ಕ್ಯಾಪ್ಟನ್ ಕೊಹ್ಲಿಯ ಸರಳತೆಗೆ ಫಿದಾ ಆದ ಫ್ಯಾನ್ಸ್.!

ನವದೆಹಲಿ: ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್​ನ ಸರ್ವ ಶ್ರೇಷ್ಠ ಬ್ಯಾಟ್ಸ್​ಮನ್. ವಿಶ್ವದ ಎಲ್ಲಾ ಮೈದಾನಗಳಲ್ಲಿವೂ ರನ್ ಮಳೆ ಸುರಿಸಿ ದಿಗ್ಗಜರ ದಾಖಲೆಗಳನ್ನೆಲ್ಲ ಪುಡಿಗಟ್ಟಿದ್ದಾರೆ.

ಅಗ್ರೆಸಿವ್ ಪ್ಲೇಯರ್ ಆಗಿರುವ ವಿರಾಟ್ ಎದುರಾಳಿ ಬೌಲರ್ಸ್​ಗಳನ್ನು ಚೆಂಡಾಡುವುದರಲ್ಲಿ ಪಂಟರ್. ಅದರಲ್ಲೂ ಆನ್​ಫೀಲ್ಡ್​ ಯಾರಾದರು ಕೆಣಕಿದರೆ ಅವರನ್ನು ಕೊಹ್ಲಿ ಸುಮ್ಮನ್ನೆ ಬಿಡದೇ ಮುಟ್ಟಿ ನೋಡಿಕೊಳ್ಳುವಾಗೆ ಉತ್ತರ ಕೊಟ್ಟುಬಿಡುತ್ತಾರೆ.

ಇಂಥ ರೋಷ ವೇಶದ ಮನಸ್ಥಿತಿಯನ್ನು ಹೊಂದಿರುವ ಕೊಹ್ಲಿ ಆಫ್​ ದಿ ಫೀಲ್ಡ್​ ಬಂದರೆ ಸರಳ ವ್ಯಕ್ತಿತ್ವದ ಹೃದಯವಂತ. ಕೊಹ್ಲಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಇದಕ್ಕೆ ಕಾರಣ ಕೊಹ್ಲಿಯ ಆಟ ಅನ್ನೋದಕ್ಕಿಂತ ಅವರ ಸರಳತೆ ಮತ್ತು ಅಭಿಮಾನಿಗಳನ್ನು ಪ್ರೀತಿಸುವ ಗುಣ.

ವಿರಾಟ್ ಕೊಹ್ಲಿಗೆ ಮಕ್ಕಳೆಂದರೆ ಪಂಚಪ್ರಾಣ. ಕಷ್ಟದಲ್ಲಿರುವ ಮಕ್ಕಳಿಗೆ ವಿರಾಟ್ ಕೊಹ್ಲಿ ತಮ್ಮ ಫೌಂಡೇಶನ್​ನಿಂದ ಕೋಟಿ, ಕೋಟಿ ಹಣವನ್ನು ಕೊಡುತ್ತಾರೆ. ತಮ್ಮ ಬ್ಯೂಸಿ ಶೆಡ್ಯುಲ್​ನಲ್ಲೂ ಕೊಹ್ಲಿ ಮಕ್ಕಳಿಗಾಗಿ ಸಮಯವನ್ನು ಮೀಸಲಿಡುತ್ತಾರೆ. ಕೊಹ್ಲಿ ಅವರನ್ನು ಸಾಮಾನ್ಯ ಮಕ್ಕಳಲ್ಲ ಸ್ಟಾರ್ ಕ್ರಿಕೆಟ್​ಗಳ ಮಕ್ಕಳು ಕೂಡ ಇಷ್ಟಪಡುತ್ತಾರೆ. ಆಸ್ಟ್ರೇಲಿಯಾ ಡ್ಯಾಶಿಂಗ್ ಓಪನರ್ ಡೇವಿಡ್ ಅವರ ಪುತ್ರಿ ಇಂಡಿ ರೇ ಕೊಹ್ಲಿಯ ಕಟ್ಟಾ ಅಭಿಮಾನಿಯಾಗಿದ್ದಾರೆ. ಥೇಟ್ ವಿರಾಟ್ ಕೊಹ್ಲಿಯಂತೆ ಬ್ಯಾಟಿಂಗ್ ಮಾಡಿ ನಾನು ವಿರಾಟ್ ಕೊಹ್ಲಿ ಎಂದಿದ್ದಾಳೆ.

