‘ನಾನು ಯಾರಿಗೂ ಮೋಸ ಮಾಡಿಲ್ಲ, ರಾಜ್ಯಕ್ಕೆ ಒಳ್ಳೆಯ ಹೆಸರನ್ನು ತಂದು ಕೊಟ್ಟವನು’

ರಾಮನಗರ: ದೊಡ್ಡವರು ಅಧಿಕಾರದಲ್ಲಿ ಇದ್ದಾರೆ. ಅದರ ಬಗ್ಗೆ ಮಾತನಾಡುವುದು ಈಗ ಬೇಡ. ನನಗೆ ಯಾವ ಹುದ್ದೆಯೂ ಬೇಡ ಇರುವುದೇ ಸಾಕು ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕನಕಪುರ ತಾಲೂಕಿನ ಕಬ್ಬಾಳಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಬೆಳಗ್ಗಿನಿಂದ ಯಶವಂತಪುರದಿಂದ ಹಿಡಿದು ಇಲ್ಲಿನ ತನಕ ಓಡಾಡಿದ್ದೇನೆ. ಪಕ್ಷಬೇಧ, ಜಾತಿ ಬೇಧ ಮರೆತು ನನಗೆ ಒಳ್ಳೆಯದಾಗಬೇಕು ಅಂತಾ ಜನತೆ ಹರಸಿದ್ದಾರೆ. ನಾನು ಯಾರಿಗೂ ಮೋಸ ಮಾಡಿಲ್ಲ, ರಾಜ್ಯಕ್ಕೆ ಒಳ್ಳೆಯ ಹೆಸರನ್ನು ತಂದು ಕೊಟ್ಟವನು. ಜನರ ಪ್ರೀತಿ ವಿಶ್ವಾಸ ನಿಮ್ಮದು ಹೀಗೆ ಇರಲಿ. ಜನರ ಅಭಿಮಾನ, ಪ್ರೀತಿಯನ್ನ ತೂಕ, ಅಳತೆ ಮಾಡಲಾಗಲ್ಲ. ಅವರ ವಿಶ್ವಾಸಕ್ಕೆ ಧಕ್ಕೆ ತರದ ರೀತಿ ಅವರ ಹಾಗೂ ನನ್ನ ಗೌರವ ಹೆಚ್ಚಿಸಿಕೊಂಡು ಕೆಲಸ ಮಾಡುತ್ತೇನೆ ಎಂದ್ರು.

ಹಾಗೆಯೇ ಕಬ್ಬಾಳಮ್ಮ ದೇವರ ಸನ್ನಿಧಿಯಲ್ಲಿ ಮಾತನಾಡ್ತೇನೆ. ಚುನಾವಣೆಯಲ್ಲಿ ಇಲ್ಲಿ ಪೂಜೆ ಆಶೀರ್ವಾದ ಪಡೆಯೋದು ನನ್ನ ಕೆಲಸ. ಕೆಲ ಮಾಧ್ಯಮ ನಾಲ್ಕೈದು ಸ್ಟೋರಿ ಮಾಡಿದ್ರಂತೆ. ಈ ಕ್ಷೇತ್ರದಲ್ಲಿ ಹೂವನ್ನ ಇಟ್ಟು ನೋಡಿ ದೇವಿಯ ಶಕ್ತಿ ಬಗ್ಗೆ ತಿಳಿದುಕೊಳ್ಳಲಿ ಎಂದಿದ್ದಾರೆ.

ದೇವಿಯ ಪ್ರತಿಷ್ಠೆ, ದುಃಖ ದುಮ್ಮಾನ ದೂರ ಮಾಡುವ ದೇವಿ. ದೇವಿ ಮೂಲ ದೇವಸ್ಥಾನ ಜೀರ್ಣೋದ್ಧಾರ ಮಾಡೋಕೆ ಸಾಕಷ್ಟು ಚರ್ಚೆ ಆಯ್ತು. ದೇವಸ್ಥಾನ ಮುಟ್ಟಲು ಅನೇಕರು ಹಿಂದೇಟು ಹಾಕಿದ್ರು. ಕೆಲವರು ಮಾತು ಕೊಟ್ರೆ ಮಾತಿಗೆ ನಿಲ್ಲಬೇಕು. ನಾನು ಅದರ ಬಗ್ಗೆ ಈಗ ಮಾತನಾಡಲ್ಲ. ಕೆಲವರು ಜೈಲಿಗೆ ಹೋಗಿ ಬಂದಿದ್ದಾರೆ ಕೆಲವರು ಅಲ್ಲೇ ಇದ್ದಾರೆ. ಹೊಸ ಪೊಲೀಸ್ ಅಧಿಕಾರಿಗೆ ಜಿಲ್ಲೆಯ ಶಕ್ತಿ ಗೊತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ನಾನು ಯಾವ ಯುದ್ದ ಗೆದ್ದಿಲ್ಲ. ಪ್ರೀತಿ ವಿಶ್ವಾಸವನ್ನ ತಡೆಯೋಕೆ ಸಾಧ್ಯಾನಾ..? ಜನರ ಪ್ರೀತಿ ಸ್ವೀಕರಿಸಬೇಕು, ಮಾನವೀಯತೆ ಸ್ವೀಕರಿಸಬೇಕು. ಸಂಸ್ಕೃತಿ ಉಳಿಸಬೇಕು ಅದಕ್ಕೆ ನಾನು ಬದ್ದನಾಗಿದ್ದೇನೆ. ಕೆಂಪೇಗೌಡ -ಗೌರಮ್ಮ ನನಗೆ ಜನ್ಮ ಕೊಟ್ಟಿದ್ದಾರೆ. ರಾಜ್ಯದ ಜನ, ಕ್ಷೇತ್ರದ ಜನರು ನನ್ನನ್ನ ಮಗನಂತೆ ಸಾಕಿದ್ದಾರೆ. ಬಾಲ್ಯದಲ್ಲಿ ಸಣ್ಣತಪ್ಪು ನಡೆದಿರಬಹುದು. ಇವತ್ತು ಚುನಾವಣೆಗೆ ಮತ ಕೇಳೋಕ್ಕೆ ಬರಲಿಲ್ಲ, ಕಬ್ಬಾಳಮ್ಮನ ದರ್ಶನಕ್ಕೆ ಬಂದಿದ್ದೇನೆ ಎಂದರು.

Recommended For You

About the Author: Dayakar

Leave a Reply

Your email address will not be published. Required fields are marked *