‘ಇಂತಹ ಕೆಟ್ಟ ಕೆಲಸಕ್ಕೆ ಯಾವತ್ತು ವಾಜಪೇಯಿ ಮುಂದಾಗಿರಲಿಲ್ಲ’

ಬೆಂಗಳೂರು: ವಿಧಾನ ಕಲಾಪಕ್ಕೆ ಮಾಧ್ಯಮದವರಿಗೆ ನಿರ್ಬಂಧ ವಿಚಾರಕ್ಕೆ ಸಂಬಂಧಿದಂತೆ ಮಾಜಿ ಸಂಸದ ಮುನಿಯಪ್ಪ ಅವರು ಪ್ರತಿಕ್ರಿಯಿಸಿದರು. ಇದು ನಿಜಕ್ಕೂ ದುರ್ದೈವ. ಮೀಡಿಯಾ ಒಳಗೆ ಬಿಡೋದರಿಂದ ಗಲಾಟೆ ಕಡಿಮೆಯಾಗತ್ತೆ, ಆಗ ಆರೋಗ್ಯಕರ ಚರ್ಚೆ ನಡೆಯಲು ಸಾಧ್ಯ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದಲ್ಲಿಂದು ಮಾತನಾಡಿದ ಅವರು, ಮೋದಿ, ಅಮಿತ್​ ಶಾ ಅವರು ಮಾಧ್ಯಮ ಕಂಟ್ರೋಲ್ ಮಾಡೋದಕ್ಕೆ ಹೋಗುತ್ತಿದ್ದಾರೆ. ಇದು ಬಹಳ ದಿನ ನಡೆಯಲ್ಲ, ನಾನು 28 ವರ್ಷ ಪಾರ್ಲಿಮೆಂಟ್​ನಲ್ಲಿ ಕೆಲಸ ಮಾಡಿದ್ದೇನೆ. ವಾಜಪೇಯಿ ಸರ್ಕಾರವನ್ನೂ ನೋಡಿದ್ದೇನೆ. ವಾಜಪೇಯಿ ಬಹಳ ದೊಡ್ಡ ನಾಯಕ. ಇಂತಹ ಕೆಟ್ಟ ಕೆಲಸಕ್ಕೆ ಯಾವತ್ತು ಅವರು ಮುಂದಾಗಿರಲಿಲ್ಲ, ಅದು ನಿಜವಾದ ರಾಜಕೀಯ ಎಂದು ಅವರು ತಿಳಿಸಿದರು.

ಇನ್ನು ಈ ರೀತಿಯ ರಾಜಕೀಯ ನಾನು ಒಪ್ಪೋದಿಲ್ಲ, ಒಬ್ಬ ದಲಿತರ ಸಂಸ್ಥೆ ಮೇಲೆ ಈ ರೀತಿ ದಾಳಿ ಸರಿಯಲ್ಲ ಎಂದು ಮುನಿಯಪ್ಪ ಅವರು ದಾಳಿ ವಿರುದ್ಧ ಆಕ್ರೋಶ ಹೊರಹಾಕಿದರು. ದಲಿರು ಕಟ್ಟಿ ಬೆಳಿಸಿದ ಸಂಸ್ಥೆಯನ್ನು ಟಾರ್ಗೆಟ್ ಮಾಡಿದ್ದಾರೆ. ಸಹೋದರ ನೋಡಿಕೊಳ್ಳುತ್ತಿದ್ದ ಸಂಸ್ಥೆಯನ್ನು ಪರಮೇಶ್ವರ್​ ಅವರು ಲಿಂಕ್ ಮಾಡಿ ದಾಳಿ ಮಾಡಿದ್ದಾರೆ ಎಂದರು.

ಇನ್ನು ಸೇವಾ ಮನೋಭಾವದಿಂದ ಸ್ವಾತಂತ್ರ ಹೋರಾಟಗಾರರು ಕಟ್ಟಿದ ಸಂಸ್ಥೆ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಾಗಿದೆ. ಸ್ವಾತಂತ್ರ ಹೋರಾಟಗಾರ ಗಂಗಾಧರಯ್ಯ ಕಟ್ಟಿದ ಸಂಸ್ಥೆ ಎಂದು ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು.

Recommended For You

About the Author: TV5 Kannada

Leave a Reply

Your email address will not be published. Required fields are marked *