ಎಂಟಿಬಿ ನಾಗರಾಜ್‌ಗೆ ಓಪೆನ್ ಚಾಲೆಂಜ್ ಹಾಕಿದ ಶರತ್ ಬಚ್ಚೇಗೌಡ..!

ಬೆಂಗಳೂರು: ನಿನ್ನೆ ಅನರ್ಹ ಶಾಸಕ ಎಂಟಿಬಿ ನಾಗರಾಜ್, ಬಚ್ಚೇಗೌಡ ಮತ್ತು ಶರತ್ ಬಚ್ಚೇಗೌಡ ವಿರುದ್ಧ ಮಾತಿಗೆ ತಪ್ಪುತ್ತಿದ್ದಾರೆ. ನನ್ನನ್ನು ಸೋಲಿಸಲು ಕುತಂತ್ರ ನಡೆಸಿದ್ದಾರೆಂದು ವಾಗ್ದಾಳಿ ನಡೆಸಿದ್ದರು. ಇದಕ್ಕೆ ಇಂದು ಪ್ರತಿಕ್ರಿಯಿಸಿರುವ ಶರತ್ ಬಚ್ಚೇಗೌಡ, ಸವಾಲ್ ಹಾಕಿದ್ದಾರೆ.

ಬಚ್ಚೇಗೌಡ ಮಾತುಕೊಟ್ಟು ಉಲ್ಟಾ ಹೊಡೆದಿದ್ದಾರೆ ಅನ್ನೋದನ್ನ ಪ್ರಮಾಣ ಮಾಡಿ ಹೇಳುವಂತೆ ಶರತ್ ಬಚ್ಚೇಗೌಡ ಸವಾಲ್ ಹಾಕಿದ್ದಾರೆ. ಧರ್ಮಸ್ಥಳ ಮಂಜುನಾಥನ ಮೇಲೆ ಪ್ರಮಾಣ ಮಾಡಿ ಹೀಗೆ ಹೇಳಲಿ, ಪ್ರಮಾಣ ಮಾಡೋದಾದ್ರೆ ನಾವು ಬರ್ತೀವಿ ಅಂತ ಓಪನ್ ಸವಾಲ್ ಹಾಕಿದ್ದಾರೆ.

ಅಧಿಕಾರಕ್ಕಾಗಿ ನಾವು ರಾಜಕೀಯ ಮಾಡ್ತಿಲ್ಲ, ತಾಲೂಕಿನ ಜನರ ಸೇವೆಗೆ ರಾಜಕೀಯಕ್ಕೆ ಬಂದಿರೋದು. ಎಂಟಿಬಿ ಹತಾಶರಾಗಿ ದಿನಕ್ಕೊಂದು ಸುಳ್ಳು ಹೇಳಿದ್ರೆ ಜನ ನಂಬ್ತಾರೆ ಅಂದುಕೊಂಡು ಸುಳ್ಳು ಹೇಳ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಸೇರ್ಪಡೆಯಾದ, ಡೀಲ್ ಆದ, ಬೋರ್ಡ್ ಅಧ್ಯಕ್ಷನಿಗಾಗಿ ಮಾಡಿದ ಅಂತೆಲ್ಲ ದಿನಕ್ಕೊಂದು ಸುಳ್ಳು ಹೇಳ್ತಿದ್ದಾರೆ ಎಂದು ಶರತ್ ಬಚ್ಚೇಗೌಡ, ಎಂಟಿಬಿ ನಾಗರಾಜ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Recommended For You

About the Author: TV5 Kannada

1 Comment

Leave a Reply

Your email address will not be published. Required fields are marked *