ಕುಮಾರಸ್ವಾಮಿ ರಾಜಕೀಯ ನಿವೃತ್ತಿ ಮಾಡದೇ ಇರೋದಕ್ಕೆ ಕೊಟ್ರು ದೊಡ್ಡ ಕಾರಣ!

ಮಂಡ್ಯ: ನನಗೆ ಅಧಿಕಾರ ಮುಖ್ಯ ಅಲ್ಲ, ನಾನು ಎಷ್ಟು ದಿನ ಸಿಎಂ ಆಗಿದ್ದೆ ಎಂಬುದು ಮುಖ್ಯ ಅಲ್ಲ, ಜನರಿಗೆ ಸಹಾಯ ಮಾಡೋದು ಮುಖ್ಯ ಎಂದು ಹೆಚ್.ಡಿ ಕುಮಾರಸ್ವಾಮಿ ಅವರು ಸೋಮವಾರ ಹೇಳಿದರು.

ಮಂಡ್ಯ ಜಿಲ್ಲೆಯ ಮಹದೇಶ್ವರಪುರ ಗ್ರಾಮದ ದೇವಾಲಯದ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿಂದು ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್ಡಿಕೆ ಅವರು, ನಾನು ಸಿಎಂ ಆಗಲು ಮಂಡ್ಯ ಜನರ ಋಣ ಹೆಚ್ಚಿದೆ. ಏಳಕ್ಕೆ ಏಳು ಸೀಟನ್ನು ಮಂಡ್ಯ ಜನ ಗೆಲ್ಲಿಸಿಕೊಟ್ಟರು. ಮಂಡ್ಯ ಜನ ನನ್ನನ್ನ ಮನೆಯ ಮಗನ ರೀತಿ ಇಷ್ಟ ಪಡುತ್ತಾರೆ ಎಂದು ಅವರು ತಿಳಿಸಿದರು.

ಇನ್ನು ನಾನು ಸಿಎಂ ಆಗಿದ್ದ ಅವಧಿಯಲ್ಲಿ ಬೆಳಗಾವಿ ರೈತರ ಮೂರು ಲಕ್ಷ ಕುಟುಂಬದ ಸಾಲಮನ್ನಾ ಮಾಡಿದೆ. ನಾನು ಅಲ್ಲಿನ ಜನ ಜೆಡಿಎಸ್​​ಗೆ ಮತ ಹಾಕಲ್ಲ ಅಂತ ಯೋಚನೆ ಮಾಡಲಿಲ್ಲ, ನನ್ನ ಆತ್ಮೀಯರು ನನ್ನ ಬಿಟ್ಟು ಹೋಗುತ್ತಿದ್ದಾರೆ. ರಾಜಕೀಯ ನಿವೃತ್ತಿ ಬಗ್ಗೆ ಯೋಚನೆ ಮಾಡುತ್ತಿದ್ದೆ. ಆದರೆ, ನನ್ನ ನಂಬಿರೋ ಜನರಿಗೋಸ್ಕರ ಇನ್ನು ಇದ್ದೀನಿ ಎಂದರು.

ಅಲ್ಲದೇ ಸುತ್ತೂರು ಶ್ರೀಗಳ ಫೋನ್ ಟ್ಯಾಪಿಂಗ್ ಮಾಡಿ ನಾನು ರಾಜಕೀಯ ಮಾಡೋಕಾಗುತ್ತಾ(?) ಸುತ್ತೂರು ಶ್ರೀಗಳು, ನಿರ್ಮಲಾನಂದ ಶ್ರೀಗಳು ಫೋನ್​ ಟ್ಯಾಪಿಂಗ್ ಆಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್​ ಶಾಸಕ ಹೆಚ್.ಡಿ ಕುಮಾರಸ್ವಾಮಿ ಅವರು ಸುತ್ತೂರು ಶ್ರೀಗಳ ಎದುರೇ ಸ್ಪಷ್ಟನೆ ನೀಡಿದರು.

Recommended For You

About the Author: TV5 Kannada

1 Comment

  1. ಜನ ನೀವು huttuvudakke ಮೊದಲು ಇದ್ದರು, ಈಗಲೂ ಇದ್ದಾರೆ, ಮುಂದೆ ಸಹಾ ಇರುತ್ತಾರೆ, ಸುಮ್ಮನೆ ಸಿನಿಮಾ ಡೈಲಾಗ್ ಯಾಕೆ ನೇರವಾಗಿ ಹೇಳಿ ಮನುಷ್ಯರ ರಕ್ತದ ರುಚಿ ನೋಡಿದ ಹುಲಿ, Rajakiya ದಿಂದ ಅಧಿಕಾರ, ಹಣ ಆಸ್ತಿ ಸುಲಭವಾಗಿ ಮಾಡ ಬಹುದು, ಅದನ್ನು ಉಳಿಸಿಕೊಳ್ಳಲು, beleslu ಐಷಾರಾಮಿ ಜೀವನ ಮಾಡಲು ಅಧಿಕಾರ ಬಿಡುವುದಿಲ್ಲ ಇದು surya nashtae ಸತ್ಯ.

Leave a Reply

Your email address will not be published. Required fields are marked *