ಸಾವರ್ಕರ್ ಯಾವಾಗ ಕುಡಿದಿದ್ರೋ.. ಸಿದ್ದರಾಮಯ್ಯ ಸಾಹೇಬ್ರು ಹೇಳ್ಬೇಕು? – ಸಂಸದ

ಕೋಲಾರ: ವೀರ ಸಾವರ್ಕರ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರ, ಬ್ರಿಟೀಷರ ವಿರುದ್ದ ಹೋರಾಡಿದ ವ್ಯಕ್ತಿಗೆ ಪ್ರಶಸ್ತಿ ಕೊಡುವಲ್ಲಿ ನಮ್ಮದು ಅಭ್ಯಂತರ ಇಲ್ಲ ಎಂದು ಕೋಲಾರದ ಸಂಸದ ಎಸ್ ಮುನಿಸ್ವಾಮಿ ಅವರು ಶನಿವಾರ ಹೇಳಿದ್ದಾರೆ.

ನಗರದಲ್ಲಿಂದು ವೀರ ಸಾವರ್ಕರ್ ಗೆ ಭಾರತ ರತ್ನ ಪ್ರಶಸ್ತಿ ಶಿಪಾರಸು ಹಿನ್ನೆಲೆ ಬಗ್ಗೆ ಮಾತನಾಡಿದ ಅವರು, ಸಂವಿಧಾನ ರಚಿಸಿದ ಅಂಬೇಡ್ಕರ್ ಗೆ ಭಾರತ ರತ್ನ ನೀಡಲು ಬಿಜೆಪಿ ಸರ್ಕಾರ ಬರಬೇಕಿತ್ತು. ಕಾಂಗ್ರೆಸ್ ಈ ಹಿಂದೆ ಯಾರಿಗೆಲ್ಲ ಭಾರತ ರತ್ನ ಕೊಟ್ಟಿದೆ ಅಂತ ನನಗೆ ಗೊತ್ತಿದೆ ಎಂದರು.

ಸಾವರ್ಕರ್ ಅವರಿಗೆ ಭಾರತ ರತ್ನ ಕೊಟ್ಟರೆ, ಶಿವಕುಮಾರ ಸ್ವಾಮಿಗಳಿಗೆ ಭಾರತ ರತ್ನ ಕೊಡಬೇಕೆಂದು ರಾಜ್ಯದ ಶಾಸಕರು, ಸಂಸದರು, ಜನಪ್ರತಿನಿಧಿಗಳು ಒತ್ತಡ ಹಾಕಿದ್ದು, ಮುಂದಿನ ದಿನಗಳಲ್ಲಿ ಅದೂ ನೆರವೇರವುತ್ತದೆ ಎಂದು ಅವರು ತಿಳಿಸಿದರು.

ಅಲ್ಲದೇ ಸಾವರ್ಕರ್ ಬಗ್ಗೆ ಸಿದ್ದರಾಮಯ್ಯ ವ್ಯಂಗ್ಯ ವಿಚಾರ ಬಗ್ಗೆ ಪ್ರತಿಕ್ರಿಯೇ ನೀಡಿದ ಅವರು, ಸಾವರ್ಕರ್ ಯಾವಾಗ ಕುಡಿದಿದ್ರೋ ನಮಗಂತೂ ಗೊತ್ತಿಲ್ಲ. ಸಿದ್ದರಾಮಯ್ಯ ಅವರು ಕಣ್ಣಾರೆ ಕಂಡಿದ್ರೆ ಅವರನ್ನೇ ಕೇಳಿ? ಎಂದು ಸಂಸದ ಎಸ್ ಮುನಿಸ್ವಾಮಿ ಅವರು ಹೇಳಿದ್ದಾರೆ.

 

Recommended For You

About the Author: Dayakar

Leave a Reply

Your email address will not be published. Required fields are marked *