ಜಾಗತಿಕ ತಾಪಮಾನ ಏರಿಕೆ: ಮುಂದಿನ ಪೀಳಿಗೆಗೆ ಕಾದಿದೆ ಭಾರೀ ಕಂಟಕ.!

ಬೆಂಗಳೂರು: ಜಾಗತಿಕ ತಾಪಮಾನ ಏರಿಕೆ ಇಂದು ನಿನ್ನೆಯ ಸಮಸ್ಯೆಯಲ್ಲ. ಆದರೆ ದಿನದಿಂದ ದಿನಕ್ಕೆ ತಾಪಮಾನ ಏರಿಕೆ ಮಟ್ಟ ಮಿತಿಮಿರುತ್ತಿದ್ದು, ಇದರಿಂದ ಮನುಕುಲಕ್ಕೆ ದೊಡ್ಡ ಕಂಟಕ ಎದುರಾಗಲಿದೆ ಎಂದು ಸಂಶೋಧನೆಯೊಂದು ಆಘಾತಕಾರಿ ಮಾಹಿತಿ ನೀಡಿದೆ.

ಆಧುನೀಕರಣ, ಅರಣ್ಯ ನಾಶ , ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ತಾಪಮಾನ ಏರಿಕೆಯಾಗುತ್ತಾನೆ ಇದೆ. ತಾಪಮಾನ ಏರಿಕೆ ಬಗ್ಗೆ ಸಾಕಷ್ಟು ವರದಿಗಳು ಬಂದರು ಸಹ ಯಾರೋಬ್ಬರೂ ಎಚ್ಚೆತ್ತುಕ್ಕೊಂಡಿರಲಿಲ್ಲ. ಆದರೆ ಇದೇ ರೀತಿ ತಾಪಮಾನ ಏರಿಕೆಯಾಗುತ್ತಲೇ ಹೋದಲ್ಲಿ ಮುಂದೆ ಜನಿಸುವ ಮಕ್ಕಳು ಜೀವನಪರ್ಯಂತ ಆರೋಗ್ಯ ಸಮಸ್ಯೆಯಿಂದ ಬಳಲಬೇಕು ಎಂಬ ಆತಂಕಕಾರಿ ಮಾಹಿತಿಯನ್ನು ‘ದಿ ಲ್ಯಾನ್ಸೆಟ್​​ ಕೌಂಟ್​ಡೌನ್​​ ಮೆಡಿಕಲ್​ ಜರ್ನಲ್’​​ ವರದಿ ಮಾಡಿದೆ.

ಜಾಗತಿಕ ತಾಪಮಾನ ಏರಿಕೆಯಿಂದ ಜಗತ್ತಿನ 600 ಕೋಟಿ ಜನರಿಗೆ ಸಂಕಷ್ಟ ಎದುರಾಗಲಿದೆ. ತಾಪಮಾನ ಏರಿಕೆ ಪ್ರಮಾಣ ಕಡಿಮೆ ಮಾಡಬೇಕು ಎಂದು ಮಾಡಿಕೊಳ್ಳಲಾದ ಪ್ಯಾರೀಸ್​ ಒಪ್ಪಂದದಿಂದ ಇತ್ತೀಚೆಗಷ್ಟೇ ಅಮೇರಿಕಾ ಹೊರಬಂದಿದೆ.

ಒಪ್ಪಂದದಂತೆ ಜಾಗತಿಕ ತಾಪಮಾನವನ್ನು 2 ಡಿಗ್ರಿ ಸೆಲ್ಸಿಯಸ್​ನಷ್ಟು ಕಡಿಮೆ ಮಾಡಬೇಕು. ಅದಕ್ಕಾಗಿ ಪ್ರತಿ ದೇಶವನ್ನೂ ಕಾರ್ಬನ್​​ ಹೊರಸೂಸುವಿಕೆ ಪ್ರಮಾಣವನ್ನು ಕಡಿಮೆ ಮಾಡಲೇಬೇಕಾದ ಅನಿವಾರ್ಯತೆ ಈಗ ಇದೆ.

ತಾಪಮಾನ ಏರಿಕೆಯಿಂದ ಆರೋಗ್ಯ ಸಮಸ್ಯೆ ಒಂದೆಡೆಯಾದರೆ, ಆಹಾರ ಉತ್ಪಾದನೆಯೂ ಕಡಿಮೆಯಾಗಲಿದೆ. ಕಳೆದ 30 ವರ್ಷಗಳಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಪ್ರಮಾಣವೂ ಕಡಿಮೆಯಾಗಿದೆ. ಶ್ರೀಮಂತರು, ಯಾವುದೋ ಮಾರ್ಗ ಕಂಡುಕೊಳ್ಳಬಹುದು. ಆದರೆ ಬಡಮಕ್ಕಳು ಅಪೌಷ್ಟಿಕತೆಯಿಂದ ಬಳಲೇಬೇಕಾಗುತ್ತದೆ. ಇದರಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಪ್ರಮಾಣ ಕಡಿಮೆಯಾಗಲಿದೆ.

ವಿಷಕಾರಿ ಅನಿಲ ಸೇವನೆಯಿಂದ ಈಗಾಗಲೇ ಜಗತ್ತಿನಲ್ಲಿ ಹೃದಯ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಮಿತಿಮೀರಿದೆ. ಗಾಳಿಯಲ್ಲಿನ ಪರ್ಟಿಕ್ಯುಲೇಟ್​ ಮ್ಯಾಟರ್​ ಪ್ರಮಾಣ ಏರಿಕೆಯಿಂದ ಸಾವಿನ ಸಂಖ್ಯೆ ಇನ್ನಷ್ಟು ಅಧಿಕವಾಗಲಿದೆ. ಅದೇ ರೀತಿ ಸುನಾಮಿ, ಕಾಳ್ಗಿಚ್ಚು ಸೇರಿದಂತೆ ಪ್ರಕೃತಿ ವಿಕೋಪವೂ ಮಿತಿಮೀರಲಿದೆ. ಹೀಗಾಗಿ ಹವಾಮಾನ ವೈಪರಿತ್ಯದ ಬಗ್ಗೆ ಗಮನಹರಿಸಿ ಜಾಗತಿಕ ತಾಪಮಾನ ಏರಿಕೆಯಾಗದಂತೆ  ಕ್ರಮ ಕೈಗೊಳ್ಳಬೇಕಿದೆ.

Recommended For You

About the Author: user

Leave a Reply

Your email address will not be published. Required fields are marked *