ಈತ ಫೇಸ್‌ಬುಕ್‌ನಲ್ಲಿ ಮಾಡುತ್ತಿದ್ದ ಕೆಲಸ ನೋಡಿ ದಂಗಾದ ಪೊಲೀಸರು..!

ಬಳ್ಳಾರಿ: ಅದ್ಯಾಕೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಜಾಲ ಬಳಸಿ ಯುವತಿಯರನ್ನು ತಮ್ಮ ಬಲೆಗೆ ಹಾಕಿಕೊಂಡು ಮೋಸ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗಿ, ಅಪರಾಧ ಪ್ರಕರಣಗಳಲ್ಲಿ ಲಾಕ್ ಆಗುತ್ತಿರುವವರು ಹೆಚ್ಚಾಗುತ್ತಿದ್ದಾರೆ. ಅದಕ್ಕೆ ಗಣಿನಾಡು ಬಳ್ಳಾರಿ ಮತ್ತೆ ಸಾಕ್ಷಿಯಾಗಿದೆ.

ವಾಟ್ಸಾಪ್  ಮತ್ತು ಫೇಸಬುಕ್ ಮೂಲಕ ಯುವತಿಯರನ್ನು , ಗೃಹಿಣಿಯರನ್ನು ಪರಿಚಯ ಮಾಡಿಕೊಂಡು ವಂಚಿಸುತ್ತಿದ್ದ ಯುವಕನನ್ನು ಬಳ್ಳಾರಿ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆದ್ರೆ ಈತನ ಮೊಬೈಲ್ ನೋಡಿದ ಪೊಲೀಸರು ಶಾಕ್ ಆಗಿದ್ದಾರೆ. ಒಂದಲ್ಲಾ, ಎರಡಲ್ಲ ಬರೋಬ್ಬರಿ 50 ಕ್ಕೂ ಹೆಚ್ಚು ಮಹಿಳೆಯರ ಜೊತೆ ಇರೋ ಪೋಟೋಗಳು ಆರೋಪಿ ಮೊಬೈಲ್ನಲ್ಲಿ ಪತ್ತೆಯಾಗಿವೆ. ಕಳೆದ ವಾರ ಗೃಹಿಣಿಯೊಬ್ಬರನ್ನು ಕೆರೆದುಕೊಂಡು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಡ ನೀಡಿದ ದೂರಿನ ಮೇರೆಗೆ  ಅರುಣ್ ಕುಮಾರ ಎನ್ನುವ ಆರೋಪಿಯನ್ನು ಬಂಧಿಸಲಾಗಿತ್ತು.

ಅರುಣ್ ಕುಮಾರ್ ಮೊಬೈಲ್ ನಲ್ಲಿದ್ದ,  ಹತ್ತಾರು ಯುವತಿಯರ ಫೋಟೊ, ವಿಡಿಯೋ ನೋಡಿ ಪರಿಶೀಲಿಸಿದ ಪೊಲೀಸರು  ಆರೋಪಿಯ ಕುಕೃತ್ಯ ಪತ್ತೆ ಹಚ್ಚಿದ್ದಾರೆ.  ಅಲ್ಲದೇ ಪ್ರೇಮಿಸಿದ ಯುವತಿ ಗೃಹಿಣಿಯರಿಂದ ಹಣ ಒಡವೆ ಪಡೆದಿರುವ ಅರುಣ್ ಕುಮಾರ್ ಭರ್ಜರಿ ಮೋಜು ಮಸ್ತಿ ಮಾಡಿದ್ದಾನೆ. ಇಷ್ಟೊಂದು ಅವಾಂತರ ನಡೆದ್ರೂ ಯಾವ ಪ್ರಕರಣದಲ್ಲಿಯೂ ದೂರು ದಾಖಲಾಗಿಲ್ಲ. ಇದೇ ಮೊದಲ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರೋ ಅರುಣ್ ವಿರುದ್ಧ ಇದೀಗ ಎಷ್ಟು ಪ್ರಕರಣ ದಾಖಲಾಗುತ್ತವೋ ಅಥವಾ ಮರ್ಯಾದೆಗೆ ಅಂಜಿದ ಹೆಣ್ಮಕ್ಕಳು ಸುಮ್ಮನೆ ಕೂಡುತ್ತಾರೋ ಗೊತ್ತಿಲ್ಲ. ದೂರು ನೀಡಲು ಮಹಿಳೆಯರು ಮುಂದೆ ಬಂದ್ರೆ ಕೇಸ್ ದಾಖಲಿಸಿ, ನ್ಯಾಯ ಕೊಡಿಸುತ್ತೇವೆ ಅಂತಾರೆ ಬಳ್ಳಾರಿ ಎಸ್ಪಿ.

ಒಟ್ಟಾರೆಯಾಗಿ ಸಾಮಾಜಿಕ ಜಾಲತಾಣದಲ್ಲಿ‌ ಮೋಸ ಹೋಗೋ ಯುವತಿಯರು, ಮತ್ತು ಗೃಹಣಿಯರು ಈ ಪ್ರಕರಣದಿಂದಾಗಿಯಾದರೂ ಹುಷಾರಾಗಿ, ಇದ್ದು ಇಂತಹ ಮೋಸಗಾರರ ಮೋಸದಾಟಕ್ಕೆ ಬಲಿಯಾಗದೇ ಇರಬೇಕೆಂಬುದು ನಮ್ಮ ಆಶಯ.

ಕ್ಯಾಮರಾಮನ್ ರವಿ ಜೊತೆಗೆ ವೆಂಕಟೇಶ್ ಕುಲಕರ್ಣಿ ಟಿವಿ ೫ ಬಳ್ಳಾರಿ

Recommended For You

About the Author: Dayakar

Leave a Reply

Your email address will not be published. Required fields are marked *