ಹರಿಣಗಳ ಮೇಲೆ ಟೀಮ್ ಇಂಡಿಯಾ ಭರ್ಜರಿ ಸವಾರಿ..! ಮೊದಲ ಇನ್ನಿಂಗ್ಸ್​ನಲ್ಲಿ ಆಫ್ರಿಕಾ​​ ಆರಂಭಿಕ ಆಘಾತ

ರಾಂಚಿ: ಹರಿಣಗಳ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಎರಡನೇ ದಿನ ಕೂಡ ಮೇಲುಗೈ ಸಾಧಿಸಿದೆ. ಎರಡನೇ ದಿನದಾಟದ ಪಂದ್ಯದಲ್ಲಿ ಕೊಹ್ಲಿ ಸೈನ್ಯ ಹರಿಣಗಳ ಮೇಲೆ ಹೇಗೆ ಸವಾರಿ ಮಾಡಿದೆ.

ಎರಡನೇ ದಿನದಾಟದ ಪಂದ್ಯದಲ್ಲಿ ಬ್ಯಾಟಿಂಗ್ ಮುಂದುವರೆಸಿದ ಹಿಟ್​ಮ್ಯಾನ್ ರೋಹಿತ್ ಶರ್ಮಾ ಹಾಗೂ ಉಪನಾಯಕ ಅಜಿಂಕ್ಯ ರಹಾನೆ ಹರಿಣಗಳ ಮೇಲೆ ಸವಾರಿ ಮಾಡಿದರು. ಮೊದಲ ದಿನ ಅಜೇಯ 83 ರನ್​ಗಳಿಸಿದ್ದ ರಹಾನೆ ಎರಡನೇ ದಿನ ಬೌಂಡರಿಗಳ ಸುರಿಮಳೆಗೈದು 169ನೇ ಎಸೆತದಲ್ಲಿ ಶತಕ ಸಿಡಿಸಿ ಅಂತಾರಾಷ್ಟ್ರೀಯ ಟೆಸ್ಟ್ ಸರಣಿಯಲ್ಲಿ ರಹಾನೆ 11ನೇ ಶತಕ ಸಿಡಿಸಿದ ಸಾಧನೆ ಮಾಡಿದರು.

ಜೊತೆಗೆ ರಹಾನೆ ಮೂರು ವರ್ಷಗಳ ಬಳಿಕ ತವರಿನಲ್ಲಿ ಶತಕ ಸಿಡಿಸಿದ್ದು, 12 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಇಬ್ಬರು ಮುಂಬೈ ಬ್ಯಾಟ್ಸ್​ಮನ್​ಗಳು ಶತಕ ಸಿಡಿಸಿದ್ದಾರೆ. 2007ರಲ್ಲಿ ಮುಂಬೈ ಬ್ಯಾಟ್ಸ್​ಮನ್​ಗಳಾದ ಸವ್ಯಸಾಚಿ ಸಚಿನ್ ತೆಂಡೂಲ್ಕರ್ ಮತ್ತು ವಾಸೀಮ್ ಜಾಫರ್ ಬಾಂಗ್ಲಾ ವಿರುದ್ಧ ಶತಕ ಸಿಡಿಸಿದ್ದರು. ನಂತರ ರಹಾನೆ ಲೆಂಡೆ ಅವರ ಎಸೆತಕ್ಕೆ ವಿಕೆಟ್​ ಕೀಪರ್ ಕ್ಲಾಸಿನ್​ಗೆ ಕ್ಯಾಚ್ ನೀಡಿ 192 ಬಾಲ್​ಗಳಲ್ಲಿ 115 ರನ್​ ಕಲೆಹಾಕಿ ಹೊರ ನಡೆದರು.

ಆಲ್​ರೌಂಡರ್ ರವೀಂದ್ರ ಜಡೇಜಾ ಸಾಥ್ ಪಡೆದ ರೋಹಿತ್ ಆರಂಭದಲ್ಲೆ ರಗಡ್ ಬ್ಯಾಟಿಂಗ್ ಮಾಡಿ, ಮೂಲೆ ಮೂಲೆಗೆ ಬೌಂಡರಿಗಳ ಸುರಿಮಳೆಗೈದರು. ನಂತರ ವೇಗಿ ಲುಂಗಿ ಗಿಡಿ ಎಸೆತದಲ್ಲಿ ಚೆಂಡನ್ನು ಸಿಕ್ಸರ್​ ಅಟ್ಟುವ ಮೂಲಕ ರೋಹಿತ್ ದ್ವಿಶತಕ ಸಿಡಿಸಿದರು. 212ರನ್ ಗಳಿಸಿ ಮುನ್ನಗುತ್ತಿದ್ದ ರೋಹಿತ್ ರಬಾಡಾಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು.

