ಸಿದ್ದರಾಮಯ್ಯ ಮೇಲೆ ಐಟಿ ರೇಡ್ ಆದ್ರೆ, ನಿಮ್ಮ ಗತಿ ಅಷ್ಟೇ..! ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ

ಮೈಸೂರು: ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಜನರಿಗೆ ಅವರು ಅರ್ಥವಾಗಿರಲಿಲ್ಲ. ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಮೇಲೆ ಜನ ಅವರನ್ನು ಅರ್ಥ ಮಾಡಿಕೊಂಡರು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೇಳಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ವಿಪಕ್ಷ ನಾಯಕರಾದ ಮೇಲೆ ಕರ್ನಾಟಕದ ಎಲ್ಲ ಭಾಗದಿಂದ ಪ್ರತಿಕ್ರಿಯೆ ಬಂದಿದೆ. ಕಾಂಗ್ರೆಸ್ ಒಳ್ಳೆಯ ತೀರ್ಮಾನ ಕೈಗೊಂಡಿದೆ ಎಂದು ಅಭಿನಂದನೆ ಹೇಳುತ್ತಿದ್ದಾರೆ ಎಂದರು.

ಚುನಾವಣೆಯಲ್ಲಿ ಜನ ಅಭಿವೃದ್ಧಿ ನೋಡಿ ಮತ ಹಾಕಿಲ್ಲ. ಕೆಲವರಿಗೆ ಯಾವುದು ದೊಡ್ಡ ವಿಚಾರ ಎಂದು ಗೊತ್ತೆ ಆಗಲಿಲ್ಲ. ಲಿಂಗಾಯತ ಧರ್ಮದ ವಿಚಾರ, ಟಿಪ್ಪು ಜಯಂತಿ, ಸದಾಶಿವ ಆಯೋಗದ ವಿಚಾರವನ್ನೇ ದೊಡ್ಡ ವಿಚಾರ ಎಂದು ಬಿಂಬಿಸಿದರು. ಇವೇಲ್ಲ ದೊಡ್ಡ ವಿಚಾರಗಳಾ? ಜನರ ಬದುಕಿಗೆ ಇವುಗಳಿಂದ ಸಂಬಂಧ ಇದೆಯಾ? ಎಂದು ಗುಂಡೂರಾವ್​ ತಮ್ಮ ಆಕ್ರೋಶ ಹೊರಹಾಕಿದರು.

ಬಿಜೆಪಿ ಅವರು ಚುನಾವಣೆ ಸಮಯದಲ್ಲಿ ಸುಮ್ಮನೆ ಸುಳ್ಳು ಪ್ರಚಾರ ಮಾಡಿ ಜನರ ತಲೆ ಕೆಡಿಸಿತು. ಮೈತ್ರಿ ಸರ್ಕಾರವನ್ನು ಬಿಳಿಸಿ ಕುತಂತ್ರದಿಂದ ಬಿಜೆಪಿಯವರು ಅಧಿಕಾರಕ್ಕೆ ಬಂದರು. ಇದೆನ್ನೆಲ್ಲ ನೋಡಿದ ಜನರು ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಬಿಜೆಪಿ ಅವರು ಕಾಂಗ್ರೆಸ್ ನಾಯಕರ ಮೇಲೆ ಐಟಿ, ಇಡಿ ಸಂಚು ಮಾಡಿದೆ ಎಂಬ ವಿಚಾರಕ್ಕೆ ಮಾತನಾಡಿದ ಅವರು, ಇತ್ತೀಚಿಗೆ ಸಿದ್ದರಾಮಯ್ಯನವರ ಮೇಲೂ ಕೇಂದ್ರ ಐಟಿ ಚೂಬಿಡಲು ಸಂಚನ್ನು ರೂಪಿಸುತ್ತಿದೆ. ಮೋದಿ, ಅಮೀತ್ ಷಾ ಇಬ್ಬರು ಸಿದ್ದರಾಮಯ್ಯರನ್ನು ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ. ಆ ಪ್ರಯತ್ನ ಮಾಡಿದ್ರೆ ನಿಮಗೆ ಗತಿ ಕಾಣಿಸಬೇಕಾಗುತ್ತದೆ ಎಂದು ಗುಂಡೂರಾವ್ ಅವರು ಮೋದಿ, ಅಮೀತ್ ಶಾ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ಈಗ ಯಡಿಯೂರಪ್ಪ ಅವರು ಅಸಹಾಯಕರಾಗಿದ್ದಾರೆ. ಏನು ಕೇಳಿದರು ದುಡ್ಡಿಲ್ಲ, ದುಡ್ಡಿಲ್ಲ ಅಂತಾರೆ. ಅವರು ಅಸಹಾಯಕತೆ ತೋರುತ್ತಿದ್ದಾರೆ. ಅಧಿಕಾರ ನಡೆಸಲು ನಿಮಗೆ ಸಾಧ್ಯವಾಗಲಿಲ್ಲ ಎಂದರೆ ಸಿಎಂ ಸ್ಥಾನ ಬಿಟ್ಟು ಹೋಗಿ. ನಮ್ಮವರಿಗೆ ದುಡ್ಡು ಹೇಗೆ ತರಬೇಕು ಎಂಬುದು ಗೊತ್ತು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ.

Recommended For You

About the Author: Dayakar

Leave a Reply

Your email address will not be published. Required fields are marked *