ನಟಿ ವಿರುದ್ಧ ಜೀವಹರಣ ಮಾಡಲು ಯತ್ನಿಸಿದ ಆರೋಪ..!

ಮಂಡ್ಯ: ಅಯೋಗ್ಯ ಚಿತ್ರದ ಸಹನಟಿ ವಿರುದ್ಧ ಜೀವಹರಣ ಮಾಡಲು ಪ್ರಯತ್ನಿಸಿದ ಆರೋಪ ಕೇಳಿಬಂದಿದ್ದು, ಹಣ ಕೊಟ್ಟಿದ್ದನ್ನು ವಾಪಸ್ ಕೇಳಿದ್ದಕ್ಕೆ ಹುಡುಗರನ್ನು ಬಿಟ್ಟು ಈ ಯತ್ನಕ್ಕೆ ಮುಂದಾಗಿದ್ದಾರೆನ್ನಲಾಗಿದೆ.

ದೃಶ್ಯ ಎಂಬ ನಟಿ ಈ ಕೃತ್ಯಕ್ಕೆ ಮುಂದಾಗಿದ್ದು, ಈಕೆ ಅಯೋಗ್ಯ ಚಿತ್ರದಲ್ಲಿ ಸಹನಟಿಯಾಗಿ ನಟಿಸಿದ್ದಳು. ರಾಜೇಶ್ ಎಂಬುವವರ ಜೀವಹರಣಕ್ಕೆ ಯತ್ನಿಸಿದ್ದು, ರಾಜೇಶ್ ದೃಶ್ಯಳಿಗೆ ಹಣ ನೀಡಿದ್ದನಂತೆ. ಆ ಹಣವನ್ನು ವಾಪಸ್ ಕೇಳಲು ಆಕೆಯ ಮನೆ ಬಳಿ ಹೋದಾಗ ದೃಶ್ಯ ಹುಡುಗರನ್ನು ಬಿಟ್ಟು ರಾಜೇಶ್ ಜೀವಹರಣಕ್ಕೆ ಯತ್ನಿಸಿದ್ದಾಳೆಂದು ಆರೋಪಿಸಲಾಗಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬಲಮುರಿ ಈ ಘಟನೆ ನಡೆದಿದ್ದು, ರಾಜೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇನ್ನು ಈ ಬಗ್ಗೆ ಕೆಆರ್‌ಎಸ್‌ ಪೊಲೀಸ್ ಠಾಣೆಯಲ್ಲಿ ದೃಶ್ಯ ಮತ್ತು ಆಕೆಯ ತಂದೆ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Recommended For You

About the Author: user

Leave a Reply

Your email address will not be published. Required fields are marked *