‘ಗೋ ಬ್ಯಾಕ್‌ ಮೋದಿ’ ಹಿಂದೆ ಪಾಕ್‌ ಕೈವಾಡ..!

ಚೀನಾ: ಎರಡು ದಿನಗಳ ಕಾಲ ಭಾರತಕ್ಕೆ ಅನೌಪಚಾರಿಕ ಭೇಟಿ ನೀಡಿದ್ದ ಚೀನಾ ಅಧ್ಯಕ್ಷ ಅವರ ಪ್ರವಾಸ ಅಂತ್ಯವಾಗಿದ್ದು, ಉಭಯ ದೇಶಗಳ ನಡುವೆ ಮಹತ್ವದ ಮಾತುಕತೆಗಳು ನಡೆದಿವೆ.

ಭಾರತ, ಪಾಕ್‌ ಮತ್ತು ಚೀನಾ ನಡುವಿನ ಬಿಕ್ಕಟ್ಟಿಗೆ ಕಾರಣವಾಗಿರೋ ಕಾಶ್ಮೀರ ವಿಷಯದ ಬಗ್ಗೆ ಮೋದಿ ಮತ್ತು ಜಿನ್‌ಪಿಂಗ್‌ ನಡುವೆ ಯಾವುದೇ ಚರ್ಚೆ ನಡೆದಿಲ್ಲ.

ತಮಿಳುನಾಡಿನ ಮಾಮಲ್ಲಪುರಂನಲ್ಲಿ ಚೀನಾ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ ಮತ್ತು ಮೋದಿ ಮಧ್ಯೆ ಮಾತುಕತೆ ನಡೆಯಿತು. ಚೆನ್ನೈ ಮೂಲಕ ಭಾರತ-ಚೀನಾ ನಡುವಣ ಬಾಂಧವ್ಯದ ಹೊಸ ಯುಗ ಆರಂಭಗೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನಮ್ಮ ನಡುವಣ ಭಿನ್ನಾಭಿಪ್ರಾಯಗಳನ್ನು ವಿವಾದವಾಗಲು ಬಿಡದೆ, ವಿವೇಚನೆಯೊಂದಿಗೆ ಬಗೆಹರಿಸಿಕೊಳ್ಳಲು ನಿರ್ಧರಿಸಿದ್ದೇವೆ. ಕಳೆದ 2 ಸಾವಿರ ವರ್ಷಗಳಲ್ಲಿ ಹೆಚ್ಚು ಬಾರಿ ಜಾಗತಿಕ ಆರ್ಥಿಕ ಶಕ್ತಿಯಾಗಿ ಗುರುತಿಸಿಕೊಂಡಿದ್ದ ಭಾರತ-ಚೀನಾ ಆ ನಿಟ್ಟಿನಲ್ಲಿ ಮತ್ತೆ ಹಳಿಗೆ ಮರಳುತ್ತಿವೆ ಎಂದಿದ್ದಾರೆ.

ಮೋದಿ ಮತ್ತು ಜಿನ್‌ಪಿಂಗ್‌ ನಡುವೆ ಕಾಶ್ಮೀರ ವಿಚಾರದ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಈ ಬಗ್ಗೆ ಮಾಹಿತಿ ನೀಡಿರುವ ಭಾರತದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಜಯ್ ಗೋಖಲೆ, ಕಾಶ್ಮೀರವು ನಮ್ಮ ಆಂತರಿಕ ವಿಚಾರ ಎಂಬ ನಿಲುವಿಗೆ ಬದ್ಧರಾಗಿದ್ದೇವೆ ಎಂದಿದ್ದಾರೆ. ವಾಣಿಜ್ಯ, ರಕ್ಷಣಾ ಸಹಕಾರ, ಭಯೋತ್ಪಾದನೆ ನಿರ್ಮೂಲನೆ ವಿಚಾರವಾಗಿ ಮೋದಿ- ಜಿನ್‌ಪಿಂಗ್ ಮಾತುಕತೆ ನಡೆಸಿದ್ದಾರೆ. ಹವಾಮಾನ ಬದಲಾವಣೆ ಕುರಿತೂ ಚರ್ಚೆ ಆಗಿದೆ. ಜಿನ್‌ಪಿಂಗ್ ಅವರು ಮಾತುಕತೆ ವೇಳೆ ರಕ್ಷಣಾ ಸಹಕಾರ ವಿಚಾರಕ್ಕೆ ಸಂಬಂಧಿಸಿ ಹೆಚ್ಚು ಒತ್ತು ನೀಡಿದ್ದಾರೆ ಎಂದು ಗೋಖಲೆ ತಿಳಿಸಿದ್ದಾರೆ.

ಮುಂದಿನ ಶೃಂಗಸಭೆಗೆ ಚೀನಾಕ್ಕೆ ಬರಬೇಕು ಎಂದು ಮೋದಿಗೆ ಜಿನ್‌ಪಿಂಗ್ ಆಹ್ವಾನ ನೀಡಿದ್ದು, ಮೋದಿ ಮನ್ನಿಸಿದ್ದಾರೆ. ಚೀನಾ ಅಧ್ಯಕ್ಷರ ಜತೆಗಿನ ಶೃಂಗಸಭೆ ಆಯೋಜಿಸಿದ್ದಕ್ಕಾಗಿ ತಮಿಳುನಾಡಿನ ಜನರಿಗೆ ಮತ್ತು ಸರ್ಕಾರಕ್ಕೆ ಮೋದಿ ಧನ್ಯವಾದ ಸಮರ್ಪಿಸಿದ್ದಾರೆ. ಎಂದಿನಂತೆಯೇ ಅವರ ಆತಿಥ್ಯ ಉತ್ತಮವಾಗಿತ್ತು. ರಾಜ್ಯದ ಸೃಜನಶೀಲ ಜನರ ನಡುವೆ ಇರುವುದು ಯಾವತ್ತೂ ಸಂತೋಷದ ವಿಚಾರ. ಮಾಮಲ್ಲಪುರಂನಲ್ಲಿ ಶೃಂಗಸಭೆ ಆಯೋಜಿಸಿದ್ದಕ್ಕೆ ತಮಿಳುನಾಡು ಸರ್ಕಾರಕ್ಕೂ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

