ಮಾತು ಕೇಳದ ಸುಂದರಿಗೆ ಪ್ರಿಯಕರ ತೋರಿದ್ದ ಸ್ಮಶಾನದ ಕಡೆ ದಾರಿ..!

ಈಕೆ ಹೆಸರು ಭುವಿತಾ.. ಹಾಸನದ ಅರಕಲಗೂಡು ತಾಲೂಕಿನ ಸಂತೆ ಮರೂರು ಗ್ರಾಮದ ನಿವಾಸಿ. ಹಾಸನದಲ್ಲಿ ಡಿಪ್ಲೊಮೊ ಮುಗಿಸಿದ್ದ ಭುವಿತ, 18 ವರ್ಷಕ್ಕೆ ನಂದಿತ್ ಎಂಬ ಹುಡುಗನ ಪ್ರೀತಿ ಮಾಡಿ, ಇದೆ ವಿಷಯಕ್ಕೆ ಸಂಬಂಧಿಸಿದಂತೆ 2014 ರಲ್ಲಿ ಮನೆ ಬಿಟ್ಟು ಬಂದಿದ್ದಳು.

ಆದ್ರೆ ಪ್ರೀತಿಸಿದ ಹುಡುಗನ ಮದುವೆ ಆಗುತ್ತೇನೆ ಎಂದು ಮನೆ ಬಿಟ್ಟು ಬಂದ ಈಕೆ, ಸಿಕ್ಕ ಸಿಕ್ಕ ಹುಡುಗರ ಜೊತೆ ಪ್ರೀತಿ ಅಂತಾ ಸಮಯ ಕಳೆಯುತ್ತಿದ್ದಳು. ಕಳೆದ ಆರು ತಿಂಗಳಿಂದ ಹಾಸನದ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಪುನೀತ್ ಎಂಬಾತನೊಂದಿಗೆ ಪ್ರೀತಿ ಶುರು ಮಾಡಿದ್ದಳು. ಆದರೆ ಇವನ ಜೊತೆ ಪ್ರೀತಿ ನಾಟಕ. ಬೇರೆ ಹುಡುಗರೊಂದಿಗೆ ಸುತ್ತಾಟ. ಇದನ್ನ ಗಮನಿಸಿದ ಪ್ರಿಯಕರ ಹಲವಾರು ಬಾರಿ ವಾರ್ನ್ ಮಾಡಿದ್ರೂ ಪ್ರಯೋಜನ ಆಗಿರಲಿಲ್ಲ . ಕಳೆದ 12 ದಿನಗಳಿಂದ ಹಾಸನದ ಸರಾಯೂ ಹೋಟೆಲ್ ನಲ್ಲಿ ತಂಗಿದ್ದ ಭುವಿತಳ ಮೀಟ್ ಆಗಲು ಹೋದ ಪ್ರಿಯಕರ ಪುನೀತ್, ಹೊರಗೆ ಬರುವಷ್ಟರಲ್ಲಿ ಭುವಿತ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾಳೆ.

ಇನ್ನು ಮೃತ ಭವಿತಳನ್ನ ಪುನೀತ್ ಅತಿಯಾಗಿ ಪ್ರೀತಿ ಮಾಡುತ್ತಿದ್ದು, ಭುವಿತಾಳ ಬುದ್ದಿಗೆ ರೋಸಿ ಹೋಗಿದ್ದ ಪುನೀತ್ ಪದೆ ಪದೆ ಬುದ್ದಿ ಹೇಳಿದ್ರೂ ಪ್ರಯೋಜನ ಆಗದ ಕಾರಣ ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಇಬ್ಬರಿಗೂ ಜಗಳ ನಡೆದಿದೆ. ಕೊನೆಗೆ ಮಾತಿಗೆ ಮಾತು ನಡೆದು, ಜೀವಹರಣ ಮಾಡುವ ಹಂತಕ್ಕೆ ಬಂದಿದೆ.

ನಂತರ ಜೀವಹರಣ ಮಾಡಿ ಆಕೆಯೇ ಜೀವಹರಣ ಮಾಡಿಕೊಂಡಿದ್ದಾಳೆಂದು ಬಿಂಬಿಸಲು ಹೋಟೆಲ್‌ನ ಐದನೇ ಮಹಡಿಯಿಂದ ಭುವೀತಳನ್ನ ತಳ್ಳಿದ್ದಾನೆ. ಯುವತಿ ಬಿದ್ದ ಅವಸರಕ್ಕೆ ಸೊಂಟ ಹಾಗೂ ಬಲಗಾಲು ಮುರಿದಿದ್ದು, ಮೊದಲಿಗೆ ಆಕೆಯೇ ಜೀವಹರಣ ಮಾಡಿಕೊಂಡ ರೀತಿ ಕಂಡರೂ ಪೊಲೀಸರ ತನಿಖೆಯಿಂದ ಜೀವಹರಣ ಮಾಡಿರುವುದು ರೂಜುವಾತಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಹಾಸನದ ಕೆ ಆರ್ ಪುರಂ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದ ಮೂವರು ಆರೋಪಿಗಳ ಬಂಧಿಸಿದ್ದಾರೆ. ಪ್ರಮುಖ ಆರೋಪಿ ಭುವೀತ ಪ್ರಿಯಕರ ತಪ್ಪು ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಪ್ರೀತಿಸುತ್ತಿದ್ದ ಹುಡುಗಿ ಬೇರೆಯವರೊಂದಿಗೆ ಸುತ್ತಾಟ ನಡೆಸಿದ್ದೆ ಇದಕ್ಕೆ ಕಾರಣ ಎನ್ನಲಾಗಿದೆ.

ಒಟ್ಟಾರೆ ಹುಟ್ಟಿದ ಮನೆಗೆ ಕೀರ್ತಿ ತಂದು ಹೋದ ಮನೆಯ ಬೆಳಗಬೇಕಿದ್ದ ಯುವತಿ ದುರಂತ ಅಂತ್ಯ ಕಂಡಿರುವುದು ವಿಪರ್ಯಾಸವೇ ಸರಿ.
ಪ್ರಕಾಶ್, tv5 ಕನ್ನಡ, ಹಾಸನ

Recommended For You

About the Author: Dayakar

Leave a Reply

Your email address will not be published. Required fields are marked *