ರೋಹಿತ್ ಔಟ್​ ಆಗುತ್ತಿದ್ದಂತೆ ತಂಡದ ಜವಾಬ್ದಾರಿ ಹೊತ್ತ ಆಲ್​ರೌಂಡರ್ ರವೀಂದ್ರ ಜಡೇಜಾ ಅರ್ಧ ಶತಕ ಸಿಡಿಸಿ ತಂಡದ ಸ್ಕೋರ್ ಹೆಚ್ಚಿಸಿದರು. ಜೊತೆಗೆ ಕತ್ತಿ ವರಸೆ ತೋರಿಸಿದ ಜಡೇಜಾ ಸ್ಟೈಲ್​ಗೆ ಡ್ರೆಸಿಂಗ್ ರೂಮ್​ನಲ್ಲಿ ಕುಳಿತ ಕೊಹ್ಲಿ ಕೂಡ ಇದನ್ನು ಸಖತ್ ಎಂಜಾಯ್ ಮಾಡಿದರು.

ಕೊನೆಯಲ್ಲಿ ರವೀಂದ್ರ ಜಡೇಜಾ 51, ವೃದ್ದಿಮಾನ್ ಸಾಹ 24, ಆರ್​.ಅಶ್ವಿನ್​ 14, ಉಮೇಶ್ ಯಾದವ್ 31, ನದೀಮ್ ಅಜೇಯ 1, ಮೊಹ್ಮದ್ ಶಮಿ ಅಜೇಯ 10 ರನ್ ಗಳಿಸಿದ್ದಾಗ ಕ್ಯಾಪ್ಟನ್ ಕೊಹ್ಲಿ ಡಿಕ್ಲೇರ್ ಘೋಷಿಸಿದರು. ಇದರೊಂದಿಗೆ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ 9 ವಿಕೆಟ್ ನಷ್ಟಕ್ಕೆ 497 ರನ್​ಗೆ ಟೀಮ್ ಇಂಡಿಯಾ ಡಿಕ್ಲೇರ್ ಮಾಡಿಕೊಂಡಿತು.

ಇನ್ನು ಮೊದಲ ಇನ್ನಿಂಗ್ಸ್ ಆರಂಭಿಸಿದ ಡುಪ್ಲೆಸಿಸ್ ಪಡೆ ಆರಂಭಿಕ ಆಘಾತ ಅನುಭವಿಸಿತು. ಓಪನರ್ ಡೀನ್ ಎಲ್ಗಾರ್ ರನ್​ ಕಲೆ ಹಾಕದೆ ಶಮಿಗೆ ವಿಕೆಟ್ ಒಪ್ಪಿಸಿದರೆ, ಕ್ವಿಂಟಾನ್ ಡಿ’ಕಾಕ್ 4 ರನ್ ಕಲೆ ಹಾಕಿ ಉಮೇಶ್ ಯಾದವ್​ಗೆ ಬಲಿಯಾದರು. ಮಂಧ ಬೆಳಕಿನ ಕಾರಣ ಪಂದ್ಯವನ್ನು ಮೂರನೇ ದಿನಕ್ಕೆ ಮುಂದೂಡಲಾಯಿತು. ಸೌತ್ ಆಫ್ರಿಕಾ ದಿನದಾಟದ ಅಂತ್ಯಕ್ಕೆ 2 ವಿಕೆಟ್​ ನಷ್ಟ್ಕಕೆ 9 ರನ್​ಗಳಿಸಿ ಸಂಕಷ್ಟದಲ್ಲಿ ಸಿಲುಕಿದೆ.

ಚೇತನ್ ಕಡೂರು ಸ್ಪೋರ್ಟ್ಸ್ ಬ್ಯುರೋ ಟಿವಿ5

Recommended For You

About the Author: Dayakar

Leave a Reply

Your email address will not be published. Required fields are marked *