ಕಾಲಿನಿಂದ ಸೆಕ್ಯೂರಿಟಿ ಗಾರ್ಡ್ ಕಿವಿ ಜಜ್ಜಿ, ಅಮಾನವೀಯ ರೀತಿ ವರ್ತನೆ..!

ಬೆಂಗಳೂರು: ಬೆಂಗಳೂರಿನಲ್ಲಿ ಸೆಕ್ಯುರಿಟಿ ಏಜೆನ್ಸಿ ಮಾಲೀಕ ಸೆಕ್ಯುರಿಟಿ ಗಾರ್ಡ್‌ಗೆ ಹಿಗ್ಗಾಮುಗ್ಗಾ ಥಳಿಸಿದ್ದು, ಮಾನವೀಯತೆ ಇಲ್ಲದವನ ರೀತಿ ವರ್ತಿಸಿದ್ದಾನೆ.

ಸೆಕ್ಯುರಿಟಿ ಗಾರ್ಡ್‌ನನ್ನು ಮನಬಂದಂತೆ ಥಳಿಸಿದ್ದಲ್ಲದೇ, ಆತನಿಗೆ ಕಾಲಿನಿಂದ ಒದ್ದು, ಕಿವಿಗೆ ಕಾಲಿನಿಂದ ಜಜ್ಜಿ ಹಲ್ಲೆ ನಡೆಸಲಾಗಿದೆ. ಸೆಕ್ಯುರಿಟಿ ಏಜೆನ್ಸಿ ಮುಖ್ಯಸ್ಥ ಮೊಹ್ಮದ್ ಸಲೀಂ ಖಾನ್ ಎಂಬಾತ ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿದ್ದು, ಯುವಕ ನಾನೇನು ತಪ್ಪು ಮಾಡಿಲ್ಲ. ನನ್ನನ್ನು ಬಿಟ್ಟುಬಿಡಿ ಎಂದು ಗೋಗರೆದರೂ ಬಿಡದೇ ಥಳಿಸಿದ್ದಾನೆ.

ಕಳ್ಳತನ ಮಾಡಿರುವ ಶಂಕೆ ಉಂಟಾದ ಹಿನ್ನೆಲೆ, ಮುಖ್ಯಸ್ಥ ಹಲ್ಲೆ ನಡೆಸಿದ್ದಾನೆನ್ನಲಾಗಿದ್ದು, ಥಳಿಥದ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಹೆಚ್.ಎಸ್.ಆರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Recommended For You

About the Author: Dayakar

Leave a Reply

Your email address will not be published. Required fields are marked *