ಪತ್ನಿ-ಮಕ್ಕಳಿಗೆ ಟಾರ್ಚರ್ ಕೊಡ್ಬೇಡಿ : ರಮೇಶ್ ಈ ರೀತಿ ಹೇಳಿದ್ದೇಕೆ..?

ಬೆಂಗಳೂರು: ಡಾ. ಪರಮೇಶ್ವರ್ ಅವರ ಆಪ್ತ ಕಾರ್ಯದರ್ಶಿ ರಮೇಶ್ ಸಾವಿಗೆ ಶರಣಾಗಿದ್ದಾನೆ . ರಮೇಶ್ ಇಂದು ಬೆಳಗಿನ ಜಾವವಷ್ಟೇ ಐಟಿ ವಿಚಾರಣೆಯಿಂದ ಬಿಡುಗಡೆ ಹೊಂದಿದ್ದ. ಅಷ್ಟರಲ್ಲೇ ಈತ  ಜ್ಞಾನಭಾರತಿ ಕ್ಯಾಂಪಸ್ ನ ಮರವೊಂದಕ್ಕೆ ಪತ್ರ  ಬರೆದಿಟ್ಟು ಶರಣಾಗಿದ್ದಾನೆ.

ಬೆಳಗಿನ ಜಾವ ಕೆಲ ಪತ್ರಕರ್ತರು ರಮೇಶ್​ಗೆ ಕರೆ ಮಾಡಿ ಪರಮೇಶ್ವರ್​ ಬಗ್ಗೆ ವಿಚಾರಿಸಿದ್ದಾರೆ. ಆಗ ಭಯದಲ್ಲೇ ಮಾತನಾಡಿದ ರಮೇಶ್, ತಾನು ಐಟಿಯಿಂದ ಕಷ್ಟ ಅನುಭವಿಸಿದ್ದೀನಿ. ಹೀಗಾಗಿ  ಶರಣಾಗುತ್ತಿದ್ದೇನೆ ಎಂದು ಹೇಳಿ ಸ್ವಿಚ್ ಆಫ್ ಮಾಡಿಕೊಂಡಿದ್ದ. ಫೋನ್ ಕಿರಿಕಿರಿಗೆ ಹೀಗೆ ಹೇಳಿರಬಹುದು ಎಂದುಕೊಂಡ್ರೂ ಕೆಲ ಹೊತ್ತಿನಲ್ಲೇ ಆತ ಈ ರೀತಿ ಮಾಡಿಕೊಂಡಿರೋದು ಖಚಿತವಾಯ್ತು. ಅವನ‌ ಸಂಬಂಧಿಕರು ಪೊಲೀಸರಿಗೂ  ವಿಷಯ ತಿಳಿಸದೇ ಸ್ನೇಹಿತ, ಸಂಬಂಧಿಗಳ ಮನೆಯಲ್ಲಿ ಹುಡುಕಾಟ ನಡೆಸಿದ್ದರು. ನಂತರ ಮಧ್ಯಾಹ್ನ 12  ಗಂಟೆ ಸಮಯದಲ್ಲಿ ಯೂನಿವರ್ಸಿಟಿಯ ಸಾಯ್ ಕ್ಯಾಂಪಸ್ ನಲ್ಲಿರೋ ಮರಕ್ಕೆ  ಶರಣಾಗಿದ್ದ. ಸ್ಥಳದಲ್ಲಿಯೇ ಆತನ ಕಾರು ಕೂಡ ಸಿಕ್ಕಿದ್ದು ಅದರಲ್ಲಿ ಪತ್ರ ಕೂಡ ಪತ್ತೆಯಾಗಿದೆ.

ಎಲ್ಲರಿಗೂ ನಮಸ್ಕಾರ

ಮೊನ್ನೆಯಿಂದ ನಡೆದ ಐಟಿ ದಾಳಿಯಿಂದ ನಾನು ದಿಗ್ಭ್ರಾಂತನಾಗಿದ್ದೇನೆ. ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಬಡವರು ಬಡವರಾಗಿಯೇ ಉಳಿಯಬೇಕೆಂಬ ಸಂಸ್ಕೃತಿಯಿಂದ ತುಂಬಾ ಬೇಸತ್ತಿದ್ದೇನೆ. ಮಾನ್ಯ ಐಟಿ ಅಧಿಕಾರಿಗಳೇ ನನ್ನ ಪತ್ನಿ, ಮಕ್ಕಳು, ಕುಟುಂಬಕ್ಕೆ ತೊಂದರೆ ಕೊಡಬೇಡಿ. ಸೌಮ್ಯ ನನ್ನನ್ನು ಕ್ಷಮಿಸು. ಮಕ್ಕಳನ್ನು ಚೆನ್ನಾಗಿ ನೋಡಿಕೋ. ಲಕ್ಷ್ಮೀದೇವಿ, ಪದ್ಮಾ, ಸತೀಶ ನಿಮ್ಮೊಂದಿಗೆ ಹುಟ್ಟಿ ನಿಮಗೆ ಸಹಾಯ ಮಾಡಬೇಕೆಂಬ ನನ್ನ ಆಸೆ ಇಂದಿಗೆ ಕಮರಿದೆ. ನನ್ನ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುತ್ತಿರುವ ವಿಎಸ್​ಎಸ್​ ಶಾಲೆಯವರಿಗೆ, ಮುಖ್ಯಸ್ಥರಿಗೆ ಕೃತಜ್ಞನಾಗಿದ್ದೇನೆ. ಅಪ್ಪ, ಅಮ್ಮ ಇಳಿ ವಯಸ್ಸಿನಲ್ಲಿ ನಿಮ್ಮನ್ನು ಸಾಕಬೇಕೆಂದುಕೊಂಡಿದ್ದ ನಾನು ನಿಮ್ಮನ್ನು ಬಿಟ್ಟು ಹೋಗುತ್ತಿದ್ದೇನೆ ಕ್ಷಮಿಸಿ.
ಇಂತಿ ನಿಮ್ಮ ಪ್ರೀತಿಯ ರಮೇಶ್

Recommended For You

About the Author: Dayakar

Leave a Reply

Your email address will not be published. Required fields are marked *