‘ಯಡಿಯೂರಪ್ಪ ಸಿಎಂ ಆದ ಮೇಲೆ ಹೆಂಗೆ ಬಂತು ಮಳೆ ಅಲ್ವಾ’- ಅಬಕಾರಿ ಸಚಿವ

ಚಿಕ್ಕಬಳ್ಳಾಪುರ: ರಾಜ್ಯ ಬಿಜೆಪಿ ಸರ್ಕಾರ ಸತ್ತು ಹೋಗಿದೆ ಅನ್ನೋ ಹೇಳಿಕೆಗೆ ಸಂಬಂಧಿದಂತೆ ಅಬಕಾರಿ ಸಚಿವ ನಾಗೇಶ್ ಅವರು ಶನಿವಾರ ಪ್ರತಿಕ್ರಿಯಿಸಿದರು.

ತಾಲ್ಲೂಕಿನ ಮಂಡಿಕಲ್ಲು ಗ್ರಾಮದಲ್ಲಿ ಐಟಿಐ ಕಾಲೇಜು ಕಟ್ಟಡ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಪ್ರತಿಪಕ್ಷದ ಲೀಡರ್ ಅಂದ ಮೇಲೆ ಅಪೋಸ್ ಮಾಡೋದೆ ಅವರ ಕೆಲಸ, ದಿನೇಶ್ ಗುಂಡೂರಾವ್ ಹಾಗೆಯೇ ಹೇಳಿರಬಹುದು. ನಾವು ಚೆನ್ನಾಗಿ ಶ್ರದ್ಧೆ ಭಕ್ತಿಯಿಂದ ಮಾಡಿಕೊಂಡು ಹೋಗುತ್ತಾ ಇದ್ದೀವಲ್ಲ ಎಂದು ಅವರು ತಿಳಿಸಿದರು.

ಇನ್ನು ನೆರೆ ಸಂತ್ರಸ್ಥರಿಗೆ ಏನೂ ಕಡಿಮೆಯಾಗಿಲ್ಲ, ದುಡ್ಡು ಬಿಡುಗಡೆಯಾಗಿದೆ. ಪರಿಹಾರ ಕಾರ್ಯಗಳು ನಡೀತಾಯಿವೆ. ಕ್ಯಾಬಿನೆಟ್ ನಿರ್ಧಾರದಂತೆ ಕೆಲಸ ನಡೀತಿದೆ. ದಿನೇಶ್ ಗುಂಡೂರಾವ್ ಹೇಳೊದನ್ನು ನಾನು ಒಪ್ಪೋದಿಲ್ಲ ಎಂದು ಅವರು ನುಡಿದರು.

ಅಷ್ಟೇ ಅಲ್ಲದೇ, ಯಡಿಯೂರಪ್ಪ ಮುಖ್ಯಮಂತ್ರಿಯಾದ ಮೇಲೆ ಹೆಂಗೆ ಬಂತು ಮಳೆ ಅಲ್ವಾ.! ರಾಜ್ಯದಲ್ಲಿ ಉತ್ತಮ ಮಳೆಯಾಗಿ ಸುಭೀಕ್ಷವಾಗಿದೆ ಎಂದು ಮಂಡಿಕಲ್ ಗ್ರಾಮದಲ್ಲಿ ಅಬಕಾರಿ ಸಚಿವ ನಾಗೇಶ್ ಅವರು ಮಾತನಾಡಿದ್ದಾರೆ.

Recommended For You

About the Author: TV5 Kannada

Leave a Reply

Your email address will not be published. Required fields are marked *