ಅಮ್ಮ -ಅಮ್ಮ ಅಂತ ಕರೆದು ಚಿನ್ನದ ಆಸೆಗೆ ಬಿದ್ದವನು ಕೊನೆಗೆ ಮಾಡಿದ್ದೇನು ಗೊತ್ತಾ..!

ವಿಜಯಪುರ: ಆಕೆ ಹಿಂದೆ ಮುಂದೆ ಯಾರೂ ಇಲ್ಲದ ಒಂಟಿ ವೃದ್ಧೆ. ಮನೆ ಬಾಡಿಗೆಗೆ ಬಂದವನನ್ನೇ ಮಗನೆಂದು ನೊಡ್ಕೊಂಡಿದ್ದಳು. ಆದರೆ ಚಿನ್ನದ ಆಸೆಗೆ ಕತ್ತು ಹಿಸುಕಿದಾವ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಅಕ್ಟೋಬರ್ 14ರಂದು ವಿಜಯಪುರದ ಶಾಸ್ತ್ರಿನಗರ ಬೆಚ್ಚಿಬಿದ್ದಿತ್ತು. ಎಲ್ಲರ ಬಾಯಲ್ಲೂ ಒಂದೇ ಮಾತು. ಈ ಅಜ್ಜಿಗೆ ಹಿಂದಿಲ್ಲ, ಮುಂದಿಲ್ಲ, ಯಾರು ಈ ರೀತಿ ಮಾಡಿರಬಹುದು ಅನ್ನೋದು ಎಲ್ಲರ ಚಿಂತೆಯಾಗಿತ್ತು. ಅದಕ್ಕೆ ಇಂದು ಉತ್ತರ ಸಿಕ್ಕಿದ್ದು, ಆರೋಪಿಯನ್ನು ಗಾಂಧಿಚೌಕ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಒಬ್ಬೊಂಟಿಯಾದ್ದ ರೇಖಾ ದೇಶಮಾನೆಯ ಬದುಕಿಗೆ ಮನೆಯೊಂದು ಆಸರೆಯಾಗಿತ್ತು. ಆಕೆಯ ಮನೆಗೆ ಬಾಡಿಗೆಗೆ ಬಂದಿದ್ದ ಕೇದಾರಿ ಎಂಬಾತ, ರೇಖಾಳನ್ನು ಅಮ್ಮ -ಅಮ್ಮ ಅಂತ ಕರೆದು ವಿಶ್ವಾಸ ಗಳಿಸಿದ್ದ. ಆದರೆ 150 ಗ್ರಾಂ ಚಿನ್ನದ ಮೇಲೆ ಕಣ್ಣಾಕಿದವನು, ಕತ್ತು ಹಿಸುಕಿ ಸಾಯಿಸಿ ಪರಾರಿಯಾಗಿದ್ದ.

ಅಜ್ಜಿಯ ಉಸಿರು ನಿಲ್ಲಿಸಿದವನ್ನು ಚಿನ್ನಾಭರಣದ ಜೊತೆ ಬಾಗಲಕೋಟೆಯಲ್ಲಿ ಆರೋಪಿ ತಲೆಮರೆಸಿಕೊಂಡಿದ್ದ. ಸದ್ಯ ಆರೋಪಿ ಕೇದಾರಿಯನ್ನು ಬಂಧಿಸಿರೋ ಪೊಲೀಸರು, ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

Recommended For You

About the Author: TV5 Kannada

Leave a Reply

Your email address will not be published. Required fields are marked *