ದೆವ್ವ ಈಗ ಪೊಲೀಸ್ ವಶಕ್ಕೆ..!! ವಿಡಿಯೋ ವೈರಲ್​

ಬೆಂಗಳೂರು:  ಚಿತ್ರ-ವಿಚಿತ್ರ ವೇಷ ತೊಟ್ಟು, ಬೇರೆ ಬೇರೆ ಕಥೆ ಹೇಳಿಕೊಂಡು ಪ್ರ್ಯಾಂಕ್‌ ಮಾಡೋದು ನೀವು ನೋಡಿರಬಹುದು. ಸೋಷಿಯಲ್​ ಮೀಡಿಯಾ ಸ್ಟ್ರಾಂಗ್ ಆಗ್ತಿದ್ದಂತೆ ಇವುಗಳ ಸಂಖ್ಯೆನೂ ಹೆಚ್ಚುತ್ತಿವೆ. ಅದೇ ರೀತಿ ದೆವ್ವದ ಡ್ರೆಸ್‌ ಹಾಕ್ಕೊಂಡು ಪ್ರ್ಯಾಂಕ್‌ ಮಾಡಲು ಹೋಗಿದ್ದ ವಿದ್ಯಾರ್ಥಿಗಳು ಈಗ ಪೇಚಿಗೆ ಸಿಲುಕಿದ್ದಾರೆ.

ನಿನ್ನೆ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಕೆಲ ಯುವಕರು ಯಶವಂತಪುರ ಸಮೀಪದ ಮತ್ತಿಕೆರೆ ಬಳಿ ದೆವ್ವದ ವೇಷತೊಟ್ಟು ರಸ್ತೆಗಿಳಿದಿದ್ದರು. ದೆವ್ವದ ರೀತಿಯ ಮುಖವಾಡ ಹಾಕ್ಕೊಂಡು ದಾರಿಹೋಕರು ಹಾಗೂ ವಾಹನ ಸವಾರರಿಗೆ ಹೆದರಿಸ್ತಿದ್ದರು. ಕೆಲವರು ಮಧ್ಯರಾತ್ರಿಯಲ್ಲಿ ಎದ್ದುಬಂದ ದೆವ್ವ ಕಂಡು ಓಡೋದರೆ, ಮತ್ತೆ ಹಲವರು ಇದ್ಯಾವ ಸೀಮೆ ದೆವ್ವ ಅಂತ ಕೇರ್‌ ಮಾಡ್ದೆ ಹೋಗ್ತಿದ್ದರು.


ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡ್ತಿದ್ದಂತೆ ದೆವ್ವಗಳ ಕಾರ್ಯಾಚರಣೆಗಿಳಿದ ಶವಂತಪುರ ಪೊಲೀಸರಿಗೆ ಸಿಕ್ಕಿದರು. 9 ಮಂದಿ ಎಂಜಿನಿಯರಿಂಗ್ ಹಾಗೂ ಬಿಬಿಎಂ ವಿದ್ಯಾರ್ಥಿಗಳು. ವಿದೇಶಗಳಲ್ಲಿ ಈ ರೀತಿ ಮಾಡಿ ಯೂಟ್ಯೂಬ್, ಟಿಕ್‌ಟಾಕ್‌ನಲ್ಲಿ ಹರಿಯಬಿಡುವ ಪ್ರ್ಯಾಂಕ್ ವಿಡಿಯೋಗಾಗಿ ಹೀಗೆ ಮಾಡ್ತಿದ್ದರಂತೆ. ಶಾನ್ ಮಲಿಕ್, ನವೀದ್, ಸಜಿಲ್ ಮಹಮದ್, ಮಹಮದ್ ಅಕ್ಯೂಬ್, ಸಾಕೀಬ್, ಸೈಯದ್ ನಬೀಲ್, ಯೂಸುಫ್ ಅಹಮದ್ ಈಗ ಪೊಲೀಸ್‌ ವಶದಲ್ಲಿದ್ದಾರೆ.

ಕೂಕಿಪೀಡಿಯ ಎಂಬ ಹೆಸರಿನಲ್ಲಿ ಯೂಟ್ಯೂಬ್ ಹೊಂದಿದ್ದು ಈ ತರಹದ ಪ್ರ್ಯಾಂಕ್ ವಿಡೀಯೋ ಅಪ್ಲೋಡ್​ ಮಾಡ್ತಿದ್ದರಂತೆ. ಆದರೆ, ತಾವು ಮಾಡೋ ತಮಾಷೆ ಇಷ್ಟು ಸೀರಿಯಸ್​ ಆಗುತ್ತೆ ಅಂತ ಆ ಯುಕವರಿಕೆ ಗೊತ್ತೇ ಇರಲಿಲ್ಲ.

Recommended For You

About the Author: Dayakar

Leave a Reply

Your email address will not be published. Required fields are marked *