ಹುಡುಗ​ ಕೈ ಕೊಟ್ಟಿದ್ದಾಕ್ಕೆ ರಿಸೆಪ್ಷನ್​ಗೆ ಕಾರ್ಡ್​ ಕೊಡ್ತಿನಿ ಬಾ ಎಂದು ಕರೆಸಿಕೊಂಡ ಹುಡುಗಿ ಮಾಡಿದ್ದು ಹೀಗೆ..!

 ಬೆಂಗಳೂರು:  ಪ್ರೀತಿ ಮಧ್ಯೆ ಹಣ ಬಂದರೆ ಹೀಗೆ ಆಗುತ್ತೆ ಅನ್ನೋದಕ್ಕೆ ಈ ಸ್ಟೋರಿ ಒಂದೊಳ್ಲೆ ಎಕ್ಸಾಂಪಲ್​. ಪ್ರೀತಿಗೊಸ್ಕರ​ ಜೀವ ಕೊಡ್ತಿನಿ ಅಂದವಳು ಜೀವ ತೆಗೆಯೋದಕ್ಕೆ ಮುಂದಾಗಿದ್ದಳೆ.

ಅನ್ನಪೂರ್ಣೇಶ್ವರಿನಗರ ವ್ಯಾಪ್ತಿಯ ವಿಶ್ವನೀಡಂ ಬಳಿ ಇರುವ ಕಲ್ಯಾಣ ಮಂಟಪದ ಮುಂದೆ ಚಂದನ್​ ಮತ್ತು ಅವನ ಸ್ನೇಹಿತ ಕಿರಣ್​ ಎಂಬುವವರನ್ನು ಅಪಹರಣ ​ ಮಾಡಲಾಯ್ತು. ಚಂದನ್​ ಮತ್ತು ಅಪಹರಣ​ ಮಾಡಿಸಿದ ಚಂದನಾ ಇಬ್ಬರೂ ಸ್ಕೂಲ್​ ಫ್ರೆಂಡ್ಸ್​. ನಂತರ ಹದಿಹರೆಯದ ಕ್ರಷ್​ಗೆ ಬಿದ್ದವರು ಒಂದಷ್ಟು ದಿನ ಪ್ರೀತಿ ಅಂತ ಒಡಾಡಿದರು. ಆ ಸಂದರ್ಭದಲ್ಲಿ ಚಂದನಾಳ ಬಳಿ ಚಂದನ್​ ಮೂವತ್ತು ಸಾವಿರ ಹಣ ತೆಗೆದುಕೊಂಡಿದ್ದನು.

ಸ್ವಲ್ಪ ದಿನದ ಬಳಿಕ ವಾಪಾಸ್​ ಕೊಡ್ತಿನಿ ಎಂದವನು ಕೊಡಲೇ ಇಲ್ಲ. ಕೊನೆಗೆ ತನ್ನ ಹುಡುಗಿಯ ಸಂಗವೂ ಬೆಸರವೆನಿಸಿತ್ತು ಅವನಿಗೆ. ಹಣ ವಾಪಾಸ್​ ಕೊಡು ಎಂದು ತಲೆ ತಿಂತಿದ್ದವಳನ್ನು ಬಿಟ್ಟು ಬೇರೊಬ್ಬಳ ಜೊತೆ ಲವ್ ಶುರು ಹಚ್ಚಿಕೊಂಡ. ಅದಾಗಲೆ ಚಂದನ್​ ಮತ್ತು ಚಂದನಾಳ ನಡುವೆ ಬಿರುಕು ಉಂಟಾಗಿತ್ತು. ಕೊನೆಗೆ ತನಗೆ ಮದ್ವೆ ಫಿಕ್ಸ್​ ಆಯ್ತು ಕಾರ್ಡ್​ ಕೊಡ್ತೀನಿ ಬಾ ಎಂದು ವಿಶ್ವನೀಡಂ ಏರಿಯಾ ಬಳಿ ಇರುವ ಕಲ್ಯಾಣ ಮಂಟಪಕ್ಕೆ ಕರೆಸಿಕೊಂಡಿದ್ದಳು.

ನಂತರ ಅಲ್ಲಿ ಕಾರು ನಿಲ್ಲಿಸಿ ಕಾಯುತ್ತಿದ್ದವರನ್ನು ನೋಡಿ ನಾಲ್ಕು ಜನ ಯುವಕರು ಸುಖಾಸುಮ್ಮನೆ ಜಗಳ​ ತೆಗೆದು ಚಂದನ್​ ಮತ್ತು ಕಿರಣ್​ ಇಬ್ಬರನ್ನು ತಮ್ಮ ಕಾರಿಗೆ ಕೆಡವಿಕೊಂಡಿದ್ದಾರೆ. ನಂತರ ಹಾಸನ ರಸ್ತೆಗೆ ಕರೆದೊಯ್ದು ನಮ್ಮ ಹುಡುಗಿ ವಿಚಾರಕ್ಕೆ ಬರ್ತಿಯಾ ಎಂದು ಹಿಗ್ಗಾಮುಗ್ಗ ಥಳಿಸಿ ಮತ್ತೊಬ್ಬ ಹುಡುಗ ಕಿರಣ್​ ಮನೆಯವರಿಗೆ ಅವನದೇ ಫೋನ್​ನಲ್ಲಿ ಕರೆ ಮಾಡಿ ಎರಡು ಲಕ್ಷಕ್ಕೆ ಬೇಡಿಕೆ ಇಟ್ಟಿದರು. ನಂತರ ರಾತ್ರಿಯೆಲ್ಲಾ ತಿರುಗಾಡಿಸಿ ಬೆಳಗಿನ ಜಾವ ಕಡಬಗೆರೆಗೆ ಬಿಸಾಡಿ ಅಲ್ಲಿಂದ ಪರಾರಿ​ ಆಗಿದ್ದರು.

ಇನ್ನು ಕಿರಣ್ ಎಂಬಾತ ಅಪಹರಣಕಾರರು ಟೀಗೆ ನಿಲ್ಲಿಸಿದಾಗ ತಪ್ಪಿಸಿಕೊಂಡಿದ್ದ. ಇದರಿಂದ ಬೆದರಿದ ಅಪಹರಣಕಾರರು​ ಚಂದನ್​ನನ್ನ ಕೊಲ್ಲದೆ ಬಿಟ್ಟಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರನ್ನು ವಶಕ್ಕೆ ಪಡೆದಿದ್ದು ಇನ್ನಿಬ್ಬರಿಗಾಗಿ ಅನ್ನಪೂರ್ಣೇಶ್ವರಿನಗರ ಪೊಲೀಸರು ಬಲೆ ಬೀಸಿದ್ದಾರೆ. ಚೆನ್ನಾಗಿದ್ದಾಗ ಲವ್ ಅಲ್ಲಿ ಕಿಕ್ ತೆಗೆದುಕೊಂಡವನಿಗೆ ಹಳೇ ಲವ್ ಸ್ಟೋರಿ ಇಷ್ಟೆಲ್ಲಾ ಕಿರಿಕ್ ಮಾಡುತ್ತೆ ಅನ್ನೋದು ನೆನಪಾಗಿಲ್ಲ ಅನ್ಸುತ್ತೆ.

Recommended For You

About the Author: Dayakar

Leave a Reply

Your email address will not be published. Required fields are marked *