ಶಿವಣ್ಣನ ಬಗ್ಗೆ ಇಲ್ಲಿದೆ ನೋಡಿ ಹೊಸ ವಿಷ್ಯ..!

ಅಭಿಮಾನಿಗಳ ಪಾಲಿಗೆ ಕೋಹಿನೂರು ವಜ್ರ , ದೊಡ್ಮನೆಯ ದೊಡ್ಡ ಮಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಸಹಾಯದ ವಿಚಾರದಲ್ಲಿ ಇವರದ್ದು ಎತ್ತಿದ ಕೈ. ತನ್ನನ ನಂಬಿದವರನ್ನು , ದೇಹಿ ಎಂದು ಬೇಡಿದವರನ್ನು ಎಂದಿಗೂ ಕೈ ಬಿಡುವವರಲ್ಲ.  ಸಹಾಯ ಮಾಡಿ ಅದನ್ನು ಪ್ರಚಾರ ಗಿಟ್ಟಿಸಿ ಕೊಳ್ಳುವ ಗೀಳು ಇವರಿಗಿಲ್ಲ.

ಇದಕ್ಕೀಗ ಒಂದು ಬೆಸ್ಟ್ ಎಗ್ಸಾಂಪಲ್ ಸಿಕ್ಕಿದೆ. ಸೋಷಿಯಲ್ ಮಿಡಿಯಾದಲ್ಲಿ ಶಿವಣ್ಣನ ಸಹಾಯ ಧರ್ಮವನ್ನು ಸಾರಿ ಸಾರಿ ಹೇಳುತ್ತಿದೆ.  ದಾರಿಯಲ್ಲಿ ಹೋಗುತ್ತಿದ ವಯಸಾದವರೊಬ್ಬರಿಗೆ ಶಿವಣ್ಣ ಸಹಾಯ ಮಾಡುತ್ತಿರುವುದು ಫೋಟೋವೊಂದು ವೈರಲ್ ಆಗಿದೆ.

ದಾರಿ ಹೊಕರೊಬ್ಬರು ಶಿವಣ್ಣನ ಕಾರ್ ಪಕ್ಕ ಬಂದು ಬೇಡುತ್ತಿದ್ದಾಗ ಶಿವಣ್ಣ ತನ್ನ ಜೇಬಿನಲ್ಲಿದ ಅಷ್ಟು ಹಣವನ್ನು ಸಹಾಯ ಮಾಡಿದ್ದಾರೆ. ಆ ಸಂದರ್ಭವನ್ನು ಅಪರಿಚಿತರೊಬ್ಬರು ಫೋಟೋ ಹೊಡೆದು ಸ್ನೇಹಿತರೊಬ್ಬರಿಗೆ ಕಳುಹಿಸಿದ್ದಾರೆ. ಅದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಶಿವಣ್ಣ ಮಾಡಿರುವ ಅನೇಕ ಅನೇಕ ಸಹಸ್ರಾರು ಸಾಹಯದ ಕಥೆ ಇಂಡಸ್ಟ್ರಿಗೆ ಗೊತ್ತು. ಕೆಲವರು ಹೇಳುತ್ತಾರೆ ಇನ್ ಕೆಲವರು ಮರೆತು ಮೌನವಾಗುತ್ತಾರೆ. ಆದರೆ ಎಂದಿಗೂ ಶಿವಣ್ಣ ಆಗಲಿ ಅಥವಾ ದೊಡ್ಮನೆಯ ಕಲಾವಿದರಾಗಿ ಕೊಟ್ಟಿದನ್ನು ಹೇಳುವುದಿಲ್ಲ, ಉಪಕಾರವನ್ನು ಮರೆಯೋದಿಲ್ಲ. ಶಿವಣ್ಣನ ಡೈ ಹಾರ್ಡ್ ಫ್ಯಾನ್ಸ್​​ಗಳಿಗೆ ಈ ಒಂದು ಫೋಟೋ ದಿಲ್ ಖುಷ್ ಮಾಡಿರುವುದಂತು ಸುಳ್ಳಲ್ಲ.

Recommended For You

About the Author: Sushmitha T S

Leave a Reply

Your email address will not be published. Required fields are marked *