಾ: ಭಾರತ-ಬಾಂಗ್ಲಾ ನಡುವಿನ 2 ನೆ ಟೆಸ್ಟ್ ಪಂದ ನಿನ್ನೆ ಕ್ರಿಕೆಟ್ ಕಾಶಿ ಕೋಲ್ಕತ್ತಾದ ಈಡನ್ ಅಂಗಳದಲ್ಲಿ ಹೊನಲು ಬೆಳಕಿನ ಟೆಸ್ಟ್ ಪಂದ್ಯಕ್ಕೆ ಅದ್ದೂರಿ ಚಾಲನೆ ಸಿಕ್ಕಿತ್ತು. ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾ ಪಿಂಕ್ ಬಾಲ್​ನಲ್ಲಿ ಆಡುವುದನ್ನು ಕ್ರಿಕೆಟ್ ಅಭಿಮಾನಿಗಳು ಕಣ್ತುಂಬಿಕೊಂಡರು.

ನಿನ್ನೆ ಆರಂಭವಾದ ಐತಿಹಾಸಿಕ ಟೆಸ್ಟ್ ಪಂದ್ಯ ಹಲವಾರು ಕಾರಣಗಳಿಗೆ ಸಾಕ್ಷಿಯಾಯಿತು. ಕ್ರಿಕೆಟ್​ ದಿಗ್ಗಜರು, ಕ್ರೀಡಾ ತಾರೆಯರು ತುಂಬಿದ್ದ ಪಂದ್ಯ ಕ್ರಿಕೆಟ್​ ಜಗತ್ತಿನ ಗಮನ ಸೆಳೆಯಿತು.

ಐತಿಹಾಸಿಕ ಕ್ರಿಕೆಟ್​ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಆಲ್​ರೌಂಡರ್ ಶೆಲ್ಡನ್ ಕಾಟ್ರೆಲ್ ಅವರನ್ನು ನೆನಪಿಸಿಕೊಂಡರು. ಶೆಲ್ಡನ್ ಕಾಟ್ರೆಲ್ ಕೆಲವು ತಿಂಗಳ ಹಿಂದೆ ಆಂಗ್ಲರ ನಾಡಲ್ಲಿ ನಡೆದ ವಿಶ್ವಕಪ್​ನಲ್ಲಿ ಎದುರಾಳಿ ಬ್ಯಾಟ್ಸ್​ಮನ್ ಔಟ್ ಆದಗಲೆಲ್ಲ ಸೆಲ್ಯೂ ಹೊಡೆದು ಗಮನ ಸೆಳದಿದ್ದರು. ಹೌದು ಇದು ಹೇಳಲು ನಿನ್ನೆ ನಡೆದ ಮ್ಯಾಚ್​ಗೂ ಸಂಬಂಧವಿದೆ.

ಬಾಂಗ್ಲಾ ತಂಡದಲ್ಲೂ ಒಬ್ಬ ಸೆಲ್ಯೂಟ್ ವೀರ ಇದ್ದಾನೆ ಆತ ಬೇರೆ ಯಾರು ಅಲ್ಲ ಬಾಂಗ್ಲಾ ವೇಗಿ ಇಬಾದತ್ ಹುಸೇನ್. ಇಬಾದತ್ ಹುಸೇನ್ ನಿನ್ನೆ ಮೊದಲ ಇನ್ನಿಂಗ್ಸ್​ನಲ್ಲಿ ತಾಳ್ಮೆಯಿಂದಲೇ ಬೌಲಿಂಗ್ ಮಾಡುತ್ತಿದ್ದರು. ನಂತರ 13ನೇ ಓವರ್​ನಲ್ಲಿ ದಾಳಿಗಿಳಿದು 21 ರನ್ ಗಳಿಸಿದ್ದ ರೋಹಿತ್ ಶರ್ಮಾ ಅವರನ್ನ ಎಲ್​ಬಿ ಬಲೆಗೆ ಬಿಳಿಸಿದರು. ರೋಹಿತ್ ಎಲ್​ಬಿ ಬಲೆಗೆ ಬೀಳಿಸಿದಾಗ ಇಬಾದತ್ ಸಂತಸಕ್ಕೆ ಪಾರವೇ ಇರಲಿಲ್ಲ. ಅಂಪೈರ್ ಔಟ್​ ಎಂದು ತೀರ್ಪು ಕೊಟ್ಟಾಗ ಇಬಾದತ್ ಸೆಲ್ಯೂಟ್ ಹೊಡೆದು ಸಂಭ್ರಮಿಸಿದರು.

ಇಬಾದತ್ ಹುಸೇನ್ ಸೆಲ್ಯೂಟ್ ಹೊಡೆಯುವುದರ ಹಿಂದೆ ಒಂದು ಕಾರಣ ಇದೆ. ಇಬಾದತ್ ಹುಸೇನ್ ಕ್ರಿಕೆಟಿಗನಾಗುವ ಮುನ್ನ ವಾಲಿಬಾಲ್ ಆಟಗಾರನಾಗಿದ್ದರು, ನಂತರ ಬಾಂಗ್ಲಾ ವಾಯುಸೇನೆಯಲ್ಲಿ ಕೆಲಸ ಮಾಡಿದ್ದು, ಕಳೆದ ಫೆಬ್ರವರಿಯಲ್ಲಿ ಅಷ್ಟೇ ಟೆಸ್ಟ್ ಮೂಲಕ ಇಬದಾತ್ ಬಾಂಗ್ಲಾ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಮೇಲೆ ಎಲ್​ಬಿಡಬ್ಲೂ ಮಾಡಿದರು. ವಿಶ್ವಕ್ರಿಕೆಟ್​ಗೆ ಮತ್ತೊಬ್ಬ ಸೆಲ್ಯೂಟ್ ವೀರ ಸಿಕ್ಕಿದ್ದು ಕ್ರಿಕೆಟ್​ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *