‘ತಂದೆಗೆ ಗೊತ್ತಿಲ್ಲದೇ ಮಗ ಇಂತಹ ಆಟವಾಡಲು ಸಾಧ್ಯಾನಾ..?’

ಬೆಂಗಳೂರು: ಕೆ.ಆರ್.ಪುರಂನಲ್ಲಿ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಎಂ.ಟಿ.ಬಿ ನಾಗರಾಜ್ ಶರತ್ ಬಚ್ಚೇಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪಕ್ಷದಲ್ಲಿರುವ ತಮಗೇ ಟಿಕೇಟ್ ನೀಡದೇ, ಅನರ್ಹ ಶಾಸಕರಾದ ಎಂಟಿಬಿಗೆ ಟಿಕೇಟ್ ನೀಡುತ್ತಿದ್ದಾರೆಂದು ಬೇಸರಗೊಂಡ ಶರತ್ ಬಚ್ಚೇಗೌಡ ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಆದ್ರೆ ನಾನು, ಬಚ್ಚೇಗೌಡ ಮತ್ತು ಶರತ್ ಬಚ್ಚೇಗೌಡ ಒಪ್ಪಿಗೆ ಮೇರೆಗೆ ಬಿಜೆಪಿಗೆ ಬಂದಿರೋದು, ಶರತ್ ಬಚ್ಚೇಗೌಡ ಆಟ ತೋರಿಸುತ್ತಿದ್ದಾರೆ ಎಂದು ಎಂಟಿಬಿ ನಾಗರಾಜ್ ವಾಗ್ದಾಳಿ ನಡೆಸಿದ್ದಾರೆ.

ಅವರು ಒಪ್ಪಿಕೊಂಡ ಮೇಲೆ ನಾನು ರಾಜಿನಾಮೆ ನೀಡಿದ್ದು, ನಾನು ಸುಳ್ಳು ಹೇಳಿದರು ಮುಖ್ಯಮಂತ್ರಿ ಗಳು ಸುಳ್ಳು ಹೇಳುತ್ತಾರಾ..? ಎಂದು ಎಂಟಿಬಿ ಪ್ರಶ್ನಿಸಿದ್ದಾರೆ. ತಂದೆಗೆ ಗೊತ್ತಿಲ್ಲದೇ ಮಗ ಇಂತಹ ಆಟವಾಡಲು ಸಾಧ್ಯಾನಾ..? ಎಂದು ಪ್ರಶ್ನೆ ಮಾಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಬಚ್ಚೇಗೌಡ ಮಾತುಕೊಟ್ಟು ಉಲ್ಟಾ ಹೊಡೆದಿದ್ದಾರೆ ಅನ್ನೋದನ್ನ ಪ್ರಮಾಣ ಮಾಡಿ ಹೇಳುವಂತೆ ಶರತ್ ಬಚ್ಚೇಗೌಡ ಎಂಟಿಬಿಗೆ ಸವಾಲ್ ಹಾಕಿದ್ದರು. ಅಲ್ಲದೇ, ಬಿಜೆಪಿ ನಾಯಕರ ಬಳಿ ಅಪ್ಪ – ಮಗನೇ ನನಗೆ ಸೀಟ್ ಬಿಟ್ಟುಕೊಟ್ಟಿರುವ ಬಗ್ಗೆ ಮಾತಾನಾಡಿರೋದು, ನಾನು ಅವರ ಮುಖ ದರ್ಶನನೇ ಮಾಡಿಲ್ಲ. ಯಾರು ಅಧಿಕಾರಕ್ಕಾಗಿ ಸ್ವಾರ್ಥಿಯೆಂದು ಮಾಧ್ಯಮಗಳ ಮುಂದೆಯೇ ಚರ್ಚೆ ನಡೆಯಲಿ. ಅಪ್ಪ- ಮಗ ಇಬ್ಬರು ಬರಲಿ ಚರ್ಚೆಗೆ ನಾನೊಬ್ಬನೇ ಬರ್ತೇನೆ ಎಂದು ಎಂಟಿಬಿ ಕೂಡ ಚಾಲೆಂಜ್ ಹಾಕಿದ್ದರು.

 

Recommended For You

About the Author: user

Leave a Reply

Your email address will not be published. Required fields are marked *