ಯಾಕೋ ಗೊತ್ತಿಲ್ಲ.. ಮೊದಲಿದ್ದ ಯಡಿಯೂರಪ್ಪ ಈಗಿಲ್ಲ…!

ಬೆಂಗಳೂರು: ಯಾಕೋ ನನಗೆ ಗೊತ್ತಿಲ್ಲ ಮೊದಲಿದ್ದ ಯಡಿಯೂರಪ್ಪ ಈಗಿಲ್ಲ.  ಅವರು ಈಗ ಮೆತ್ತಗಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶನಿವಾರ ಸಿಎಂ ಅವರನ್ನು ಕಾಲೆಳೆದರು.

ಅಧಿವೇಶನದಲ್ಲಿ ಮಾತನಾಡಿದ ಅವರು, ನೀವೆಲ್ಲ ಸೇರಿ ಯಡಿಯೂರಪ್ಪ ಅವರನ್ನು ಮೆತ್ತಗೆ ಮಾಡಿದ್ದೀರಿ. ಯಡಿಯೂರಪ್ಪ ಗುಡುಗಿದರೆ ಎಂಬ ಹಿಂದೆ ಮಾತಿತ್ತು. ಈಗ ಯಡಿಯೂರಪ್ಪ ಗುಡುಗು ಇಲ್ಲ ಸಿಡಿಲು ಇಲ್ಲ. ನೀವು ಇಷ್ಟು ಮೆತ್ತಗಾಗಬಾರದು ಎಂದು ಸಿದ್ದರಾಮಯ್ಯ ಅವರು ಕಿಚಾಯಿಸಿದರು.

ಈ ಬಗ್ಗೆ ಮಾತನಾಡಿದ ಜೆ.ಸಿ ಮಾಧುಸ್ವಾಮಿ ಅವರು, ಸಿದ್ದರಾಮಯ್ಯ ಅವರು ಯಡಿಯೂರಪ್ಪ ಅವರನ್ನು ಮೆತ್ತಗೆ ಮಾಡಿದ್ದು. ಗಟ್ಟಿಯಾಗಿರಲು ನೀವು ಬಿಡಬೇಕಲ್ಲ? ಎಂದರು. ಇದೇ ವಿಷಯಕ್ಕೆ ದನಿಗೂಡಿಸಿದ ಬಸವರಾಜ ಬೊಮ್ಮಾಯಿ ಅವರು, ಸಿದ್ದರಾಮಯ್ಯ ಅವರು ಈ ಹಿಂದೆ ಜೆಡಿಎಸ್​ನಲ್ಲಿದ್ದಾಗ ರೆಬೆಲ್ ಸ್ಟಾರ್ ಆಗಿದ್ದೀರಿ, ಆಗ ಗಡ್ಡ ಬಿಟ್ಟು ಖಡಕ್ ಆಗಿದ್ದೀರಿ. ಈಗ ಕಾಂಗ್ರೆಸ್ ಬಂದ ಮೇಲೆ ರೆಬೆಲ್ ಕಮ್ಮಿಯಾಯ್ತು ಎಂದು ಕಿಚಾಯಿಸಿದರು. ಇದಕ್ಕೆ ಸಿದ್ದರಾಮಯ್ಯ ಮಾತನಾಡಿ ಆಗಾದ್ರೆ ಗಡ್ಡ ಬಿಟ್ಟರೆ ರೆಬೆಲ್ ಅಂದ್ರೆ, ಮತ್ತೆ ಗಡ್ಡ ಬಿಡೋಣ ಎಂದರು.

Recommended For You

About the Author: Dayakar

Leave a Reply

Your email address will not be published. Required fields are marked *