ವಿರಾಟ್ ಕೊಹ್ಲಿ ವಿಶೇಷ ಅಭಿಮಾನಿಯೊಬ್ಬಳನ್ನು ಭೇಟಿ ಮಾಡಿ ಖುಷಿ ಕೊಟ್ಟಿದ್ದಾರೆ. ಮೊನ್ನೆ ಬಾಂಗ್ಲಾ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದ ನಂತರ ವಿಶೇಷ ಅಭಿಮಾನಿ ಪೂಜಾ ಶರ್ಮಾ ಚೇರ್​ವೊಂದರಲ್ಲಿ ಕುಳಿತು ತಮ್ಮತ್ತ ಬರುತ್ತಿದ್ದ ನೆಚ್ಚಿನ ಆಟಗಾರರನ್ನು ನೋಡುತ್ತಿದ್ದರು, ಎಲ್ಲ ಆಟಗಾರರು ತಮ್ಮ ಪಾಡಿಗೆ ತಾವು ಹೋಗುತ್ತಿದ್ದರೆ, ವಿರಾಟ್ ಕೊಹ್ಲಿ ಮಾತ್ರ ಪೂಜಾ ಶರ್ಮಾ ಬಳಿ ಹೋಗಿ ಮಾತನಾಡಿಸಿದರು. ಕೊಹ್ಲಿ ಬಂದು ಮತನಾಡಿಸಿದಾಗ ಪೂಜಾಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಮೂಳೆ ರೋಗದಿಂದ ಬಳಲುತ್ತಿರುವ ಪೂಜಾಳಿಗೆ ಕೊಹ್ಲಿ ಆಟೋಗ್ರಾಫ್ ಮತ್ತು ಸೆಲ್ಫಿ ಕೊಟ್ಟು ಖುಷಿಪಡಿಸಿದರು.

ಸರಳತೆ ಮೆರೆದ ಕೊಹ್ಲಿಯ ಈ ವಿಡೀಯೋ ಈಗ ಭಾರೀ ವೈರಲ್ ಆಗಿದ್ದು ಕೊಹ್ಲಿಯನ್ನು ಅಭಿಮಾನಿಗಳು ಗುಣಗಾನ ಮಾಡುತ್ತಿದ್ದಾರೆ. ಕೊಹ್ಲಿಯ ಈ ಸರಳ ವ್ಯಕ್ತಿತ್ವಕ್ಕೆ ಕ್ಲೀನ್ ಬೌಲ್ಡ್ ಆಗಿದ್ದಾರೆ. ಇಷ್ಟೆ ಅಲ್ಲ ಇತ್ತಿಚೆಗೆ ತಮ್ಮ ಟ್ಯಾಟೋಗಳನ್ನ ಮೈಮೇಲೆ ಅಚ್ಚೆ ಹಾಕಿಸಿಕೊಂಡ ಅಭಿಮಾನಿ ಬೆಹ್ರಾರರನ್ನು ನೋಡಿ ತಬ್ಬಕೊಂಡಿದ್ದರು. ತನನ್ನು ಪ್ರೀತಿಸುವವರನ್ನು ತಾನು ಅಷ್ಟೆ ಪ್ರೀತಿಸುತ್ತೇನೆ ಎನ್ನೋದನ್ನು ಕೊಹ್ಲಿ ತೋರಿಸಿದ್ದಾರೆ.

ಒಟ್ಟಾರೆ ಕ್ಯಾಪ್ಟನ್ ವಿರಾಟ್ ಕೊಹ್ಲಿ ಆನ್​ಫೀಲ್ಡ್ ಎಷ್ಟೆ ಎಗ್ರೇಸಿವ್ ಆಗಿದ್ದರು, ಆಫ್​ ದಿ ಫೀಲ್ಡ್​ನಲ್ಲಿ ಹೃದಯವಂತಾನಾಗಿ ಇತರೆ ಕ್ರಿಕೆಟಿಗರಿಗೂ ಮಾದರಿಯಾಗಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *