ಅನರ್ಹ ಶಾಸಕನಿಗೆ ಟಿಕೆಟ್​ ನೀಡಿದ್ದಕ್ಕೆ ಭುಗಿಲೆದ್ದ ಅಸಮಾಧಾನ.!

ಚಿಕ್ಕೋಡಿ: ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರಿಗೆ ಅಥಣಿಯ ಬಿಜೆಪಿ ಟಿಕೆಟ್​ ನೀಡದೆ ಇರುವುದಕ್ಕೆ ಕಾರ್ಯಕರ್ತರು, ಸಚಿವ ಜಗದೀಶ್​ ಶೆಟ್ಟರ್ ಹಾಗೂ ಎಂಎಲ್‌ಸಿ ಮಹಾಂತೇಶ ಕವಟಗಿಮಠಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಇಂದು ನಡೆಯಿತು.

ಉಪಚುನಾವಣೆ ಬಿಜೆಪಿ ಪಾಲಿಗೆ ಪ್ರತಿಷ್ಠೆಯ ಹೋರಾಟವಾಗಿದ್ದು, 15 ಕ್ಷೇತ್ರಗಲ್ಲಿಯೂ ಗೆಲ್ಲಬೇಕೆನ್ನುವ ಬಿಜೆಪಿಗೆ ಅಥಣಿಯಲ್ಲಿ ಕಾರ್ಯಕರ್ತರ ಅಸಮಾಧಾನದ ಬಿಸಿ ತಟ್ಟಿದೆ. ಅನರ್ಹ ಶಾಸಕ ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡಿರುವುದಕ್ಕೆ ಬಿಜೆಪಿ ಕಾರ್ಯಕರ್ತರೇ ಸಿಡಿದೆದ್ದಿದ್ದಾರೆ.

ಇಂದು ಮಹೇಶ್​ ಕುಮಟಳ್ಳಿ ನಾಮಪತ್ರ ಸಲ್ಲಿಕೆ ವೇಳೆಯಲ್ಲಿ ಲಕ್ಷ್ಮಣ್ ಸವದಿ ಅವರು ಬರುವಿಕೆಯಲ್ಲಿ ಕಾಯುತ್ತಿರುವಾಗ ಇದೆಲ್ಲ ಹೈಡ್ರಾಮಗೆ ಸಾಕ್ಷಿಯಾಯಿತು. ಕೊನೆಗೆ ಲಕ್ಷ್ಮಣ್ ಸವದಿ ಅವರು ಕಾರ್ಯಕರ್ತರಿಗೆ ಕೈ ಮುಗಿದ ಪ್ರಸಂಗವು ಇಂದು ನಡೆಯಿತು.

ಅಥಣಿ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಸದ್ಯಕ್ಕೆ ಶಮನವಾಗುವ ಲಕ್ಷಣಗಳು ಕಾಣುತ್ತಿಲ್ಲ. ಹೀಗೆ ಮುಂದುವರೆದರೆ ಬಿಜೆಪಿಗೆ ಉಪಚುನಾವಣೆಯಲ್ಲಿ ದೊಡ್ಡ ಆಘಾತ ಎದುರಾಗುವುದರಲ್ಲಿ ಎರಡು ಮಾತಿಲ್ಲ. ಇದನ್ನು ಬಿಜೆಪಿ ಹೇಗೆ ಪರಿಗಣಿಸುತ್ತದೆ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.

Recommended For You

About the Author: user

Leave a Reply

Your email address will not be published. Required fields are marked *