ಈ ನಡುವೆ ಮೋದಿ ಮತ್ತು ಜಿನ್‌ಪಿಂಗ್ ಕೊವಲಂನಲ್ಲಿ ಆಯೋಜಿಸಿದ್ದ ಕಲಾಕೃತಿ ಮತ್ತು ಕೈಮಗ್ಗ ಉತ್ಪನ್ನಗಳ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿದ್ದರು. ಸಾಂಪ್ರದಾಯಿಕ ಸೀರೆಯೊಂದರ ಮೇಲೆ ಜಿನ್‌ಪಿಂಗ್‌ ಅವರ ಚಿತ್ರ ಪ್ರಿಂಟ್‌ ಮಾಡಲಾಗಿತ್ತು. ಈ ಸೀರೆಯನ್ನು ಮೋದಿ ಅವರು ಜಿನ್‌ಪಿಂಗ್‌ಗೆ ಗಿಫ್ಟ್‌ ನೀಡಿದರು. ಚೀನಾ ಅಧ್ಯಕ್ಷರಿಗೆ ತಮಿಳುನಾಡಿನ ಸಂಪ್ರದಾಯ ಪರಿಚಯಿಸುವುದಕ್ಕಾಗಿ ಈ ವಸ್ತುಪ್ರದರ್ಶನ ಆಯೋಜಿಸಲಾಗಿತ್ತು.

ಗೋ ಬ್ಯಾಕ್‌ ಮೋದಿ ಅಭಿಯಾನದ ಹಿಂದೆ ಕುತಂತ್ರಿ ಪಾಕ್ ಕೈವಾಡ ಇರೋದು ಬಹಿರಂಗವಾಗಿದೆ. ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ ದ್ವಿಪಕ್ಷೀಯ ಮಾತುಕತೆಗಾಗಿ ತಮಿಳುನಾಡಿನ ಮಾಮಲ್ಲಪುರಂಗೆ ಬರುವುದಕ್ಕೂ ಮೊದಲು ನಿನ್ನೆ ಟ್ವಿಟರ್‌ನಲ್ಲಿ ‘ಗೋ ಬ್ಯಾಕ್‌ ಮೋದಿ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿತ್ತು. ಇದರ ಹಿಂದೆ ಪಾಕಿಸ್ತಾನೀಯರು ಇದ್ದುದು ಎಂಬುದು ಇದೀಗ ಬಯಲಾಗಿದೆ.

ಪಾಕ್‌ನ ಅನೇಕ ಟ್ವಿಟರ್‌ ಹ್ಯಾಂಡಲ್‌ಗಳಿಂದ ‘ಗೋ ಬ್ಯಾಕ್‌ ಮೋದಿ ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವೀಟ್‌ ಮಾಡಲಾಗಿತ್ತು. ಮುಝಮ್ಮಿಲ್ ಅಸ್ಲಾಂ ಎಂಬ ಟ್ವಿಟರ್‌ ಹ್ಯಾಂಡಲ್‌ನಿಂದ, ‘ಗೋ ಬ್ಯಾಕ್‌ ಮೋದಿ ಫೇಸ್‌ಬುಕ್‌ನಲ್ಲಿ ಟ್ರೆಂಡಿಂಗ್ ಆಗಿದೆ. ನಾವೂ ಕೈಜೋಡಿಸೋಣ ಮತ್ತು ಇಮ್ರಾನ್ ಖಾನ್ ಅವರನ್ನು ಅಭಿನಂದಿಸೋಣ ಎಂದು ಟ್ವೀಟ್ ಮಾಡಲಾಗಿತ್ತು. ಈ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಎ ಪ್ಯಾಷನೇಟ್ ಪಾಕಿಸ್ತಾನಿ ಎಂದು ಉಲ್ಲೇಖಿಸಲಾಗಿದೆ. ಇದು ಪಾಕಿಸ್ತಾನದ ಕರಾಚಿಯದ್ದಾಗಿದೆ. ತಮಿಳು ದೇಶದ ಬಗ್ಗೆ ಪಾಕಿಸ್ತಾನಕ್ಕೆ ಪ್ರೀತಿಯಿದೆ, ಗೋಬ್ಯಾಕ್ ಮೋದಿ ಎಂದು ಅಮ್ಮರ್ ಖಾಲೀದ್ ಎಂಬಾತ ಟ್ವೀಟ್ ಮಾಡಿದ್ದಾನೆ. ಆತನ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಉಲ್ಲೇಖಿಸಿದ ಪ್ರಕಾರ ಆತನ ಊರು ಪಾಕ್‌ನ ಬಾಲಾಕೋಟ್‌. ಇದೇ ರೀತಿ ಪಾಕಿಸ್ತಾನದ ಅನೇಕ ಟ್ವಿಟರ್‌ಹ್ಯಾಂಡಲ್‌ಗಳಿಂದ ಟ್ವೀಟ್ ಮಾಡಲಾಗಿದೆ.

Recommended For You

About the Author: Dayakar

Leave a Reply

Your email address will not be published. Required fields are marked *